“ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬೈಸಿಕಲ್‌ನಲ್ಲಿ ಮೊಟ್ಟೆಗಳನ್ನು ಸಾಗಿಸುತ್ತಿದ್ದ ವೃದ್ಧನಿಗೆ ಕಿರುಕುಳ ನೀಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಈ ಅಪರಾಧಿಗಳಿಗೆ ಶಿಕ್ಷೆ ಆಗುವವರೆಗೂ ನೀವು ಈ ವಿಡಿಯೋವನ್ನು ಎಲ್ಲೆಡೆ ಶೇರ್ ಮಾಡಿ. ಆ ಬಡಪಾಯಿ ವೃದ್ಧನಿಗೆ ನ್ಯಾಯ ದೊರಕುವಂತೆ ಮಾಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
देखिए कैसे ये आतंकवादी खुले आम आतंक कर रहा है क्या इसपर कोई कार्यवाही नहीं होगी?
क्या ये भड़वे ऐसे किसी गरीब का नुकसान करते रहेंगे ? ये सब का जिम्मेदार कौन?
क्या देश के नेता इसी लिए चुने गए हैं की गरीबों को उनके गुंडे परेशान करें उनका नुकसान करे? #AdvNazneenAkhtar pic.twitter.com/Gimvq0bRaZ
— Adv.Nazneen Akhtar (@NazneenAkhtar23) September 30, 2024
ಈ ವಿಡಿಯೋ ನೋಡಿದ ಹಲವು ಮಂದಿ ಮುಸುಧಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದು, ವಯೋವೃದ್ಧನ ಬಗ್ಗೆ ಕನಿಕರವನ್ನು ವ್ಯಕ್ತ ಪಡಿಸಿ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದು, ವಿಡಿಯೋ ವಿವಿಧ ಆಯಾಮಗಳಲ್ಲಿ ಚರ್ಚೆಗೆ ಒಳಪಡುತ್ತಿದೆ. ಹೀಗೆ ವಿವಿಧ ಅಭಿಪ್ರಾಯಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
देखिए कैसे ये आतंकवादी खुले आम आतंक कर रहा है क्या इसपर कोई कार्यवाही नहीं होगी?
क्या ये भड़वे ऐसे किसी गरीब का नुकसान करते रहेंगे ? ये सब का जिम्मेदार कौन?
क्या देश के नेता इसी लिए चुने गए हैं की गरीबों को उनके गुंडे परेशान करें उनका नुकसान करे? #AdvNazneenAkhtar https://t.co/IWv3Vh0Tds
— Usman Farqaleet (@usmanfarqaleet) October 1, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು . ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಮುಕ್ಲೇಸೂರ್ ಭಾಯಿಜಾನ್ ಹೆಸರಿನ YouTube ಚಾನಲ್‌ನಲ್ಲಿ ವೈರಲ್ ವಿಡಿಯೋವಿನ ಮೂಲ ವಿಡಿಯೋ 09 ಜನವರಿ 2024 ರಂದು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ. ಈ ರೀತಿಯ ಹಲವು ವಿಡಿಯೋಗಳು ಈ ಯುಟ್ಯೂಬ್ ಚಾನಲ್‌ನಲ್ಲಿ ಲಭ್ಯವಿದೆ.
ಇಲ್ಲಿ ಮುಕ್ಲೇಸೂರ್ ಭಾಯಿಜಾನ್ ಹೆಸರಿನ ಯುಟ್ಯೂಬ್ ಚಾನಲ್‌ನಲ್ಲಿ ಸಾಕಷ್ಟು ರೀತಿಯ ನಾಟಕೀಯ ವಿಡಿಯೋಗಳು ಕಂಡು ಬಂದಿದ್ದು, ಹಲವು ಕಿರುಚಿತ್ರಗಳ ವಿಡಿಯೋಗಳು ಕಂಡು ಬಂದಿವೆ. ವೈರಲ್ ವಿಡಿಯೋ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಲು ನಾವು ಅವರ ಫೇಸ್‌ಬುಕ್ ಚಾನಲ್ ಅನ್ನು ಪರಿಶೀಲನೆ ನಡೆಸಿದೆವು ಅದರಲ್ಲಿ ಈ ವಿಡಿಯೋದ ಡಿಸ್ಕ್ರಿಪ್ಷನ್‌ನಲ್ಲಿ ಇದು ಕಿರುಚಿತ್ರ ಎಂಬುದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ವೃದ್ಧರೊಬ್ಬರು ಮಾರಾಟ ಮಾಡುತ್ತಿದ್ದ ಮೊಟ್ಟೆಯನ್ನು ಮುಸುಕುಧಾರಿಗಳು ಒಡೆದು ಹಾಕಿದ್ದಾರೆ ಮತ್ತು ಅವರೊಂದಿಗೆ ರೈಡರ್ ಒಬ್ಬರ ಜಗಳವಾಡಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಶೇರ್ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿ.
ಇದನ್ನೂ ಓದಿ : Fact Check : ಇತ್ತೀಚೆಗೆ ಟೆಲ್‌ಅವಿವ್‌ನ ಬಸ್ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು 2022ರ ವೀಡಿಯೊ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.