ಇಟಲಿಯಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ, ಇಟಲಿಯ ಹಲವಾರು ನಗರಗಳು ತತ್ತರಿಸಿವೆ. ಬಿರುಸಾದ ನೆರೆಯಿಂದ ಮನೆಗಳು ಕೊಚ್ಚಿ ಹೋಗುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವೀಡಿಯೊವನ್ನು ರಿವರ್ಸ್ ಇಮೇಜ್ ಕೀಫ್ರೇಮ್ ಬಳಸಿಕೊಂಡು ಹುಡುಕಿದಾಗ, ಆಸ್ಟ್ರೇಲಿಯನ್ 10 ನ್ಯೂಸ್ ಫಸ್ಟ್ ಟ್ವೀಟ್ ಲಭಿಸಿದೆ. 2021ರ ಜುಲೈನಲ್ಲಿ 3ರಂದು, 19 ಜನರು ಕಾಣೆಯಾದ ಜಪಾನ್ನ ಅಟಾಮಿಯಲ್ಲಿ ವಿನಾಶಕಾರಿ ಭೂ ಕುಸಿತ ಉಂಟಾಗಿದ್ದು, ಇದು ವೈರಲ್ ವೀಡಿಯೊವನ್ನು ಹೋಲುತ್ತದೆ.
#BREAKING: There are fears for at least 19 people currently missing after a mudslide hit homes in Atami, Japan, west of Tokyo.
Rescue workers are currently underway to search for the missing people . pic.twitter.com/WP1qxtqLdN
— 10 News First (@10NewsFirst) July 3, 2021
ಕೀವರ್ಡ್ಗಳನ್ನು ಬಳಸಿ ಮತ್ತಷ್ಟು ಹುಡುಕಿದಾಗ, ಎಬಿಸಿ ನ್ಯೂಸ್, ಬಿಬಿಸಿ ಮತ್ತು ದಿ ಗಾರ್ಡಿಯನ್ ಸೇರಿದಂತೆ ಅನೇಕ ಮಾಧ್ಯಮ ವರದಿಗಳು ಲಭಿಸಿವೆ. ಇವೆಲ್ಲವೂ 2021ರ ಜುಲೈ 3ರಂದು ಒಂದೇ ರೀತಿಯ ತುಣುಕನ್ನು ಹೊಂದಿರುವ ಅಟಾಮಿ ಭೂ ಕುಸಿತದ ವೀಡಿಯೊಗಳನ್ನು ಹಂಚಿಕೊಂಡಿವೆ.
ವೈರಲ್ ವೀಡಿಯೊವನ್ನುYoutube ಚಾನೆಲ್ VLOGAMESPORTS ಟಿವಿಯಲ್ಲಿ ಹಂಚಿಕೊಂಡಿದೆ. 2021ರ ಜುಲೈ 3ರಂದು ಶೀರ್ಷಿಕೆಯೊಂದಿಗೆ: “ಶಿಜುವೊಕಾ ಜಪಾನ್ನ ಅಟಾಮಿ ನಗರದಲ್ಲಿ ಬೆಳಿಗ್ಗೆ ಭೂ ಕುಸಿತ ಉಂಟಾಗಿ ಸುಮಾರು 20 ಜನರು ಕಾಣೆಯಾಗಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ”. ಆದ್ದರಿಂದ ಈ ವೀಡಿಯೊ ಹಳೆಯದು. ಇದು ಇಟಲಿಯಲ್ಲಿ ಪ್ರಸ್ತುತ ಪ್ರವಾಹ ಉಂಟಾಗಿ ಭೂ ಕುಸಿತ ಸಂಬಂಧಿಸಿಲ್ಲ ಎಂದು ಖಚಿತಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಜಪಾನಿನ ಅಟಾಮಿಯಲ್ಲಿ ಕಾಣಿಸಿಕೊಂಡ ಭೂ ಕುಸಿತವನ್ನು, ಇಟಲಿಯಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ