“ಈ ವಿಡಿಯೋ ನೊಡಿ ಇದನ್ನು ರೀಲ್ಸ್ ಜಿಹಾದ್ ಎನ್ನದೆ ಮತ್ತಿನ್ನೇನು ಹೇಳಬೇಕು, ವೃದ್ಧನೊಬ್ಬ ತನ್ನ ಪಾಡಿಗೆ ತಾನು ಸೈಕಲ್‌ನಲ್ಲಿ ಹೋಗುತ್ತಿದ್ದ, ಇದನ್ನು ಕಂಡು ಹೊಟ್ಟೆ ಉರಿದುಕೊಂಡ ಜಿಹಾದಿಯೊಬ್ಬ ಆ ವೃದ್ಧನ ಮೇಲೆ ಫೋ಼ಮ್ ಅನ್ನು ಎರಚಿದ್ದಾನೆ. ಇಂತಹ ವಿಕೃತ ಕೃತ್ಯಗಳು ಕೇವಲ ಆ ಅಲ್ಪಸಂಖ್ಯಾತರಿಂದ ಮಾತ್ರ ಸಾಧ್ಯ. ಹಿಂದೂಗಳೇ ಒಗ್ಗಟ್ಟಾಗಿ, ಇಲ್ಲದಿದ್ದರೆ ಇವರ ಈ ಕುಕೃತ್ಯಗಳು ಇನ್ನಷ್ಟು ಹೆಚ್ಚಾಗಬಹುದು” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
रील जिहाद
झांसी के नवाबाद थाना क्षेत्र में बाइक सवार रीलबाज ने साइकिल सवार बुजुर्ग के साथ की भद्दी हरकत pic.twitter.com/VYdYJ51E7X
— हम लोग We The People 🇮🇳 (@ajaychauhan41) September 22, 2024
ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ಮುಸ್ಲಿಂ ಸಮುದಾಯದವರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಆ ಫೋ಼ಮ್ ಎರಚಿದ ಯುವಕ ಮುಸ್ಲಿಂ ಎಂದು ಹಂಚಿಕೆಯಾಗಿರುವ ಸಂದೇಶ. ಈ ಸಂದೇಶವನ್ನು ಯಾರೂ ಪರಿಶೀಲನೆ ನಡೆಸದೆ ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
सोसल मीडिया में सुर्खियां बटोरने के लिए बढ़ रहा रील जिहाद !
रील बाज ने अपने शौक के चक्कर में बुजुर्ग के साथ भद्दी हरकत की!
साइकिल सवार बुजुर्ग के चेहरे पर स्प्रे डाल कर वीडियो बनाकर वायरल किया !
नवाबाबाद इलाइट क्षेत्र के चित्रा रोड का मामला#jhansi@jhashipulice@uppolice pic.twitter.com/IozMicbc6a— Jansevak balle patel chitrakoot parody 236🙏🙏🙏🙏 (@Balle23654517) September 22, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ನಿಜವಾಗಿಯೂ ಮುಸಲ್ಮಾನನೆ ಎಂದು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಈ ಕುರಿತು ಯಾವುದಾದರೂ ವರದಿಗಳು ಕಂಡು ಬಂದಿವೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 24 ಸೆಪ್ಟೆಂಬರ್ 2024ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ಆರೋಪಿಯ ಹೆಸರು ವಿನಯ್ ಯಾದವ್ ಎಂದು ತಿಳಿದು ಬಂದಿದ್ದು, ಈತ ಇನ್‌ಸ್ಟಾಗ್ರಾಂ ಪ್ರಭಾವಿ ಎಂದು ತಿಳಿದು ಬಂದಿದೆ.
ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ನಮಗೆ ಝಾನ್ಸಿ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ 22 ಸೆಪ್ಟೆಂಬರ್ 2024ರಂದು ಮಾಡಿದ್ದ ಪೋಸ್ಟ್‌ವೊಂದು ಕಂಡು ಬಂದಿದೆ. ಈ ಪೋಸ್ಟ್‌ನಲ್ಲಿ ನಗರದಲ್ಲಿ ಸೈಕಲ್ ತುಳಿಯುತ್ತಿದ್ದ ವ್ಯಕ್ತಿಯ ಮೇಲೆ ಸ್ಪ್ರೇ ಮಾಡಿದ ಯುವಕನ ಬಂಧನವಾಗಿದೆ. ಈತನ ಹೆಸರು ವಿನಯ್ ಯಾದವ್. ಈತನ ವಿರುದ್ಧ ಈಗ ಕಾನೂನಾತ್ಮಕವಾದ ಕ್ರಮವನ್ನು ಕೈಗೊಳ್ಳಲಾಗಿದೆ, ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.
सड़क पर साइकिल से चलते बुजुर्ग व्यक्ति के चेहरे पर स्प्रे करने वाले युवक को पुलिस द्वारा गिरफ्तार कर की जा रही कार्यवाही के संबंध में पुलिस अधीक्षक नगर की वीडियो बाइट- pic.twitter.com/wBAhjDmIIL
— Jhansi Police (@jhansipolice) September 22, 2024
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ವಿಡಿಯೋದಲ್ಲಿ ಸೈಕಲ್‌ನಲ್ಲಿ ತೆರಳುತಿದ್ದ ವೃದ್ಧನಿಗೆ ಸ್ಪ್ರೇ ಮಾಡಿದ ವ್ಯಕ್ತಿ ಮುಸ್ಲಿಂ ಎಂಬುದು ಸುಳ್ಳು. ಆತನೊಬ್ಬ ಯುಟ್ಯೂಬರ್ ಹಾಗೂ ಇನ್‌ಸ್ಟಾಗ್ರಾಂ ಪ್ರಭಾವಿ, ಆತನ ಹೆಸರು ವಿನಯ್ ಯಾದವ್ ಎಂದು ಝಾನ್ಸಿ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ವೈರಲ್ ವಿಡಿಯೋದೊಂದಿಗೆ ಹಂಚಿಕೊಳ್ಳಲಾದ ಬರಹ ಸಂಪೂರ್ಣವಾಗಿ ಸುಳ್ಳು ನಿರೂಪಣೆಯಿಂದ ಕೂಡಿದೆ. ಇಂತಹ ವಿಡಿಯೋಗಳು ನಿಮಗೆ ಕಂಡು ಬಂದರೆ ಅವುಗಳನ್ನು ಪರಿಶೀಲನೆ ನಡೆಸದೆ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಅಪರಾಧವಾಗಿದೆ.
ಇದನ್ನೂ ಓದಿ : Fact Check | ಲವ್ ಜಿಹಾದ್ ಉತ್ತೇಜಿಸಿ VIP ಸ್ಕೈಬ್ಯಾಗ್ಸ್ ಕಂಪನಿ ಜಾಹೀರಾತು ನೀಡಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.