ಬಾಬಾ ಸಿದ್ದಿಕಿ ಹತ್ಯೆಯ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಭಯಭೀತನಾಗಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕೆಲವು ಬಳಕೆದಾರರು ಇದನ್ನು ನಿಜವೆಂದು ನಂಬಿ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್‌ಖಾನ್ ನಿಜವಾಗಿಯೂ ಭಯಭೀತರಾಗಿದ್ದಾರಾ? ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವೈರಲ್ ವಿಡಿಯೋದ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ ಚೆಕ್ ತಂಡ ಮುಂದಾಯಿತು. ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ನಮಗೆ 2020ರ ಏಪ್ರಿಲ್ 6ರಂದು ಹಂಚಿಕೊಳ್ಳಲಾದ ಸಲ್ಮಾನ್ ಖಾನ್‌ರವರ ಅಧಿಕೃತ Instagram ಖಾತೆಯಲ್ಲಿನ ಮೂಲ ವಿಡಿಯೋ ದೊರೆತಿದೆ.
ಈ ಮೂಲ ವಿಡಿಯೋದಲ್ಲಿ ಸಲ್ಮಾನ್ ಮತ್ತು ಅವರ ಸೋದರಳಿಯನಾದ ಸೊಹೈಲ್ ಖಾನ್ ಅವರ ಮಗ ನಿರ್ವಾನ್, ಮೊದಲ COVID-19 ಲಾಕ್‌ಡೌನ್ ಸಮಯದಲ್ಲಿ ಮನೆಯೊಳಗೆ ಉಳಿದುಕೊಳ್ಳುವುದರ ಪ್ರಯೋಜನವನ್ನು ಕುರಿತು ತನ್ನ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಚರ್ಚಿಸಿದ್ದಾರೆ. ಸಲ್ಮಾನ್ ಖಾನ್ COVID-19 ಸಾಂಕ್ರಾಮಿಕ ರೋಗ ಹರಡುವ ಭಯದಿಂದ ತನ್ನ ತಂದೆಯಿಂದ ದೂರವಿರವುದರ ಕುರಿತು ಮಾತನಾಡಿದ್ದಾರೆ. ಅವರು ಲಾಕ್‌ಡೌನ್ ನಿಯಮಗಳನ್ನು ಪಾಲಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದರು. ಆದ್ದರಿಂದ ಈ ವಿಡಿಯೋ ಸಿದ್ದಿಕಿ ಹತ್ಯೆಯ ನಂತರದ್ದಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಎರಡೂ ವಿಡಿಯೋಗಳ ದೃಶ್ಯಗಳು ಒಂದೇ ಹೋಲಿಕೆಯನ್ನೊಳಗೊಂಡಿವೆ. ಆದರೆ, ವೈರಲ್ ವಿಡಿಯೋದಲ್ಲಿ, ಸೊಹೈಲ್ ಖಾನ್ ಅವರ ಮಗ ನಿರ್ವಾನ್‌ರನ್ನು ಕ್ರಾಪ್ ಮಾಡಲಾಗಿದೆ. ಮತ್ತು ಮೂಲ ವಿಡಿಯೋದ ಭಾಗಗಳನ್ನು ಕತ್ತರಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಲ್ಮಾನ್‌ಖಾನ್‌ರು COVID-19 ಲಾಕ್‌ಡೌನ್ ವೇಳೆ ಮನೆಯಲ್ಲಿ ಉಳಿದುಕೊಳ್ಳುವ ಪ್ರಯೋಜನದ ಕುರಿತು ತನ್ನ ಅಳಿಯನೊಂದಿಗೆ ಚರ್ಚಿಸಲಾದ ವಿಡಿಯೋವನ್ನು ಕತ್ತರಿಸಿ, ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್‌ಖಾನ್ ಭಯಭೀತರಾಗಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನು ಓದಿ :
Fact Check : “ದೆಹಲಿಯಿಂದ ಕೇಜ್ರಿವಾಲ್ ಓಡಿಸಿ” ಎಂದು ಆಟೋಗಳ ಮೇಲೆ ಬರೆದಿಲ್ಲ. ಎಡಿಟೆಡ್ ಚಿತ್ರ ಹಂಚಿಕೊಂಡ ಬಿಜೆಪಿ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.