ಹೈದರಾಬಾದ್‌ನಲ್ಲಿ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಹೈದರಾಬಾದ್‌ನ ಕೋಕಾಪೇಟ್‌ನಲ್ಲಿ ಹೈಡ್ರಾದಿಂದ ಬಹುಮಹಡಿ ಕಟ್ಟಡವು ನೆಲಸಮವಾಗಿದೆ. HYDRA (Hyderabad Disaster Response and Assets Monitoring and Protection) ಎಂಬ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
2024ರ ಜುಲೈನಲ್ಲಿ, ತೆಲಂಗಾಣದ ಮುಖ್ಯಮಂತ್ರಿಗಳಾದ ಎ. ರೇವಂತ್ ರೆಡ್ಡಿಯವರು ಸರ್ಕಾರಿ ಭೂಮಿಗಳು, ಕೆರೆಗಳು ಮತ್ತು ನಾಲಾಗಳನ್ನು ಅತಿಕ್ರಮಣಗಳಿಂದ ರಕ್ಷಿಸಲು ಹೈಡ್ರಾ (ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ) ರಚನೆಗೆ ನಿರ್ದೇಶನವನ್ನು ನೀಡಿದ್ದಾರೆ . ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಆಧಾರದ ಮೇಲೆ, GHMC, ಜಲ ಮಂಡಳಿ, ವಿಜಿಲೆನ್ಸ್ ಮತ್ತು ಇತರ ಇಲಾಖೆಗಳ ಸಮನ್ವಯದಲ್ಲಿ ಹೈಡ್ರಾ ನಗರ ನಿರ್ವಹಣೆಯ ಕಾರ್ಯವನ್ನು ನಿರ್ವಹಿಸುತ್ತದೆ.
ಹೈಡ್ರಾವನ್ನು 2024ರ ಜುಲೈನಲ್ಲಿ ಸ್ಥಾಪಿಸಲಾಯಿತು. ಅದು ಹೈದರಾಬಾದ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ . ಕಳೆದ ಕೆಲವು ತಿಂಗಳುಗಳಲ್ಲಿ ಅತಿಕ್ರಮಣಗೊಂಡಿದ್ದ ಬಹು ಎಕರೆ ಭೂಮಿಯನ್ನು ಹೈಡ್ರಾ ಹಿಂಪಡೆದಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಹೈಡ್ರಾ ಹೈದರಾಬಾದ್‌ನ ಕೋಕಾಪೇಟ್ ಪ್ರದೇಶದಲ್ಲಿ ಕೆಲವು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದೆ ಎಂದು ವರದಿಯಾಗಿದೆ.
ಫ್ಯಾಕ್ಟ್ ಚೆಕ್:
ಈ ವೈರಲ್ ವೀಡಿಯೊದ ಕುರಿತು Google ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ, 2023ರ ಅಕ್ಟೋಬರ್ 12ರಂದು ಹಂಚಿಕೊಂಡ YouTube ವೀಡಿಯೊ ಲಭಿಸಿದೆ. ಇದನ್ನು ಚೀನಾದಲ್ಲಿ ಕಟ್ಟಡವನ್ನುನೆಲಸಮಗೊಳಿಸಲಾಗಿದೆ ಎಂದು ಹೇಳುವ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವೀಡಿಯೊ, ವೈರಲ್ ವೀಡಿಯೊದ ಅದೇ ತುಣುಕನ್ನು ಹೋಲುತ್ತದೆ.
ವೈರಲ್ ವೀಡಿಯೊ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ 2023ರ ಹಳೆಯ ವೀಡಿಯೊ ಎರಡೂ ಒದನ್ನೊಂದು ಹೋಲುತ್ತವೆ ಮತ್ತು ಒಂದೇ ಕಟ್ಟಡ ನೆಲಸಮವಾಗುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ ಎಂದು ನಿಖರವಾಗಿ ತಿಳಿದುಬಂದಿದೆ.
ಈ ವೈರಲ್ ವೀಡಿಯೊ ಕುರಿತು ಮತ್ತಷ್ಟು ಹುಡುಕಿದಾಗ, 2023ರ ಏಪ್ರಿಲ್ 25ರಂದು ಬಿಲಿಬಿಲಿ ಎಂಬ ಚೀನಾದ ವೆಬ್‌ಸೈಟ್‌ನಲ್ಲಿ ಅದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದಲ್ಲಿ ಕಟ್ಟಡವು ನೆಲಸಮವಾಗಿರುವ ಹಳೆಯ ವೀಡಿಯೊವನ್ನು, ಹೈದರಾಬಾದ್‌ನ ಕೋಕಾಪೇಟ್‌ನಲ್ಲಿ ಹೈಡ್ರಾದಿಂದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ