Fact Check : ಯೋಗಿ ಆದಿತ್ಯನಾಥ್‌ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ ಮುಸ್ಲಿಮರಿಗೆ ಶಿಕ್ಷೆ ನೀಡಿದ್ದಾರೆ ಎಂದು ಪಾಕಿಸ್ತಾನದ ಹಳೆಯ ವಿಡಿಯೋ ಹಂಚಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಜಘಾತುಕ ಶಕ್ತಿಗಳ ವಿರುದ್ದ ಯುದ್ಧವನ್ನೇ ಸಾರಿದ್ದಾರೆ. ತಪ್ಪು ಮಾಡಿರುವ ಮುಸ್ಲಿಂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರಿಂದಾಗಿ “ಬುಲ್ಡೋಜರ್ ಬಾಬಾ” ಎಂದು ಕೆಲವರಿಂದ ಶ್ಲಾಘನೆಗೆ ಒಳಗಾಗಿದ್ದಾರೆ. ಆದಿತ್ಯನಾಥ್‌ ಕಾನೂನುಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸಿದ್ದಾರೆ. ಆದ್ದರಿಂದಾಗಿ ಹೋರಾಟಗಾರರು, ಅಲ್ಪಸಂಖ್ಯಾತರ ವಿರುದ್ಧ ಪಕ್ಷಪಾತದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಪರಾಧ  ಕೃತ್ಯಗಳಲ್ಲಿ ಭಾಗಿಯಾಗಿರುವ ಮುಸ್ಲಿಮರಿಗೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ “ಮುರ್ಗಾ” ಎನ್ನುವ ಶಿಕ್ಷೆಯನ್ನು ವಿಧಿಸಿ ಕಿವಿ ಹಿಡಿಸಿ…

Read More
ಜರ್ಮನ್ ವಿದೇಶಾಂಗ ಸಚಿವ

Fact Check: ದೆಹಲಿ ವಿಮಾನ ನಿಲ್ದಾಣದಲ್ಲಿ ಜರ್ಮನ್ ವಿದೇಶಾಂಗ ಸಚಿವರನ್ನು ಔಪಚಾರಿಕವಾಗಿ ಸ್ವಾಗತಿಸಿಲ್ಲ ಎಂಬುದು ಸುಳ್ಳು

ಜರ್ಮನಿಯ ಚಾನ್ಸಲರ್ ಒಲಾಫ್ ಶೋಲ್ಜ್ ಅಕ್ಟೋಬರ್ 24 ರಿಂದ 26 ರವರೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಅವರೊಂದಿಗೆ ಜರ್ಮನಿಯ ವಿದೇಶಾಂಗ ವ್ಯವಹಾರಗಳ ಸಚಿವೆ ಅನ್ನಾಲೆನಾ ಬೇರ್ಬಾಕ್ ಮತ್ತು ಹಲವಾರು ಅಧಿಕಾರಿಗಳು ಸಹ ಆಗಮಿಸಿದ್ದರು. ಈ ಭೇಟಿಯ ಸಮಯದಲ್ಲಿ, ಶೋಲ್ಜ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ವ್ಯಾಪಕ ಚರ್ಚೆಯನ್ನು ನಡೆಸಿದ್ದಾರೆ. ಆದರೆ, ಅನ್ನಾಲೆನಾ ಬೇರ್ಬಾಕ್ ವಿಮಾನದಿಂದ ಇಳಿಯುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಮಾನದಿಂದ ಇಳಿದ…

Read More

Fact Check | ರಾಜನಾಥ್ ಸಿಂಗ್ ಅವರು ಲಾರೆನ್ಸ್ ಬಿಷ್ಣೋಯ್ ಪರ ಮಾತನಾಡಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

“ಲಾರೆನ್ಸ್‌ ಬಿಷ್ಣೋಯ್‌ ಪರವಾಗಿ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿದ್ದಾರೆ. ಆ ಮೂಲಕ ದೇಶದಲ್ಲಿ ಢಕಾಯಿತನೊಬ್ಬನಿಗೆ ಬೆಂಬಲವನ್ನು ನೇರವಾಗಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂಬುದನ್ನು ಒಪ್ಪಿಕೊಂಡಿದೆ.” ಎಂದು ರಾಜನಾಥ ಸಿಂಗ್ ಅವರ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ” ರಾಜನಾಥ್ ಸಿಂಗ್ ಅವರು ಲಾರೆನ್ಸ್‌ ಬಿಷ್ಣೋಯ್‌ ಅನ್ನು ಯಾರು ಕೂಡ ಮುಟ್ಟಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ ಎಂದು ಹಲವರು ಬರೆದುಕೊಂಡಿದ್ದಾರೆ ರಾಜನಾಥ್ ಸಿಂಗ್ ಅವರ ಧ್ವನಿ ಇರುವ ವಿಡಿಯೋ ಕ್ಲಿಪ್ ಅನ್ನು ನೋಡಿದ…

Read More

Fact Check : ಪ್ರಿಯಾಂಕಾ ಗಾಂಧಿಯವರ ಮಹಾರಾಷ್ಟ್ರ ರ್ಯಾಲಿಯ ಹಳೆಯ ವಿಡಿಯೋವನ್ನು ವಯನಾಡಿನಲ್ಲಿ ನಡೆದಿದ್ದು ಎಂದು ಹಂಚಿಕೆ

ಕಾಂಗ್ರೆಸ್ ಧ್ವಜಗಳನ್ನು ಹಿಡಿದುಕೊಂಡು ಬೃಹತ್ ಜನಸಮೂಹವು ಜಮಾಯಿಸಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದೆ. “ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅಬ್ಬರದ ಚುನಾವಣಾ ಪ್ರಚಾರ ರ್ಯಾಲಿ ಇದು” ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ . ನವೆಂಬರ್ 13ರಂದು ಉಪಚುನಾವಣೆ ನಡೆಯಲಿದ್ದು,  ಇತ್ತೀಚೆಗೆ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿಯವರು ರ್ಯಾಲಿ ನಡೆಸಿದ್ದರು. ಇದರ ಬೆನ್ನಲ್ಲೇ ಈ ವಿಡಿಯೋ ವೈರಲ್‌ ಆಗುತ್ತಿದೆ. ಫ್ಯಾಕ್ಟ್‌ಚೆಕ್‌ :  ಈ ವಿಡಿಯೋ “ಮಹಾರಾಷ್ಟ್ರದ…

Read More
ದೀಪಾವಳಿ ಆಫರ್

Fact Check: ದೀಪಾವಳಿ ಆಫರ್: ಕೇವಲ 99 ರೂಗೆ ಐಫೋನ್ 13 ಅಥವಾ ಸ್ಯಾಮ್ಸಂಗ್ ಎಸ್ 23 ಸಿಗುತ್ತದೆ ಎಂಬುದು ಸುಳ್ಳು

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನೇಕ ಕಂಪನಿಗಳು ಹಬ್ಬದ ಕೊಡುಗೆಗಳನ್ನು ಪ್ರತಿವರ್ಷ ನೀಡುತ್ತಿರುತ್ತವೆ. ಆದರೆ ಅವುಗಳಲ್ಲಿ ಹಲವು ನಿಜವಿದ್ದರೆ ಇನ್ನೂ ಕೆಲವು ಸುಳ್ಳಿರುತ್ತವೆ. ಈಗ ಐಫೋನ್ 13 ಅಥವಾ ಸ್ಯಾಮ್ಸಂಗ್ ಎಸ್ 23 ಕೇವಲ 99 ರೂ.ಗೆ ಸಿಗುತ್ತದೆ ಅಥವಾ ಒಪ್ಪೋ ಸ್ಮಾರ್ಟ್ಫೋನ್ ಕೇವಲ 9 ರೂ.ಗೆ ಸಿಗುತ್ತದೆ, ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗುತ್ತಿರುವ ಈ ಪೋಸ್ಟ್‌ಗಳ ಪ್ರಕಾರ, ಈ ಕೊಡುಗೆಗಳನ್ನು ಪಡೆಯಲು ನೀವು ಮಾಡಬೇಕಾಗಿರುವುದು ಇನ್ಸ್ಟಾಗ್ರಾಮ್ ರೀಲ್ ಅನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು…

Read More

Fact Check : ಬಾಬಾ ಸಿದ್ದಿಕಿ ಹತ್ಯೆಯ ನಂತರ ʼಸಲ್ಮಾನ್ ಖಾನ್ ಭಯಭೀತರಾಗಿದ್ದಾರೆʼ ಎಂದು ಕೋವಿಡ್‌ ಲಾಕ್‌ಡೌನ್‌ ವಿಡಿಯೋ ಹಂಚಿಕೆ

ಬಾಬಾ ಸಿದ್ದಿಕಿ ಹತ್ಯೆಯ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಭಯಭೀತನಾಗಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕೆಲವು ಬಳಕೆದಾರರು ಇದನ್ನು ನಿಜವೆಂದು ನಂಬಿ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್‌ಖಾನ್‌ ನಿಜವಾಗಿಯೂ ಭಯಭೀತರಾಗಿದ್ದಾರಾ? ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವೈರಲ್‌ ವಿಡಿಯೋದ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ ಚೆಕ್‌ ತಂಡ ಮುಂದಾಯಿತು. ವೈರಲ್‌…

Read More

Fact Check | ಕ್ರಿಶ್ಚಿಯನ್ನರ ಮೇಲಿನ ದಾಳಿಗೆ 10 ವರ್ಷ ಜೈಲು ಶಿಕ್ಷೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿಲ್ಲ

“ಕ್ರಿಶ್ಚಿಯನ್ನರ ಮೇಲಿನ ದಾಳಿಯಲ್ಲಿ ತಪ್ಪಿತಸ್ಥರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್ ತುರ್ತು ತೀರ್ಪು ನೀಡಿದೆ” ಎಂದು ಪೋಸ್ಟ್‌ವೊಂದು ವೈರಲ್‌ ಆಗಿದೆ. ಇದೇ ಪೋಸ್ಟ್‌ನಲ್ಲಿ “ದೇಶದಲ್ಲಿರುವ ಕ್ರಿಶ್ಚಿಯನ್ನರಿಗಾಗಿ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಯನ್ನು ಇಂದು ಪ್ರಾರಂಭಿಸಲಾಗಿದೆ, ದಯವಿಟ್ಟು ಅದನ್ನು ಸಾಧ್ಯವಾದಷ್ಟು ಕ್ರಿಶ್ಚಿಯನ್ ಜನರು ಮತ್ತು ಪಾದ್ರಿಗಳಿಗೆ ರವಾನಿಸಿ” ಎಂದು ಸಂದೇಶವನ್ನು ಸೇರಿಸಲಾಗಿದೆ . ಹೀಗಾಗಿ ಸಾಕಷ್ಟು ಮಂದಿ ಸುದ್ದಿಯನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್‌ ನೋಡಿದ ಹಲವರು ಇದನ್ನು ನಿಜವೆಂದು ನಂಬಿ ತಮ್ಮ ಸಾಮಾಜಿಕ…

Read More

Fact Check : “ದೆಹಲಿಯಿಂದ ಕೇಜ್ರಿವಾಲ್‌ ಓಡಿಸಿ” ಎಂದು ಆಟೋಗಳ ಮೇಲೆ ಬರೆದಿಲ್ಲ. ಎಡಿಟೆಡ್‌ ಚಿತ್ರ ಹಂಚಿಕೊಂಡ ಬಿಜೆಪಿ

ಬಿಜೆಪಿ ದೆಹಲಿ ಫೇಸ್‌ಬುಕ್ ಖಾತೆಯಲ್ಲಿ ಆಟೋ ರೀಕ್ಷಾದ ಮೇಲೆ ಹಿಂದಿ ಭಾಷೆಯಲ್ಲಿ ” ದೆಹಲಿಯಿಂದ ಕೇಜ್ರಿವಾಲ್‌ರನ್ನು  ಓಡಿಸಿ” ಎಂದು ಬರೆಯಲಾಗಿದೆ ಎಂದು ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ದಿಲ್ಲಿ ಜನರು ಕೇಜ್ರಿವಾಲ್‌ರನ್ನು ಓಡಿಸಲು ಬಯಸುತ್ತಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಆದರೆ ಕೇಜ್ರಿವಾಲ್‌ ವಿರುದ್ಧ ಆಟೋಗಳ ಮೇಲೆ ನಿಜವಾಗಿಯೂ ಇಂತಹ ಬರವಣಿಗೆಯನ್ನು ಬರೆಯಲಾಗಿದೆಯಾ? ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು…

Read More