ಬಿಜೆಪಿ ದೆಹಲಿ ಫೇಸ್‌ಬುಕ್ ಖಾತೆಯಲ್ಲಿ ಆಟೋ ರೀಕ್ಷಾದ ಮೇಲೆ ಹಿಂದಿ ಭಾಷೆಯಲ್ಲಿ ” ದೆಹಲಿಯಿಂದ ಕೇಜ್ರಿವಾಲ್‌ರನ್ನು ಓಡಿಸಿ” ಎಂದು ಬರೆಯಲಾಗಿದೆ ಎಂದು ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ದಿಲ್ಲಿ ಜನರು ಕೇಜ್ರಿವಾಲ್‌ರನ್ನು ಓಡಿಸಲು ಬಯಸುತ್ತಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಆದರೆ ಕೇಜ್ರಿವಾಲ್ ವಿರುದ್ಧ ಆಟೋಗಳ ಮೇಲೆ ನಿಜವಾಗಿಯೂ ಇಂತಹ ಬರವಣಿಗೆಯನ್ನು ಬರೆಯಲಾಗಿದೆಯಾ? ಈ ಕುರಿತು ಕನ್ನಡ ಫ್ಯಾಕ್ಟ್ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ನಿಜವನ್ನು ತಿಳಿದುಕೊಳ್ಳಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಅಸಲಿ ಫೋಟೊ ಕಂಡುಬಂದಿದ್ದು, ಆ ಆಟೋ ರಿಕ್ಷಾದಲ್ಲಿ ಬರೆಯಲಾದ ವಿಭಿನ್ನ ಹೇಳಿಕೆಗಳು ಕಂಡುಬಂದಿವೆ.
ಈ ವೈರಲ್ ಫೋಟೊ ಕುರಿತು ಮತ್ತಷ್ಟು ಹುಡುಕಿದಾಗ, ಮೂಲ ಪೋಟೊದ ಜೊತೆಗೆ ಮೆಟಾ ಡೇಟಾ ಮಾಹಿತಿ ಲಭಿಸಿದೆ. ಈ ಮಾಹಿತಿಯ ಪ್ರಕಾರ, ಈ ಚಿತ್ರ 2013ರ ಏಪ್ರಿಲ್ 10ರಂದು ಮೊದಲು ಪ್ರಕಟವಾಗಿದೆ ಎಂದು ತಿಳಿದುಬಂದಿದೆ. ಆಟೋ ರೀಕ್ಷಾದ ಮೂಲ ಚಿತ್ರದಲ್ಲಿ “ಆಯುಷ್ ಗುಪ್ತಾ – ಆಕಾಂಶಾ, ನೀವು ಯಾವಾಗ ಮನೆಗೆ ಬರುತ್ತೀರಿ” ಎಂದು ಹಿಂದಿಯಲ್ಲಿ ಬರೆಯಲಾಗಿದೆ.
ಆಟೋದ ಮೇಲೆ ಬರೆಯಲಾದ “ಆಯುಷ್ ಗುಪ್ತಾ – ಆಕಾಂಶಾ, ನೀವು ಯಾವಾಗ ಮನೆಗೆ ಬರುತ್ತೀರಿ” ಎಂಬ ಹೇಳಿಕೆಯನ್ನು ತಿರುಚಿ , “ದೆಹಲಿಯಿಂದ ಕೇಜ್ರಿವಾಲ್‌ರನ್ನು ಓಡಿಸಿ” ಎಂದು ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಆ ಚಿತ್ರವನ್ನು ಪರಿಶೀಲಿಸದೇ ತನ್ನ ರಾಜಕೀಯ ಕೆಸೆರೆರಚಾಟಕ್ಕೆ ಬಿಜೆಪಿ ಬಳಸಿಕೊಂಡಿದೆ. ಆ ಎಡಿಟೆಡ್ ಚಿತ್ರವನ್ನು ತನ್ನ ಅಧಿಕೃತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಜನರ ದಿಕ್ಕುತಪ್ಪಿಸಿ ಈಗ ಸಿಕ್ಕಿಬಿದ್ದಿದೆ.
ಒಟಾರೆಯಾಗಿ ಹೇಳುವುದಾದರೆ, “ದೆಹಲಿಯಿಂದ ಕೇಜ್ರಿವಾಲ್ ಓಡಿಸಿ” ಎಂದು ಆಟೋಗಳ ಮೇಲೆ ಬರೆದಿಲ್ಲ. ಎದುರಾಳಿಯನ್ನು ಹಳಿಯಲು ಬಿಜೆಪಿ ಆ ಎಡಿಟೆಡ್ ಚಿತ್ರವನ್ನು ಹಂಚಿಕೊಂಡಿದೆ. ಹಾಗಾಗಿ ಇಂತಹ ಚಿತ್ರ ಸುದ್ದಿಗಳನ್ನು ನಂಬುವ ಮುನ್ನ ಪರಿಶೀಲಿಸಿ.
ಇದನ್ನು ಓದಿ :
Fact Check : ಡಾಲರ್‌ಗೆ ಸವಾಲು ಹಾಕಲು ಬ್ರಿಕ್ಸ್ ದೇಶಗಳು ʼಹೊಸ ಬ್ರಿಕ್ಸ್ ಕರೆನ್ಸಿʼ ಪ್ರಾರಂಭಿಸಿವೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.