Fact Check | ಹಿಂದೂ ವ್ಯಕ್ತಿಯೊಬ್ಬ ಉಗುಳಿ ರೊಟ್ಟಿ ತಯಾರಿಸುತ್ತಿದ್ದರು ಎಂಬುದು ಸುಳ್ಳು

” ನೋಡಿ ಈ ಹೋಟೆಲ್‌ನಲ್ಲಿ ರೊಟ್ಟಿಯನ್ನು ಹೇಗೆ ತಯಾರಿಸುತ್ತಿದ್ದಾರೆ ಎಂದು.. ಇದನ್ನು ಯಾವುದೋ ಮುಸಲ್ಮಾನ ತಯಾರಿಸುತ್ತಿರುವುದಲ್ಲ. ಈ ಹೋಟೆಲ್‌ ಹೆಸರು ನೋಡಿ. ಇದು ಹಿಂದೂ ವ್ಯಕ್ತಿಯೊಬ್ಬ ನಡೆಸುತ್ತಿರುವ ಹೋಟೆಲ್‌. ಈಗ ಈ ವ್ಯಕ್ತಿ ರೊಟ್ಟಿ ತಯಾರಿಸುವಾಗ ಅದಕ್ಕೆ ಉಗುಳಿ ತಯಾರು ಮಾಡುತ್ತಿದ್ದಾನೆ. ಈಗ ಹಲವು ಹಿಂದೂಗಳು ಕೂಡ ಆಹಾರಗಳಿಗೆ ಉಗುಳಿ ತಯಾರಿಸಲು ಪ್ರರಾಂಭಿಸಿದ್ದಾರೆ. ಇವರ ವಿರುದ್ಧ ಕ್ರಮ ಯಾವಾಗ?” ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈಗ ಈ ವಿಡಿಯೋವನ್ನು ವಿವಿಧ ಆಯಾಮಗಳಿಂದ ಹಲವರು ವಿವಿಧ ಬರಹಗಳೊಂದಿಗೆ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಮಂದಿ ಹಿಂದೂ ವ್ಯಕ್ತಿಯೇ ರೊಟ್ಟಿಯನ್ನು ಉಗುಳಿ ತಯಾರು ಮಾಡುತ್ತಿದ್ದಾನೆ ಎಂದು ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ. ಹೀಗಾಗಿ ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶದ ಜೊತೆ, ಹಲವು ಗೊಂದಲಗಳನ್ನು ಕೂಡ ಮೂಡಿಸುತ್ತಿದೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 26 ಸೆಪ್ಟೆಂಬರ್ 2024  ETV ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯು ವೈರಲ್ ವೀಡಿಯೊವನ್ನು ಒಳಗೊಂಡಿದ್ದು, ಈ ಘಟನೆಯು ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ತತ್ತಾರಿ ಪಟ್ಟಣದಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಲು ನಾವು ಮುಂದಾದಗ 26 ಸೆಪ್ಟೆಂಬರ್ 2024 ರ ದಿನಾಂಕದ ಯೂಟ್ಯೂಬ್‌ನಲ್ಲಿ Zee TV ಯಿಂದ ಸುದ್ದಿ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ , ಅದರಲ್ಲಿ ಉದ್ಯೋಗಿಯ ಹೆಸರನ್ನು ಶಹಜಾದ್‌ ಎಂದು ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ ಅಂಗಡಿಯ ಹೆಸರು ನರೇಶ್‌ ಎಂದಿದ್ದು ಅದರ ಮಾಲಿಕತ್ವ ಹಿಂದೂ ವ್ಯಕ್ತಿಯ ಬಳಿ ಇದೆ. ಆದರೆ ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿ ಮುಸ್ಲಿಂ ಆಗಿದ್ದು ಆತನ ಪೂರ್ಣ ಹೆಸರು ಹೆಸರು ಮೊಹಮ್ಮದ್‌ ಶಹಜಾದ್ ಎಂದು ತಿಳದು ಬಂದಿದೆ.

ಈ ಕುರಿತು ಉತ್ತರ ಪ್ರದೇಶದ ಪೊಲೀಸ್‌ ವೆಬ್‌ಸೈಟನಲ್ಲಿ ಹುಡುಕಾಟವನ್ನು ನಡೆಸಿದಾಗ ನಮಗೆ FIR  ಕಂಡು ಬಂದಿದ್ದು, ಅದರಲ್ಲಿ ಕೂಡ ಆರೋಪಿ ಮುಸ್ಲಿಂ ಎಂಬುದು ಪತ್ತೆಯಾಗಿದೆ. ಇನ್ನು ಇದರಲ್ಲಿ ಘಟನೆಯ ಸಂಪೂರ್ಣ ವಿವರವನ್ನು ನೀಡಲಾಗಿದ್ದು, ವೈರಲ್‌ ವಿಡಿಯೋದಲ್ಲಿನ ಆರೋಪಕ್ಕೆ ಯಾವುದೇ ರೀತಿಯಾದ ಹುರುಳಿಲ್ಲ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ರೊಟ್ಟಿ ತಯಾರಕರೊಬ್ಬರು ರೊಟ್ಟಿಯ ಮೇಲೆ ಉಗುಳಿದ್ದು, ಹೀಗೆ ಉಗುಳಿದ ವ್ಯಕ್ತಿ ಹಿಂದೂ ಎಂಬುದು ಸುಳ್ಳಾಗಿದೆ. ಹಲವು ಪರಿಶೀಲನೆಗಳ ಬಳಿಕ ವೈಲರ್‌ ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಈತನ ವಿರುದ್ಧ ಈಗಾಗಲೇ ಎಫ್‌ಐಆರ್‌ ಕೂಡ ದಾಖಲಾಗಿದೆ. ಹಾಗಾಗಿ ಯಾವುದೇ ವಿಡಿಯೋಗಳ ಬಗ್ಗೆ ನಿಮಗೆ ಅನುಮಾನ ಕಂಡು ಬಂದರೆ. ಆ ಬಗ್ಗೆ ಒಮ್ಮೆ ಪರಿಶೀಲಿಸಿ ತದ ನಂತರ ಹಂಚಿಕೊಳ್ಳಿ


ಇದನ್ನೂ ಓದಿ : Fact Check : ಗಣೇಶ ಪೂಜೆ ಮಾಡುವಾಗ ಅರ್ಚಕನಿಗೆ ಹೃದಯಘಾತ ಸಂಭವಿಸಿದೆ ಎಂಬದು ನಾಟಕೀಯ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *