Fact Check: ನ್ಯೂಯಾರ್ಕ್‌ನ ಹಳೆಯ ವೀಡಿಯೊವನ್ನು ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯಿಂದ ಅಡಗಿರುವ ವ್ಯಕ್ತಿಯ ದೃಶ್ಯಗಳಾಗಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಕ್ಷಿಪಣಿಗಳಿಂದ ತಪ್ಪಿಸಿಕೊಳ್ಳಲು ಇಸ್ರೇಲ್‌ನ ಟೆಲ್ ಅವೀವ್‌ನ ಸುರಂಗದಲ್ಲಿ ಅಡಗಿರುವ ವ್ಯಕ್ತಿಯ ವೀಡಿಯೊ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು “ಇಂದು ಟೆಲ್ ಅವೀವ್‌ನಿಂದ ಹೊರಬಂದ ಹೃದಯವಿದ್ರಾವಕ ಚಿತ್ರಗಳು ಯುವಕನೊಬ್ಬ ಇರಾನಿನ ಬಾಂಬ್ ದಾಳಿಯಿಂದ ಮರೆಯಾಗಬೇಕಾಯಿತು.” ಎಂಬ ಶಿರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್ ಚೆಕ್: ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೋದ ಕೆಲವು ಕೀಫ್ರೇಮ್‌ಗಳಲ್ಲಿ…