ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ (NH) 44ಹೆದ್ದಾರಿಯಿದು. ಶ್ರೀನಗರದ ಹತ್ತಿರದ NH-1 ಎಂಬ ಜಂಕ್ಷನ್‌ನಿಂದ ಪ್ರಾರಂಭವಾಗಿದ್ದು, ಕೇಂದ್ರಾಡಳಿತ ಪ್ರದೇಶದ ಬನಿಹಾಲ್, ಜಮ್ಮು, ಕಥುವಾವನ್ನು 541 ಕಿಮೀ ಉದ್ದದ ಹೆದ್ದಾರಿಯನ್ನು ಸಂಪರ್ಕಿಸುತ್ತದೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ಮತ್ತು ಫೇಸ್‌ಬುಕ್‌ನ ಕೆಲವು ಬಳಕೆದಾರರು ಜಮ್ಮು ಮತ್ತು ಕಾಶ್ಮೀರದಲ್ಲಿ NH 44 ಸಂಪರ್ಕದ ಸೇತುವೆ ಇದು ಎಂದು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವೀಡಿಯೊ ಪೂಟೇಜ್‌ನ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್‌ನ್ನು ಬಳಸಿಕೊಂಡು ಹುಡುಕಿದಾಗ ಹೈಲೈಟ್ಸ್ ಚೀನಾ ಎಂಬ ಖಾತೆಯ YouTube ವೀಡಿಯೊ ಲಭಿಸಿದೆ. ಈ ವೀಡಿಯೊ ವೈರಲ್ ವೀಡಿಯೋವನ್ನು ಹೋಲುತ್ತದೆ. ಈ ಸ್ಥಳವು ‘ಬೈಪಾಂಜಿಯಾಂಗ್ ಸೇತುವೆ’ ಎಂದು ತಿಳಿದುಬಂದಿದೆ.
2021 ರ ಮೇ 27ರಂದು ಪೀಪಲ್ಸ್ ಡೈಲಿ ಎಂಬ ಚೀನಾದ ಫೇಸ್‌ಬುಕ್ ಖಾತೆಯೊಂದರ ಪೋಸ್ಟ್ ನಲ್ಲಿ ಇದೇ ಸೇತುವೆಯ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದೆ. “ಒಟ್ಟು 1,341.4 ಮೀಟರ್ ಉದ್ದ ಮತ್ತು 565.4 ಮೀಟರ್ ಎತ್ತರದೊಂದಿಗೆ, ಬೈಪಾಂಜಿಯಾಂಗ್ ಸೇತುವೆಯು SW ಚೀನಾದ ಯುನ್ನಾನ್ ಮತ್ತು ಗೈಝೌ ಪ್ರಾಂತ್ಯಗಳಲ್ಲಿ ವ್ಯಾಪಿಸಿದೆ. ಈ ಸೇತುವೆಯನ್ನು ವಿಶ್ವದ ಅತಿ ಎತ್ತರದ ಸೇತುವೆ ಎಂದು ಕರೆಯಲಾಗುತ್ತದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವೀಡಿಯೊ ಕುರಿತು ಮತ್ತಷ್ಟು ಹುಡುಕಿದಾಗ, ಟೈಮ್ಸ್ ಆಫ್ ಇಂಡಿಯಾ ಮತ್ತು ಚೀನಾ ಡೈಲಿ ಎಂಬ ವರದಿಗಳು ವೈರಲ್ ವೀಡಿಯೊದಲ್ಲಿ ಕಂಡುಬರುವ ಸೇತುವೆಯನ್ನು ಚೀನಾದ ಬೈಪಾಂಜಿಯಾಂಗ್ ಸೇತುವೆ ಎಂದು ಉಲ್ಲೇಖಿಸಿವೆ. ವರದಿಯ ಪ್ರಕಾರ, ಸೇತುವೆಯು ಬೈಪಾನ್ ನದಿ ಕಣಿವೆಯಿಂದ 565 ಮೀಟರ್ ಎತ್ತರದಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಚೀನಾದ ಸೇತುವೆಯ ವೀಡಿಯೊವನ್ನು, ಜಮ್ಮು ಕಾಶ್ಮೀರದ NH 44ರ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳವುದು ಉತ್ತಮ.
ಇದನ್ನು ಓದಿ:
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.