ವಿಶ್ವ ಆರೋಗ್ಯ ಸಂಸ್ಥೆ (WHO) ಹೆಸರಿನಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ “ಕಲಬೆರಕೆ ಹಾಲಿನಿಂದಾಗಿ 2025ರ ವೇಳೆಗೆ ಭಾರತದಲ್ಲಿ ಶೇಕಡಾ 87 ರಷ್ಟು ಜನರು ಕ್ಯಾನ್ಸರ್ ರೋಗಿಗಳಾಗಲಿದ್ದಾರೆ ಎಂದು WHO ಎಚ್ಚರಿಕೆ ನೀಡಿದೆ” ಎಂದು ಉಲ್ಲೇಖಿಸಲಾಗಿದೆ. ಇನ್ನೂ ಕೆಲವರು ಆಕ್ರೋಶಗೊಂಡು ” ಭಾರತವು ವಿಷವನ್ನು ಕುಡಿಯುತ್ತದೆ, ಹಾಲು ಅಲ್ಲ, ಉತ್ಪಾದನೆ 14 ಕೋಟಿ ಲೀಟರ್, ಆದರೆ ಬಳಕೆ 64 ಕೋಟಿ ಲೀಟರ್. ಕಲಬೆರಕೆ ನಿಲ್ಲಿಸದಿದ್ದರೆ, 2025 ರ ವೇಳೆಗೆ 87% ಭಾರತೀಯರು ಕ್ಯಾನ್ಸರ್‌ಗೆ ಒಳಗಾಗುತ್ತಾರೆ.” ಎಂದು ಬರೆದು ಹಂಚಿಕೊಳ್ಳಲಾಗುತ್ತಿದೆ.
ಈ ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿ, ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಮುಂದಿನ ದಿನದಲ್ಲಿ ಹಾಲು ರಹಿತ ಉತ್ಪನ್ನಗಳ ಸೇವನೆ ಉತ್ತಮ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಮುಂದಿನ ದಿನಗಳಲ್ಲಿ ಹಾಲಿನ ಉತ್ಪನ್ನಗಳು ಮತ್ತು ಹಾಲನ್ನು ಬಳಸಬೇಕೆ, ಬೇಡವೇ? ಎಂಬ ಗೊಂದಲ ಸೃಷ್ಟಿಯಾಗಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
दूध नहीं जहर पीता है इंडिया, उत्पादन 14 करोड लीटर और खपत 64 करोड़ लेटर। मिलावट बंद नहीं हुई तो 2025 तक 87% भारतीय होंगे कैंसर के शिकार। देश हित के लिए मौजूदा सरकार को सबसे पहले मिलावट के इस कारोबार को बंद करवाना चाहिए अन्यथा परिणाम भयंकर हो सकते हैं। pic.twitter.com/GOlh5rEhji
— Capt. Ajay Singh Yadav Chairman AICC OBC Congress (@CaptAjayYadav) October 22, 2018
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ನ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ನಾವು ಕೆಲವೊಂದು ಕೀ ವರ್ಡ್ಸ್ ಗಳನ್ನು ಬಳಸಿಕೊಂಡು ಗೂಗಲ್ ನಲ್ಲಿ ಹುಡುಕಾಟವನ್ನು ನಡೆಸಿದವು ಈ ವೇಳೆ ನಮಗೆ ದೈನಿಕ ಭಾಸ್ಕರ್ ಸುದ್ದಿ ತಾಣದಲ್ಲಿ ಆರು ವರ್ಷಗಳ ಹಿಂದೆ ಪ್ರಕಟಗೊಂಡ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ದೇಶದಲ್ಲಿ 68.7 ರಷ್ಟು ಹಾಲು ಮತ್ತು ಅದರಿಂದ ತಯಾರಿಸಿದ ಉತ್ಪನ್ನಗಳಲ್ಲಿ ಕಲಬೆರಕೆ ಇದೆ. 89 ರಷ್ಟು ಉತ್ಪನ್ನಗಳಲ್ಲಿ ಒಂದು ಅಥವಾ ಎರಡು ರೀತಿಯ ಕಲಬೆರಕೆ ಇರುತ್ತದೆ ಎಂದು ಅನಿಮಲ್ ವೆಲ್ಫೇರ್ ಬಾರ್ಡ್ ಸದಸ್ಯ ಮೋಹನ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ. 2025 ರ ವೇಳೆಗೆ ದೇಶದ ಜನಸಂಖ್ಯೆಯ 87 ಪ್ರತಿಶತದಷ್ಟು ಜನರು ಕಲಬೆರಕೆಯಿಂದ ಕ್ಯಾನ್ಸರ್‌ಗೆ ಬಲಿಯಾಗುತ್ತಾರೆ ಎಂದು WHO ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಇಲ್ಲಿ ವಿಚಿತ್ರ ಎಂದರೆ ಈ ವರದಿಯನ್ನು ದೈನಿಕ್ ಭಾಸ್ಕರ್ ಹೊರತು ಪಡಿಸಿ ಇನ್ಯಾವ ಸುದ್ದಿತಾಣವೂ ಪ್ರಕಟಿಸಿಲ್ಲ. ಹೀಗಾಗಿ ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿದೆವು. ಈ ವೇಳೆ ದೈನಿಕ್ ಭಾಸ್ಕರ್ ಪ್ರಕಟಿಸಿದ ಈ ವರದಿ ವೈರಲ್ ಆದ ಹಿನ್ನೆಲೆಯಲ್ಲಿ PIB 18 ಅಕ್ಟೋಬರ್ 2022 ರಂದು ತನ್ನ X ಹ್ಯಾಂಡಲ್‌ನಲ್ಲಿ ವೈರಲ್ ಆಗುತ್ತಿರುವ ಪ್ರತಿಪಾದನೆ ಸುಳ್ಳು ಎಂದು ಪೋಸ್ಟ್ ಮಾಡಿದೆ.
क्या विश्व स्वास्थ्य संगठन ने एडवाइजरी जारी कर कहा है कि भारत में उपलब्ध दूध में मिलवाट के कारण 8 सालों में 87% भारतीयों को कैंसर हो जाएगा❓#PIBFactCheck
▪️ नहीं ‼️
▪️ यह दावा फ़र्ज़ी है।
▪️ @WHO ने ऐसी कोई एडवाइजरी जारी नहीं की है।
🔗https://t.co/F1LYhcWQEn pic.twitter.com/1zXkgpHboH
— PIB Fact Check (@PIBFactCheck) October 18, 2022
ಈ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಸಿದಾಗ WHO ಈ ಹೇಳಿಕೆಯನ್ನು ನಿರಾಕರಿಸುವ ಪತ್ರಿಕಾ ಟಿಪ್ಪಣಿಯನ್ನು ಸಹ ಬಿಡುಗಡೆ ಮಾಡಿದೆ . ಹಾಲು ಅಥವಾ ಹಾಲಿನ ಉತ್ಪನ್ನಗಳಲ್ಲಿನ ಕಲಬೆರಕೆ ವಿಷಯದ ಬಗ್ಗೆ ಸಂಸ್ಥೆಯು ಭಾರತ ಸರ್ಕಾರಕ್ಕೆ ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರೀತಿ ದೇಶದಲ್ಲಿ 68.7 ರಷ್ಟು ಹಾಲು ಮತ್ತು ಅದರಿಂದ ತಯಾರಿಸಿದ ಉತ್ಪನ್ನಗಳಲ್ಲಿ ಕಲಬೆರಕೆ ಇದೆ. 89 ರಷ್ಟು ಉತ್ಪನ್ನಗಳಲ್ಲಿ ಒಂದು ಅಥವಾ ಎರಡು ರೀತಿಯ ಕಲಬೆರಕೆ ಇರುತ್ತದೆ ಹಾಗಾಗಿ 2025 ರ ವೇಳೆಗೆ ದೇಶದ ಜನಸಂಖ್ಯೆಯ 87 ಪ್ರತಿಶತದಷ್ಟು ಜನರು ಕಲಬೆರಕೆಯಿಂದ ಕ್ಯಾನ್ಸರ್‌ಗೆ ಬಲಿಯಾಗುತ್ತಾರೆ ಎಂಬ ಪ್ರತಿಪಾದನೆ ಸುಳ್ಳಾಗಿದೆ.
ಇದನ್ನೂ ಓದಿ : Fact Check | ಗೌತಮ್ ಅದಾನಿ ಹೂಡಿಕೆಯನ್ನು ಉತ್ತೇಜಿಸಿ ಪ್ರಚಾರ ಮಾಡಿದ್ದಾರೆ ಎಂಬ ವಿಡಿಯೋ ನಕಲಿ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ