ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಕಾಮಿಕೇಜ್ ಡ್ರೋನ್‌ಗಳಿಂದ ಬಾಂಬ್ ಸ್ಫೋಟಗೊಂಡು ಬಸ್ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್:
ಈ ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2022ರ ಜೂನ್ 12ರಂದು BAZ ನ್ಯೂಸ್ ಏಜೆನ್ಸಿಯವರು Facebookನಲ್ಲಿ ಹಂಚಿಕೊಂಡಿರುವ ವೀಡಿಯೊ ಲಭಿಸಿದೆ. “ಟೆಲ್ ಅವಿವ್‌ನ ಸಫೇದ್‌ನ ಕೇಂದ್ರ ಬಸ್ ನಿಲ್ದಾಣದಲ್ಲಿ ದೊಡ್ಡದಾಗಿ ಅಪ್ಪಳಿಸಿದ ಬೆಂಕಿಯು 18 ಬಸ್ಸುಗಳನ್ನು ಸುಟ್ಟುಹಾಕಿದೆ.” ಎಂದು ಅರೇಬಿಕ್ ಭಾಷೆಯಲ್ಲಿ ಬರೆಯಲಾಗಿದೆ. 2022ರ ಜೂನ್ 12ರಿಂದ ಇದೇ ರೀತಿಯ ವೀಡಿಯೊಗಳನ್ನುಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. “ಸಫೆಡ್‌ನ ಕೇಂದ್ರ ನಿಲ್ದಾಣದಲ್ಲಿ ಸುಮಾರು 20 ಬಸ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ…”. ಎಂದು ಹೀಬ್ರೂ ಭಾಷೆಯಿಂದ ಅನುವಾದಿಸಲಾದ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಇಸ್ರೇಲ್‌ನ ಸಫೇದ್ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸುಮಾರು 18 ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ ಎಂಬ ಅನೇಕ ವರದಿಗಳು ದೊರೆತಿವೆ. “ನಗರದ ನಿವಾಸಿಗಳು ಬೃಹತ್ ಸ್ಫೋಟಗಳ ಶಬ್ಧವನ್ನು ಕೇಳಿದ್ದಾರೆಂದು ವರದಿಯಲ್ಲಿ ಉಲ್ಲೇಖವಾಗಿದೆ. 2022ರ ಜೂನ್ 12ರಂದು ಜೆರುಸಲೆಮ್ ವರದಿಯಲ್ಲಿ “ಈ ಕ್ಷಿಪಣಿ ದಾಳಿಯ ಶಬ್ಧದಿಂದ ಅಲ್ಲಿರುವ ನೆರೆಹೊರೆಯ ಜನರು ಭಯದಿಂದ ಎಚ್ಚರಗೊಂಡರು … ಬೆಂಕಿಯ ಘಟನೆಯ ಕುರಿತು ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಉಲ್ಲೇಖವಾಗಿದೆ.
2022ರ ಜೂನ್ 11ರಂದು ಟೈಮ್ಸ್ ಆಫ್ ಇಸ್ರೇಲ್‌ನ ಲೇಖನದಲ್ಲಿ “ಇಸ್ರೇಲ್‌ನ ಸಫೆದ್‌ನಲ್ಲಿ ಶನಿವಾರ ಮುಂಜಾನೆ ಹದಿನೆಂಟು ಬಸ್‌ಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ. ರಕ್ಷಣೆಯ ಹಣ ಪಾವತಿಗಾಗಿ ಕ್ರಿಮಿನಲ್ ಬೇಡಿಕೆಗಳಿಗೆ ಇದು ಸಂಬಂಧಿಸಿದೆ ಎಂದು ಶಂಕಿಸಲಾಗಿದೆ.” ಇಸ್ರೇಲ್ ಮತ್ತು ಇರಾನ್, ಮತ್ತು ಅರಬ್ ಮಿತ್ರರಾಷ್ಟ್ರಗಳ ನಡುವಿನ ವರ್ಷಗಳ ಸುದೀರ್ಘ ಸಂಘರ್ಷದಲ್ಲಿ ಉಲ್ಬಣಗೊಳ್ಳುತ್ತಿರುವ ಇತ್ತೀಚಿನ ಸರಣಿ ದಾಳಿಗಳಿಗೆ ಈ ವೈರಲ್ ವೀಡಿಯೊ ಸಂಬಂಧಿಸಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, 2022ರಲ್ಲಿ ಬಸ್‌ಗಳಿಗೆ ಬೆಂಕಿ ಹಚ್ಚಿ ನಾಶಮಾಡಲಾಗಿರುವ ವೀಡಿಯೊವನ್ನು, ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಕಾಮಿಕೇಜ್ ಡ್ರೋನ್‌ಗಳಿಂದ ಬಾಂಬ್ ಸ್ಫೋಟಗೊಂಡು ಬಸ್ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಪ್ಪಾಗಿ ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವುದಕ್ಕಿಂತ ಮುನ್ನ ಒಮ್ಮೆ ಸತ್ಯಾಂಶವನ್ನು ತಿಳಿದುಕೊಳ್ಳಿ.
ಇದನ್ನು ಓದಿ :
Fact Check : ಬಾಂಗ್ಲಾದೇಶದಲ್ಲಿ ಹಿಜಾಬ್ ಧರಿಸದಿದ್ದಕ್ಕಾಗಿ ಅಮೆರಿಕದ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.