Fact Check: ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಐಷಾರಾಮಿ ಕಾರುಗಳ ಬಳಸಿ ಬ್ರಿಟಿಷರ ವಿರುದ್ಧವೇ ಹೋರಾಡುತ್ತಿದ್ದರು ಎಂಬುದು ಸುಳ್ಳು

ಮಹಾತ್ಮ ಗಾಂಧೀಜಿ

ಮಹಾತ್ಮಾ ಗಾಂಧೀಜಿಯವರ ಕುರಿತಂತೆ ಇತ್ತೀಚೆಗೆ ಸಾಕಷ್ಟು ಸುಳ್ಳು ಸುದ್ದಿಗಳು, ಎಡಿಟೆಡ್‌ ಪೋಟೋಗಳನ್ನು ಬಳಸಿಕೊಂಡು ಗಾಂಧೀಜಿಯವರಿಗೆ ಅವಮಾನ ಮಾಡುವ ಕೆಲಸಗಳು  ಎಗ್ಗಿಲ್ಲದೆ ನಡೆಯುತ್ತಿವೆ. ಗಾಂಧೀಜಿಯವರು ಅನೇಕ ಮಹಿಳೆಯರ ಜೊತೆಗೆ ಸಲುಗೆಯಿಂದ ಇರುವಂತೆ ಪೋಟೋಗಳನ್ನು ತಿರುಚಿ ನಿಜವೆಂದು ಹಂಚಿಕೊಳ್ಳಲಾಗುತ್ತಿದೆ.

ಗಾಂಧೀಜಿಯವರ ಅಹಿಂಸಾ ಮಾರ್ಗದಿಂದ ದೇಶಕ್ಕೆ ಸ್ವಾತಂತ್ಯ ಬಂದಿಲ್ಲ, ಕೆಲವು ಕ್ರಾಂತಿಕಾರಿಗಳ ಬಲಿದಾನಗಳಿಂದ ಸ್ವಾತಂತ್ರ್ಯಗೊಂಡಿತು, ಭಾರತ ಮತ್ತು ಪಾಕಿಸ್ತಾನದ ವಿಭಜನೆಗೆ ಗಾಂಧೀಜಿಯವರು ಕಾರಣ ಹಾಗೂ ಗಾಂಧೀಜಿಯವರು ಮೂಲತಃ ಮುಸ್ಲಿಂ ಹೀಗೆ ನಾನಾ ಬಗೆಯ ವಾದಗಳು, ತಪ್ಪು ಮಾಹಿತಿಗಳನ್ನು ಹಲವರು ನಂಬಿಕೊಂಡು ಪ್ರಚಾರ ಪಡಿಸುತ್ತಿದ್ದಾರೆ. ಈ ರೀತಿ ಗಾಂಧೀಜಿಯವರ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರಲ್ಲಿ ಬಿಜೆಪಿ ಬೆಂಬಲಿಗರು ಪ್ರಮುಖವಾಗಿ ಇರುವುದನ್ನು ನಮ್ಮ ತಂಡ ಗಮನಿಸಿದೆ.

ಪ್ರಸ್ತುತ ಗಾಂಧೀಜಿಯವರು ಕಾರಿನಿಂದ ಇಳಿದು ಬರುತ್ತಿರುವ ಪೋಟೋವೊಂದನ್ನು ಹಂಚಿಕೊಂಡು “ಬ್ರಿಟಿಷರ ವಿರುದ್ಧ ಪ್ರತಿಭಟಿಸಲು ಬ್ರಿಟಿಷ್ ಐಷಾರಾಮಿ ಕಾರನ್ನು ಬಳಸಿದ ವಿಶ್ವದ ಮೊದಲ ಮತ್ತು ಕೊನೆಯ ಕ್ರಾಂತಿಕಾರಿ ಬಾಪು ಗಾಂಧಿ. ಭಗತ್ ಸಿಂಗ್, ಸುಖದೇವ್, ರಾಜಗುರು ಮತ್ತು ಚಂದ್ರಶೇಖರ್ ಆಜಾದ್ ಐಷಾರಾಮಿ ಕಾರುಗಳಲ್ಲಿ ಕುಳಿತು ಧರಣಿ ನಡೆಸುವುದನ್ನು ಇಲ್ಲಿಯವರೆಗೆ ಯಾರಾದರೂ ನೋಡಿದ್ದೀರಾ? ನೀವು ಅದನ್ನು ನೋಡಿದರೆ, ದಯವಿಟ್ಟು ಫೋಟೋವನ್ನು ಹಂಚಿಕೊಳ್ಳಿ!” ಎಂದು ಬರೆದು ಗಾಂಧಿ ಜಯಂತಿಯಾದ್ದರಿಂದ ಇಂದು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಈ ವೈರಲ್ ಪೋಟೋವನ್ನು ಹಂಚಿಕೊಂಡು ಗಾಂಧೀಜಿಯವರನ್ನು ಟೀಕಿಸಿರುವು ಪೋಸ್ಟ್‌ಗಳು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

https://twitter.com/YogeshS44179606/status/1424994399247749122

ಫ್ಯಾಕ್ಟ್‌ ಚೆಕ್:

ವೈರಲ್‌ ಚಿತ್ರದಲ್ಲಿರುವ ಕಾರು ಮಹಾತ್ಮ ಗಾಂಧೀಜಿಯವರದಲ್ಲ ಬದಲಾಗಿ  ಹಿಂದೂಸ್ತಾನ್ ಮೋಟಾರ್ಸ್‌ ಸಂಸ್ಥಾಪಕ, ಗಾಂಧೀಜಿಯ ಆಪ್ತ ಅನುಯಾಯಿಯಾದ ಘನಶ್ಯಾಮ್‌ ದಾಸ್‌ ಬಿರ್ಲಾ ಅವರ ಕಾರಾಗಿದ್ದು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರಿಗೆ ಓಡಾಡುವ ಸಲುವಾಗಿ ಆಗಾಗ ಈ ಕಾರನ್ನು ಒಳಸಲಾಗುತ್ತಿತ್ತು.

ನಾವು ವೈರಲ್ ಪೋಟೋವನ್ನು ಗೂಗಲ್ ರಿವರ್ಸ್‌ ಇಮೆಜ್ ಮೂಲಕ ಹುಡುಕಾಡಿದಾಗ ಈ ಚಿತ್ರವನ್ನು ಅನೇಕರು ಹಂಚಿಕೊಂಡಿರುವುದು ತಿಳಿದು ಬಂದಿದ್ದು. ಜನಸತ್ತ ಎಂಬ ಸುದ್ದಿ ಮಾಧ್ಯಮದವರು ಗಾಂಧೀಜಿಯವರು ಓಡಾಡುತ್ತಿದ್ದ ಈ ಕಾರಿನ ಕುರಿತು ಲೇಖನವೊಂದನ್ನು ಪ್ರಕಟಿಸಿದ್ದು ಅದರಲ್ಲಿ, ” ರಾಷ್ಟ್ರಪಿತ ಮಹಾತ್ಮ ಗಾಂಧಿ ಕೆಲವು ಚಿತ್ರಗಳಲ್ಲಿ ಇಳಿಯುವುದು ಅಥವಾ ಕಾರು ಸವಾರಿ ಮಾಡುವುದನ್ನು ಕಾಣಬಹುದು, ಆದರೆ ಈ ಕಾರುಗಳು ಅವರದ್ದಲ್ಲ. ಮಹಾತ್ಮ ಗಾಂಧಿಯವರು ಆಗಾಗ್ಗೆ ಪ್ಯಾಕರ್ಡ್ 120 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಕಾರಿನ ಮಾಲೀಕರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಕೈಗಾರಿಕೋದ್ಯಮಿ ಘನಶ್ಯಾಮ್ ದಾಸ್ ಬಿರ್ಲಾ ಅವರು. “(ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.)

1924ರಲ್ಲಿ ಉತ್ತರ ಪ್ರದೇಶದ ರ್ಯಾಲಿಯೊಂದಕ್ಕೆ ಗಾಂದೀಜಿಯವರು ಭಾಗವಹಿಸಲು ಬಂದ ಸಂದರ್ಭದ ಪೋಟೋ ಇದಾಗಿದೆ ಎಂದು ನ್ಯೂಸ್‌ 18 ಅವರು ವರದಿ ಮಾಡಿದ್ದು, ಗಾಂಧೀಜಿಯವರು ಬಳಸಿದ ನಾನಾ ಬಗೆಯ ಕಾರುಗಳು ಮತ್ತು ಆ ಕಾರಿನ ಮಾಲಿಕತ್ವದ ಬಗ್ಗೆ “ಗಾಂಧಿ ಜಯಂತಿ 2019: ಭಾರತದಲ್ಲಿ ಮಹಾತ್ಮಾ ಗಾಂಧಿಯವರು ಬಳಸಿದ ಎಲ್ಲಾ ಕಾರುಗಳ ನೋಟ ಇಲ್ಲಿದೆ” ಎಂಬ ಶೀರ್ಷಿಕೆಯಲ್ಲಿ ಅನೇಕ ಮಾಹಿತಿಗಳನ್ನು ನೀಡಿದ್ದಾರೆ.

ಕ್ಯಾರನ್ಡ್‌ಬೈಕ್ ಅವರು ಗಾಂಧೀಜಯಂತಿಗೆ ಶುಭಕೋರಿ ಗಾಂಧೀಜಿಯವರು ಜೀವಿತಾವಧಿಯಲ್ಲಿ ಓಡಾಡಿದ ಅತ್ಯಂತ ಪ್ರತಿಷ್ಠಿತ ಕಾರುಗಳ ಚಿತ್ರಗಳನ್ನು ನೀಡಿದೆ. ಇಲ್ಲಿಯೂ ಸಹ ಈ ಕಾರಿನ ಮಾಲಿಕರು ಉಧ್ಯಮಿ ಘನಶ್ಯಾಮ್‌ ದಾಸ್‌ ಬಿರ್ಲಾ ಎಂದೇ ಉಲ್ಲೇಖಿಸಿರುವುದನ್ನು ನೀವು ನೋಡಬಹುದು.

ಆದ್ದರಿಂದ ಸಧ್ಯ ವೈರಲ್ ಆಗಿರುವ ಚಿತ್ರದಲ್ಲಿ  ಗಾಂಧೀಜಿಯವರು ಬಳಸಿರುವ ಕಾರು ಗಾಂಧೀಯವರ ಆಪ್ತ ಅನುಯಾಯಿ, ರಾಷ್ಟ್ರೀಯವಾದಿ ಉಧ್ಯಮಿ ಮತ್ತು ಹಿಂದುಸ್ತಾನ್ ಮೋಟಾರ್ಸ್‌ ಕಂಪನಿಯ ಸಂಸ್ಥಾಪಕ ಘನಶ್ಯಾಮ್ ದಾಸ್‌ ಬಿರ್ಲಾ ಅವರದಾಗಿದೆ. ಬ್ರಿಟಿಷರ ಕಾರಲ್ಲ.


ಇದನ್ನು ಓದಿ: “ಗುಡ್‌ ಬೈ ಮೆಟಾ ಎಐ” ಎಂಬ ಸಂದೇಶ ಪೋಸ್ಟ್‌ ಮಾಡುವುದರಿಂದ ಮೆಟಾ ಜನರ ವೈಯಕ್ತಿಕ ಡೇಟಾ ಮತ್ತು ಇತರ ಮಾಹಿತಿಯನ್ನು ಬಳಸುವುದನ್ನು ನಿಷೇಧಿಸುತ್ತದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *