Fact Check : ಮುಸ್ಲಿಂ ವ್ಯಕ್ತಿ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ನಾಟಕೀಯ ವೀಡಿಯೊ ಹಂಚಿಕೆ

ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವೀಡಿಯೊವನ್ನು ಮಾಡುತ್ತಿರುವ ವ್ಯಕ್ತಿಯು ಈ ಘಟನೆಯ ಕುರಿತು ಮದುವೆಯಾದ ತಂದೆ ಮಗಳನ್ನು ಪ್ರಶ್ನಿಸಿದ್ದಾನೆ.

ಫ್ಯಾಕ್ಟ್‌ ಚೆಕ್‌:

ವೈರಲ್ ವೀಡಿಯೊದಲ್ಲಿ ‘ಕನ್ಹಯ್ಯಾ ಸಿಂಗ್’ ಎಂಬ ಹೆಸರನ್ನು ಕೀವರ್ಡ್‌ ಆಗಿ ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಿದಾಗ  ‘ಕನ್ಹಯ್ಯಾ ಸಿಂಗ್’ ಎಂಬ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ದೊರೆತಿವೆ.

‘ಕನ್ಹಯ್ಯಾ ಸಿಂಗ್’ ಎಂಬ  YouTube ಖಾತೆ  ಲಭಿಸಿದೆ. ಅವರು ಪೂರ್ವನಿಯೋಜಿತವಾಗಿ ಮಾಡಿದ ಕಾಲ್ಪನಿಕ ವೀಡಿಯೊಗಳನ್ನು ಎಚ್ಚರಿಕೆ ಸಂದೇಶದೊಂದಿಗೆ ಹಂಚಿಕೊಂಡಿದ್ದಾರೆ.

ಆದರೆ, ಈ ಚಾನಲ್‌ನಲ್ಲಿ ವೈರಲ್ ವೀಡಿಯೊ ಕಂಡುಬಂದಿಲ್ಲ .ʼಕನ್ಹಯ್ಯಾ ಸಿಂಗ್’ ಎಂಬ ಅವರ ಹೆಸರು ಎಚ್ಚರಿಕೆ ಸಂದೇಶದೊಂದಿಗೆ ವೀಡಿಯೊಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ಎಂದು ಗಮನಿಸಿದಾಗ, ವೈರಲ್ ವೀಡಿಯೋದ ರಚನೆಯ ಕುರಿತು ಅನುಮಾನ ಉಂಟಾಯಿತು. ಹಾಗಾಗಿ ಅವರು ಇತರ ಚಾನಲ್‌ಗಳನ್ನು ಹೊಂದಿದ್ದಾರಾ? ಎಂಬುದನ್ನು ತಿಳಿದುಕೊಳ್ಳಲು ಅವರ ಹೆಸರಿನ ಸುತ್ತ ಬರೆಯಲಾದ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಹುಡುಕಿದಾಗ, ‘ಕನ್ಹಯ್ಯಾ ಸಿಂಗ್ʼ ಎಂಬ ಅವರ ಇನ್ನೊಂದು ಯೂಟ್ಯೂಬ್ ಚಾನೆಲ್ ದೊರೆತಿದೆ.  ಈ ವೈರಲ್‌ ವೀಡಿಯೊವನ್ನು  2024ರ ಸೆಪ್ಟೆಂಬರ್ 7ರಂದು ‘ಕನ್ಹಯ್ಯಾ ಸಿಂಗ್ ಶಾರ್ಟ್ಸ್ ‘ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ವೀಡಿಯೊವನ್ನು ಕೇವಲ ‘ಮನರಂಜನಾ ಉದ್ದೇಶಗಳಿಗಾಗಿʼ ಮಾತ್ರ ರಚಿಸಲಾಗಿದೆ ಎಂದು ಹೇಳಿದ್ದಾರೆ. ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಜನರು ಅದೇ ಚಾನಲ್‌ನ ಇತರ ವೀಡಿಯೊಗಳಲ್ಲಿ ಸಹ ನಟಿಸಿದ್ದಾರೆ ಮತ್ತು ಅವರು ಎಚ್ಚರಿಕೆಯ ಸಂದೇಶಗಳೊಂದಿಗೆ ವೀಡಿಯೊಗಳನ್ನು  ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂಬ ಘಟನೆಯು ಕಾಲ್ಪನಿಕವಾದ ವೀಡಿಯೊವಾಗಿದ್ದೂ, ಇದು ನೈಜ ಘಟನೆಯಾಗಿಲ್ಲ . ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಕೊಳ್ಳುವುದು ಉತ್ತಮ.


ಇದನ್ನು ಓದಿ :


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *