ವಾರಣಾಸಿ ವಿಮಾನ ನಿಲ್ದಾಣದಲ್ಲಿ ‘ಆಕಾಸ ಏರ್’ ಗೆ ಸೇರಿದ ವಿಮಾನದಲ್ಲಿ ಮೊದಲ ಬಾರಿಗೆ ‘ಸಂಸ್ಕೃತದಲ್ಲಿ ವಿಮಾನ ಪ್ರಕಟಣೆ’ ನೀಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ) ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಈ ವಿಡಿಯೋವನ್ನು ಹಂಚಿಕೊಂಡು ಭಾರತದ ಪ್ರಾಚೀನ ಭಾಷೆಯನ್ನು ನೆನಪಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಡಿಯೋ ಕಳೆದ ಅನೇಕ ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ.
ಫ್ಯಾಕ್ಟ್ ಚೆಕ್:
ವಿಡಿಯೋದಲ್ಲಿನ ಪ್ರಕಟಣೆ ಅಧಿಕೃತವಲ್ಲ ಎಂದು ‘ಆಕಾಸ ಏರ್’ ಸ್ಪಷ್ಟಪಡಿಸಿದೆ. ಸಂಸ್ಕೃತದಲ್ಲಿ ವಿಡಿಯೋಗಳನ್ನು ಸೃಷ್ಟಿಸುವ ‘ಸಂಸ್ಕೃತ ಸ್ಪರೋ(ಗುಬ್ಬಚ್ಚಿ)’ ಎಂಬ ಸಾಮಾಜಿಕ ಮಾಧ್ಯಮ ಪುಟದಿಂದ ಮಾಡಿದ ಡಬ್ಬಿಂಗ್ ವಿಡಿಯೋ ಇದಾಗಿದೆ.
ವೈರಲ್ ವಿಡಿಯೋದಲ್ಲಿ ‘ಸಂಸ್ಕೃತ ಗುಬ್ಬಚ್ಚಿ‘ ಎಂಬ ಇನ್ಸ್ಟಾಗ್ರಾಮ್ ಖಾತೆಯ ವಾಟರ್ ಮಾರ್ಕ್ ಅನ್ನು ಗಮನಿಸಿದ ನಂತರ, ನಾವು ಈ ಪುಟವನ್ನು ಅಂತರ್ಜಾಲದಲ್ಲಿ ಹುಡುಕಿದಾಗ ಸಮಸ್ತಿ ಗುಬ್ಬಿ ಎಂಬವರು ಅದನ್ನು ನಡೆಸುತ್ತಿರುವುದು ಕಂಡುಬಂದಿದೆ. ಇಲ್ಲಿ, ಅವರು ಸಂಸ್ಕೃತದಲ್ಲಿ ವಿಷಯವನ್ನು ಅಪ್ಲೋಡ್ ಮಾಡುತ್ತಾರೆ.
ಅವರು 6 ಜೂನ್ 2024 ರಂದು ಸಂಸ್ಕೃತದ ವಿಮಾನ ಪ್ರಕಟಣೆ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ (ಆರ್ಕೈವ್ ಲಿಂಕ್).
ಪೋಸ್ಟ್‌ನ ವಿಡಿಯೋ ವಿವರಣೆಯಲ್ಲಿ, ವಿಡಿಯೋದಲ್ಲಿ ‘ಡಬ್ಬಿಂಗ್ ವಾಯ್ಸ್ ಓವರ್’ ಇದೆ ಮತ್ತು ಇದು ಯಾವುದೇ ವಿಮಾನದಲ್ಲಿ ಮಾಡಿದ ನಿಜವಾದ ಪ್ರಕಟಣೆಯಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ. ಈ ವಿಡಿಯೋವಿಗೂ ‘ಆಕಾಸ ಏರ್’ಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಹೇಳಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಹುಡುಕಾಟದ ಮೂಲಕ, ‘ಆಕಾಸ ಏರ್’ ಕೂಡ ಈ ವಿಡಿಯೋದ ಬಗ್ಗೆ ಸ್ಪಷ್ಟಪಡಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ (ಆರ್ಕೈವ್ ಲಿಂಕ್). ವೈರಲ್ ವಿಡಿಯೋದ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ಅಡಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ವಿಡಿಯೋದಲ್ಲಿನ ಪ್ರಕಟಣೆ ಅಧಿಕೃತವಲ್ಲ ಮತ್ತು ಹಂಚಿಕೊಳ್ಳಲಾದ ಡಬ್ಬಿಂಗ್ ವಿಡಿಯೋ ಎಂದು ತೋರುತ್ತದೆ’ ಎಂದು ಹೇಳಿದರು. ತಮ್ಮ ಇನ್ ಫ್ಲೈಟ್ ಪ್ರಕಟಣೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Emergency instructions are for people to understand and not for people to feel elated. Sanskrit is a beautiful language. Make more people learn the same instead of flaunting it in the least practical places. https://t.co/3QrdkReLIf
— kishore k swamy 🇮🇳 (@sansbarrier) June 8, 2024
ಆಕಾಸ ಏರ್ ವಿಮಾನಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅಂತಹ ಪ್ರಕಟಣೆಗಳ ವಿಡಿಯೋಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಆಕಾಸ ಏರ್‌ನ ವಿಮಾನದಲ್ಲಿ ಸಂಸ್ಕೃತ ಇನ್‌ಫೈಟ್ ಪ್ರಕಟಣೆಯನ್ನು ತೋರಿಸುವ ಈ ವಿಡಿಯೋವನ್ನು ಡಬ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನು ಓದಿ: ತೆಲಂಗಾಣದ ಭೂಕಂಪದ ದೃಶ್ಯಗಳು ಎಂದು ರಸ್ತೆಗಳಲ್ಲಿ ಬಿರುಕು ಬಿಟ್ಟ ಸಂಬಂಧವಿರದ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.