ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿಯಾದ ರತನ್ ಟಾಟಾ ಅವರ ನಿಧನದ ನಂತರ, ಅವರು ಬಡ ಮಕ್ಕಳೊಂದಿಗೆ ಊಟ ಮಾಡುತ್ತಿದ್ದಾರೆ ಎಂಬ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಕಪ್ಪು-ಬಿಳುಪು ಫೋಟೋದಲ್ಲಿ ಯುವ ರತನ್ ಟಾಟಾ ನಗರದಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ ಎಂಬ ಚಿತ್ರವನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಚಿತ್ರಗಳಲ್ಲಿ ಹಲವಾರು ಅಸಂಗತೆಗಳು ಕಂಡುಬಂದಿವೆ. ರತನ್ ಟಾಟಾ ಅವರ ಕಣ್ಣುಗಳು, ಕೈಗಳು ವಿರೂಪಗೊಂಡಿವೆ ಮತ್ತು ಚಿತ್ರಗಳಲ್ಲಿ ಎಲ್ಲಾ ವ್ಯಕ್ತಿಗಳ ಮುಖದ ಆವ ಭಾವಗಳು ಅಸ್ವಾಭಾವಿಕ ವಿರೂಪಗಳಲ್ಲಿ ಕಂಡುಬಂದಿವೆ.
ಮತ್ತು ಯುವಕನೊಬ್ಬ ತನ್ನ ಬೈಸಿಕಲ್ನಲ್ಲಿ ಸವಾರಿ ಮಾಡುತ್ತಿರುವ ವೈರಲ್ ಫೋಟೋ ಕಪ್ಪು ಮತ್ತು ಬಿಳಿ ಬಣ್ಣದ್ದಾಗಿದ್ದು, ಎರಡೂ ಚಿತ್ರಗಳನ್ನು AI- (Artificial intelligence) ಪತ್ತೆಹಚ್ಚುವ ಸಾಧನದ ಮೂಲಕ ಹುಡುಕಿದಾಗ ಹೈವ್ AI ಎಂಬ ಚಿತ್ರವು 99.9% AI-ರಚಿತವಾಗಿದೆ ಎಂದು ನಿಖರವಾಗಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಚಿತ್ರಗಳು AI- ರಚಿತವಾಗಿದೆ. ಹಾಗಾಗಿ ಇಂತಹ ಚಿತ್ರಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನು ಓದಿ :
Fact Check: ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೊಂಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.