Fact Check | ಬಾಂಗ್ಲಾ ಬೌಲರ್‌ ಹಸನ್‌ ಮಹಮದ್‌ಗೆ ರೋಹಿತ್‌ ಶರ್ಮಾ ಕಾಲಿನಿಂದ ಒದ್ದಿದ್ದಾರೆ ಎಂಬುದು ಸುಳ್ಳು

“ಹಸನ್ ಮಹಮೂದ್ ಮೈದಾನದಲ್ಲಿ ಸಜ್ದಾ ಮಾಡಲು ಪ್ರಯತ್ನಿಸಿದ್ದ.. ಆದರೆ ದುರದೃಷ್ಟವಶಾತ್ ರೋಹಿತ್ ಶರ್ಮಾ ಅವನನ್ನು ಒದ್ದು ನಿಕಾಲ್,,, ಚಲ್ ಹಟ್ ಎಂದು ಹೇಳಿದ್ರು, ರೋಹಿತ್ ಅವರ ಈ ವರ್ತನೆ ವಿರುದ್ಧ ವಾರ್ತಾ ಭಾರತಿ, ಸಾಣೆಹಳ್ಳಿ ಮಠ ಸೇರಿದಂತೆ ಬಾಂಧವರ ಕೃಪಾಪೋಷಿತ ಜಾತ್ಯತೀತ ವಲಯದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ಈ ಫೋಟೋ ಹಲವರು ವ್ಯಂಗ್ಯಯುತವಾಗಿ ಮತ್ತುಅಶ್ಲೀಲವಾಗಿ ಕೂಡ ಕಮೆಂಟ್‌ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಇದನ್ನು ನಿಜವೆಂದು ನಂಬಿದರೆ, ಮತ್ತೆ ಕೆಲವರು ಇದೇ ಪೋಸ್ಟ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣದ ವಿಡಿಯೋಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇದು ವಿವಿಧ ಧಾರ್ಮಿಕ ಶ್ರದ್ಧೆ ಇರುವವರ ಆಕ್ರೋಶಕ್ಕೆ ಕೂಡ ಕಾರಣವಾಗಿದ್ದು, ಹಲವರು ಈ ಫೋಟೋದ ಸತ್ಯಾಸತ್ಯತೆ ತಿಳಿಯದೆ ತಮಗೆ ಇಷ್ಟ ಬಂದಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಲವರು ಶೇರ್‌ ಮಾಡುತ್ತಿರುವ ಈ ವೈರಲ್‌ ಫೋಟೋವಿನ ಸತ್ಯ ಏನು ಎಂಬನ್ನುಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಈ ವೇಳೆ ನಮಗೆ 20 ಸೆಪ್ಟೆಂಬರ್‌ 2024 ರಲ್ಲಿ ಕ್ರಿಕ್‌ಇಟ್‌ ಎಂಬ ವೆಬ್‌ಸೈಟ್‌ನಲ್ಲಿ ವೈರಲ್‌ ಫೋಟೋವಿನ ಮೂಲ ಆವೃತ್ತಿ ಪತ್ತೆಯಾಗಿದ್ದು, ಅದರಲ್ಲಿ ಬಾಂಗ್ಲಾದೇಶದ 24 ವರ್ಷದ ವೇಗದ ಬೌಲರ್‌ ಹಸನ್‌ ಮಹಮೂದ್‌ ಭಾರತದ ವಿರುದ್ಧದ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಕುರಿತು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ ಹಲವು ಸುದ್ದಿ ಮಾಧ್ಯಮಗಳು ಕೂಡ ಇದೇ ವರದಿಯನ್ನು ಹಂಚಿಕೊಂಡಿರುವುದು ಕಂಡು ಬಂದಿದೆ. ಇದರ ಜೊತೆಗೆ ಹಲವು ಅಧಿಕೃತ ಕ್ರಿಕೆಟ್‌ ಆಧಾರಿತ ಮಾಹಿತಿಯನ್ನು ನೀಡುವ ಸಂಸ್ಥೆಗಳು ಕೂಡ ಇದೇ ಫೋಟೋವನ್ನು ಶೇರ್‌ ಮಾಡಿ ಬೌಲರ್‌ ಹಸನ್‌ ಮಹಮೂದ್‌  ಬೌಲಿಂಗ್‌ ಸಾಮರ್ಥ್ಯದ ಬಗ್ಗೆ ಸಾಕಷ್ಟು ಮೆಚ್ಚುಗೆಯನ್ನು ಕೂಡ ವ್ಯಕ್ತ ಪಡಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಹಸನ್ ಮಹಮೂದ್ ಮೈದಾನದಲ್ಲಿ ಸಜ್ದಾ ಮಾಡಲು ಪ್ರಯತ್ನಿಸಿದ ಕಾರಣಮ ರೋಹಿತ್‌ ಶರ್ಮಾ ಅವರು ಕಾಲಿನಿಂದ ಒದ್ದಿದ್ದಾರೆ ಎಂಬುದು ಸುಳ್ಳಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಈಗ ಇದು ಅಂತರಾಷ್ಟ್ರೀಯ ಸುದ್ದಿಯಾಗಬೇಕಿತ್ತು, ಆದರೆ ಅಂತಹ ಯಾವ ಸುದ್ದಿಗಳು ಕಂಡು ಬಾರದ ಕಾರಣ ಇದೊಂದು ಸುಳ್ಳು ಮಾಹಿತಿಯಾಗಿದೆ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check : ಇತ್ತೀಚೆಗೆ ಲೆಬನಾನ್‌ನಲ್ಲಿ ಸೌರ ಫಲಕಗಳು ಸ್ಪೋಟಗೊಂಡಿವೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *