“ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಾಹನದೊಳಗೆ ಶಿಳ್ಳೆ ಹೊಡೆಯುವ ಮೂಲಕ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಗೆ ಸಂಭ್ರಮಿಸಿದ್ದಾರೆ. ಒಬ್ಬ ಉಗ್ರನ ಹತ್ಯೆಗೆ ಪ್ರಧಾನಿಯೊಬ್ಬರು ಈ ರೀತಿ ಸಂಭ್ರಮಿಸಿದ್ದು ಇದೇ ಮೊದಲು ಮತ್ತು ಈ ರೀತಿಯ ಸಂಭ್ರಮ ಎಲ್ಲಾ ದೇಶದ ಉಗ್ರರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಇನ್ನು ಲೆಬನಾನ್‌ನ ಹಿಜ್ಬುಲ್ಲಾ ಹಾಗೂ ಹಮಾಸ್ ಉಗ್ರರ ಸರ್ವನಾಶಕ್ಕೆ ಕೆಲವೇ ದಿನಗಳು ಬಾಕಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ
नेतन्याहू इतने खुश क्यों हैं?
हसन नसरल्लाह की मौत के बाद की ये वीडियो बताई जा रही है! pic.twitter.com/9SC6dkHcsF
— Panchjanya (@epanchjanya) September 29, 2024
ಈ ವಿಡಿಯೋ ನೋಡಿದ ಹಲವು ಭಾರತೀಯ ಬಲಪಂಥೀಯ ಖಾತೆಗಳು ಮತ್ತು ಬಿಜೆಪಿ ಆರ್‌ಎಸ್‌ಎಸ್ ಬೆಂಬಲಿತ ಖಾತೆಗಳು, ಇದು ಇತ್ತೀಚಿನ ಘಟನೆ ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಈ ಬಗ್ಗೆ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುವ ಮೂಲಕ, ಇಸ್ರೇಲ್ ಪ್ರಧಾನಿಯನ್ನು ಹಾಡಿ ಹೊಗಳಿದ್ದಾರೆ. ಆದರೆ ಈ ವೈರಲ್ ವಿಡಿಯೋದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
Men after wiping entire terrorist leadership🔥
pic.twitter.com/t3FonuhxUS— The Jaipur Dialogues (@JaipurDialogues) September 29, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ 11 ಮಾರ್ಚ್ 2021 ರಂದು ಇಸ್ರೇಲ್ ಔಟ್‌ಲೆಟ್ ಕಿಕರ್‌ನಲ್ಲಿ ಪ್ರಕಟವಾದ ಸುದ್ದಿ ವರದಿಯೊಂದನ್ನು ಕಂಡುಕೊಂಡಿದ್ದೇವೆ.
ಈ ವರದಿಯ ಪ್ರಕಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು 10 ಮಾರ್ಚ್ 2021 ರಂದು ತಮ್ಮ ಕಾರಿನಲ್ಲಿ ಕುಳಿತಿರುವಾಗ ತನ್ನ ಪಕ್ಷದ ಲಿಕುಡ್ ಗೀತೆಯನ್ನು ಶಿಳ್ಳೆ ಹೊಡೆಯುತ್ತಿರುವುದನ್ನು ಹಿಬ್ರು ಭಾಷೆಯಲ್ಲಿ ವರದಿ ಮಾಡಿದೆ. ಬೆಂಜಮಿನ್ ನೆತನ್ಯಾಹು ಅವರು ಕಾರಿನಲ್ಲಿ ಪ್ರಯಾಣಿಸುವಾಗ ತಮ್ಮ ಬೆಂಬಲಿಗರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು ಮತ್ತು 2021 ರಲ್ಲಿ ಇಸ್ರೇಲ್ ನಲ್ಲಿ ನಡೆಯಲಿರುವ ಚುನಾವಣೆಗೆ ಮಾತುಕತೆ ನಡೆಸಿದರು ಎಂಬ ಅಂಶಗಳು ವರದಿಯಲ್ಲಿ ಕಂಡು ಬಂದಿದೆ
ಇನ್ನು ಇದೇ ರೀತಿಯ ವಿಡಿಯೋ 9 ಮಾರ್ಚ್ 2021 ರಂದು ಬೆಂಜಮಿನ್ ನೆತನ್ಯಾಹು ಅವರ ಅಧಿಕೃತ ಫೇಸ್ಬುಕ್ ಪ್ರೊಫೈಲ್ ಮತ್ತು ಟಿಕ್‌ಟಾಕ್‌ನಲ್ಲಿ ಕೂಡ ಕಂಡುಬಂದಿದ್ದು, ಅದರಲ್ಲಿ ಅವರು ಚುನಾವಣೆ ವಿಚಾರಕ್ಕೆ ಸಂಬಂಧ ಪಟ್ಟಂತೆ ತಮ್ಮ ಹಲವು ಬೆಂಬಲಿಗರೊಂದಿಗೆ ಚರ್ಚೆ ನಡೆಸಿದನ್ನು ಕೂಡ ಹಂಚಿಕೊಳ್ಳಲಾಗಿದೆ. ಇದು ದೀರ್ಘ ಅವಧಿಯ ಚರ್ಚೆ ಎಂದು ಕೂಡ ಕೆಲವೊಂದು ವರದಿಗಳಲ್ಲಿ ಕಂಡು ಬಂದಿದೆ. ಹಾಗಾಗಿ ಈ ವೈರಲ್ ವಿಡಿಯೋ 2021ಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ 2021ರದ್ದಾಗಿದ್ದು, ಇದು ಇತ್ತೀಚಿನ ಹಿಜ್ಬುಲ್ಲಾ ನಾಯಕನ ಹತ್ಯೆಗೆ ಬೆಂಜಮಿನ್ ನೆತನ್ಯಾಹು ಅವರು ಸಂಭ್ರಮಿಸಿದ್ದಾರೆ ಎಂಬ ನಿರೂಪಣೆ ಸುಳ್ಳಾಗಿದೆ. ಹಾಗಾಗಿ ಇಂತಹ ವಿಡಿಯೋಗಳು ಕಂಡು ಬಂದರೆ ಅವುಗಳನ್ನು ಪರಿಶೀಲಿಸುವುದು ಉತ್ತಮ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ
ಇದನ್ನೂ ಓದಿ : Fact Check: ತಮಿಳುನಾಡು ಸರ್ಕಾರ ಸುಮಾರು 2 ಸಾವಿರ ಕೆಜಿ ಚಿನ್ನವನ್ನು ರಾಜ್ಯದ ಆದಾಯ ಗಳಿಸಲು ಬಳಸಿಕೊಂಡಿದೆ ಎಂದು ಹಳೆಯ ಸುದ್ದಿ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.