ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಬುರ್ಖಾ ಧರಿಸಿರುವ ಕೆಲವು ಮಹಿಳೆಯರು ಭಾರತದ ರಾಷ್ಟ್ರ ಧ್ವಜವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುವುದನ್ನು ಕಾಣಬಹುದು. ಈ ವಿಡಿಯೋ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಳ್ಳಲಾಗುತ್ತಿದೆ. ಇಸ್ರೇಲ್ ಸೇನೆಯಿಂದ ಪಾರಾಗಲು ಪ್ಯಾಲೆಸ್ತೀನ್ ಮಹಿಳೆಯರು ಭಾರತೀಯ ತ್ರಿವರ್ಣ ಧ್ವಜವನ್ನು ಬಳಸುತ್ತಿದ್ದಾರೆ, ಏಕೆಂದರೆ ಇಸ್ರೇಲ್ ಸೇನೆಯು ಭಾರತೀಯರನ್ನು ಕೊಲ್ಲುತ್ತಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ.
हमारे राष्ट्रीय ध्वज 🇮🇳की पावर आप यूक्रेन में देख चुके हैं.अब फिलिस्तीन में देखें💪
फिलिस्तीन के लोग और वहां की महिलाएं हाथ में तिरंगा🇮🇳 लेकर फिलिस्तीन छोड़ रहे हैं क्योंकि इसराइल तिरंगे पर फायर नहीं करता
इजरायल ही नहीं इस समय इस धरती पर किसी देश की हिम्मत नहीं है जो तिरंगे पर… pic.twitter.com/DuU6i24c6f— बिकाश गुप्ता (हिंदू) (@Bikashkkp) October 4, 2024
ಈ ಪೋಸ್ಟ್ ನೋಡಿದ ಹಲವು ಮಂದಿ ವೈರಲ್ ಪೋಸ್ಟ್ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಅಚ್ಚರಿಯನ್ನು ಹುಟ್ಟು ಹಾಕಿದೆ. ಹಲವರು ಇದು ಸುಳ್ಳು ಎಂದು ಪ್ರತಿಪಾದಿಸಿದ್ದು, ವೈರಲ್ ಪೋಸ್ಟ್‌ಗಳು ಅನುಮಾನಗಳನ್ನು ಕೂಡ ಹುಟ್ಟುಹಾಕಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
*हमारे राष्ट्रीय ध्वज की पावर आप यूक्रेन में देख चुके हैं.अब फिलिस्तीन में देखें :– फिलिस्तीन के लोग और वहां की महिलाएं हाथ में तिरंगा लेकर फिलिस्तीन छोड़ रहे हैं क्योंकि इसराइल तिरंगे पर फायर नहीं करता. इजरायल ही नहीं इस समय इस धरती पर किसी देश की हिम्मत नहीं है pic.twitter.com/Lvuxwa7iKd
— vipul (@vipulaviral) October 4, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಅದರ ಮೂಲ ವಿಡಿಯೋವೊಂದು falak_haq120 ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವುದು ಕಂಡು ಬಂದಿದೆ.
ಈ ಪೋಸ್ಟ್‌ನಲ್ಲಿ Arbaeen 2023 ಮತ್ತು ArbaeenWalk 2023 ಎಂಬ ಹಾಷ್‌ಟ್ಯಾಗ್‌ಗಳು ಕಂಡು ಬಂದವು ಈ ಬಗ್ಗೆ ಹುಡುಕಾಟವನ್ನು ನಡೆಸಿದಾಗ ಅಲ್ ಜಜೀರಾ, ಎನ್‌ಡಿಟಿವಿ ಸೇರಿದಂತೆ ಹಲವು ಮಾಧ್ಯಮಗಳ ವರದಿಗಳು ಕಂಡು ಬಂದಿವೆ. ಈ ವರದಿಗಳ ಪ್ರಕಾರ Arbaeen ಎಂಬುದು ನಲವತ್ತು ಅಥವಾ ಹುಸೇನ್ ಅಲಿ ಅವರ ಮರಣ ವಾರ್ಷಿಕೋತ್ಸವದ ನಂತರ ನಲವತ್ತನೇ ದಿನಕ್ಕೆ ಅರೇಬಿಕ್ ಪದವಾಗಿದೆ. ಇರಾಕ್‌ನ ಕರ್ಬಲಾದಲ್ಲಿರುವ ಹುಸೇನ್ ದೇಗುಲಕ್ಕೆ ತೀರ್ಥಯಾತ್ರೆಯೊಂದಿಗೆ ಇದನ್ನು ಗುರುತಿಸಲಾಗಿದೆ. ಪ್ರಪಂಚದಾದ್ಯಂತದ ಶಿಯಾ ಮುಸ್ಲಿಮರಿಗೆ ಇದು ಪ್ರಮುಖ ದಿನವಾಗಿದೆ.
ಸೆಪ್ಟೆಂಬರ್ 8 ರ ಎನ್‌ಡಿಟಿವಿ ವರದಿಯ ಪ್ರಕಾರ “ಭಾರತದಿಂದ ಒಂದು ಲಕ್ಷಕ್ಕೂ ಹೆಚ್ಚು ಶಿಯಾ ಮುಸ್ಲಿಮರು” ಅರ್ಬೈನ್‌ಗಾಗಿ ಕರ್ಬಲಾಕ್ಕೆ ಪ್ರಯಾಣಿಸಿದ್ದಾರೆ, ಇದರಲ್ಲಿ ಹಲವು ಮುಸಲ್ಮಾನರು ಭಾರತೀಯ ಧ್ವಜವನ್ನು ಹೊಂದಿದ್ದರು, ಇಲ್ಲಿ ಭಾರತೀಯ ಮುಸಲ್ಮಾನರ ಅನುಕೂಲಕ್ಕೆ ತಕ್ಕಂತೆ ಟೆಂಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು ಮತ್ತು ಅಲ್ಲಿನ ಹಲವರಿಗೆ ಭಾರತೀಯ ಆಹಾರವನ್ನು ಕೂಡ ನೀಡಲಾಗಿತ್ತು” ಎಂದು ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧಕ್ಕೂ ವೈರಲ್ ವಿಡಿಯೋಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಮೂಲ ವಿಡಿಯೋ ಇರಾಕ್‌ನಲ್ಲಿ ಅರ್ಬೈನ್ ಯಾತ್ರೆಗೆ ಸಂಬಂಧಿಸಿದ್ದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್ ಮತ್ತು ಹಮಾಸ್ ನಡುವಿನ ಇತ್ತೀಚಿನ ಸಂಘರ್ಷವು ಅಕ್ಟೋಬರ್ 7, 2023 ರಂದು ಪ್ರಾರಂಭವಾಯಿತು, ಆದರೆ ವೈರಲ್ ವೀಡಿಯೊ ಅದಕ್ಕೂ ಮುಂಚೆಯೇ ಇಂಟರ್ನೆಟ್‌ನಲ್ಲಿ ಲಭ್ಯವಿದೆ. ಹಾಗಾಗಿ ಪ್ಯಾಲೆಸ್ತೀನ್ ಮಹಿಳೆಯರು ಭಾರತೀಯ ಧ್ವಜವನ್ನು ಹಿಡಿದುಕೊಂಡು ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದು ಸುಳ್ಳು ನಿರೂಪಣೆಯಿಂದ ಕೂಡಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ