ಸೌರ ವಿದ್ಯುತ್ ಖರೀದಿಗಾಗಿ ತಮಿಳುನಾಡು, ಆಂಧ್ರಪ್ರದೇಶ ಸೇರದಂತೆ ಐದು ರಾಜ್ಯಗಳ ಸರ್ಕಾರಿ ಅಧಿಕಾರಿಗಳಿಗೆ ಗೌತಮ್ ಅದಾನಿ 2,200 ಕೋಟಿ ಲಂಚ ನೀಡಿದ್ದಾರೆ ಎಂದು ಅಮೆರಿಕದ ನ್ಯಾಯಾಲಯದಲ್ಲಿ ಆರೋಪಿಸಲಾಗಿದೆ. ಇದಾದ ಬಳಿಕ ಅದನಿ ಗ್ರೂಪ್‌ನಿಂದ ಲಂಚ ಪಡೆದ ಕಂಪನಿಗಳ ಪಟ್ಟಿಯಲ್ಲಿ ತಮಿಳುನಾಡು ವಿದ್ಯುತ್ ಮಂಡಳಿ ಹೆಸರು ಸಹ ಸೇರಿದ್ದು, ಈ ಬಗ್ಗೆ ತಮಿಳುನಾಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಹಲವರು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಅದಾನಿ ಗ್ರೂಪ್‌ನಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
என்ன ஒரு ஸ்பீடு..!
இந்தியாவின் மிகப்பெரிய பணக்காரர். பல ஊழல் குற்றச்சாட்டுகளுக்கு உள்ளானவர். குறிப்பாக தமிழ்நாட்டில் 3000 கோடி ஊழல் செய்து இன்று தமிழக மக்கள் அதிக மின் கட்டணம் செலுத்த காரணமானவர். பிரதமர் மோடியின் நீண்ட கால நெருங்கிய நண்பர் போன்ற பல்வேறு முக்கியத்துவங்கள் பெற்ற… pic.twitter.com/kRmu18ufz1
— Arappor Iyakkam (@Arappor) November 25, 2024
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವು ಪತ್ರಕರ್ತರು ಎಂ. ಕೆ. ಸ್ಟಾಲಿನ್ ಅವರನ್ನು ಪ್ರಶ್ನಿಸಿದಾಗ ಇದಕ್ಕೆ ಉತ್ತರಿಸದೆ ಸ್ಟಾಲಿನ್ ಹೆದರಿ ಓಡಿದ್ದಾರೆ ಎಂಬ ರೀತಿಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿ ಸಹ ಪತ್ರಕರ್ತರ ಪ್ರಶ್ನೆಗೆ ಸ್ಟಾಲಿನ್ ಉತ್ತರಿಸದೆ ತೆರಳುವುದನ್ನು ಕಾಣಬಹುದಾಗಿದೆ. ಹೀಗಾಗಿ ವಿಡಿಯೋ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
அதானி குறித்தக் கேள்விக்கு பதில் சொல்லாது ஏன் ஓடுகிறார் முதல்வர் ஸ்டாலின்?
பதில் சொல்ல வக்கு இல்லையா ஐயா? @mkstalin pic.twitter.com/aJHAQlID60
— இடும்பாவனம் கார்த்திக் (@idumbaikarthi) November 25, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ ತಮಿಳುನಾಡಿನ ರಿಫ್ಲೆಕ್ಟ್ ನ್ಯೂಸ್ ತಮಿಳ್ ಯುಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವಿಡಿಯೋಗೆ ಸಂಬಂಧಪಟ್ಟ ಪೂರ್ಣ ವಿಡಿಯೋ ಕಂಡು ಬಂದಿದೆ. ಇದರಲ್ಲಿ ಅದಾನಿ ಸಮೂಹದ ಕುರಿತ ಪ್ರಶ್ನೆಗೆ ಸ್ಟಾಲಿನ್ ಉತ್ತರಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ವಿಡಿಯೋದಲ್ಲಿ ಮೊದಲು ಅದಾನಿ ಕುರಿತ ಪ್ರಶ್ನೆಗೆ ಸ್ಟಾಲಿನ್ ಉತ್ತರಿಸದೆ ತೆರಳಲು ಮುಂದಾಗುತ್ತಾರೆ. ತದನಂತರ ಮತ್ತೆ ಪತ್ರಕರ್ತರ ಬಳಿ ಬಂದು ಈ ಬಗ್ಗೆ ಸಚಿವರುಗಳೇ ಉತ್ತರವನ್ನು ನೀಡಿದ್ದಾರೆ. ನೀವು ಸುದ್ದಿಯನ್ನು ತಿರುಚಬೇಡಿ ಎಂದು ಹೇಳುತ್ತಾರೆ. ಹೀಗಾಗಿ ವೈರಲ್ ವಿಡಿಯೋ ಎಡಿಟ್ ಮಾಡಿ ಹಂಚಿಕೊಳ್ಳಲಾಗಿರುವುದು ಸ್ಪಷ್ಟವಾಗಿದೆ.
ಈ ಬಗೆಗಿನ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಕೆಲವೊಂದು ಕೀವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ, ನ್ಯೂಸ್ 18 ತಮಿಳುನಾಡು ಮತ್ತು ಎಬಿಪಿ ನಾಡು ಎಂಬ ಸುದ್ದಿ ವಾಹಿನಿಗಳು ಕೂಡ ಇದೇ ವಿಡಿಯೋವನ್ನು ಹಂಚಿಕೊಂಡು ವರದಿ ಮಾಡಿವೆ. ಅದರಲ್ಲೂ ಕೂಡ ಸ್ಟಾಲಿನ್ ಅವರು ಸ್ಪಷ್ಟವಾಗಿ ಅದಾನಿ ಕುರಿತ ಪ್ರಶ್ನೆಗೆ ಉತ್ತರಿಸುವುದನ್ನು ಕಾಣಬಹುದಾಗಿದೆ. ಆದರೆ ವೈರಲ್ ವಿಡಿಯೋದಲ್ಲಿ ಮಾತ್ರ ಪತ್ರಕರ್ತರ ಪ್ರಶ್ನೆಗೆ ಸ್ಟಾಲಿನ್ ಉತ್ತರಿಸದೆ ಹೆದರಿ ಓಡಿ ಹೋಗುವಂತೆ ಬಿಂಬಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಅದಾನಿ ಕುರಿತ ಪ್ರಶ್ನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹೆದರಿ ಓಡಿ ಹೋಗಿದ್ದಾರೆ ಎಂಬುದು ಸುಳ್ಳು. ಬದಲಿಗೆ ಒಮ್ಮೆ ತೆರಳಲು ಮುಂದಾಗಿ ಮತ್ತೊಮ್ಮೆ ಪತ್ರಕರ್ತರ ಬಳಿ ಬಂದು ಅದಾನಿ ಕುರಿತ ಪ್ರಶ್ನೆಗೆ ಸ್ಪಷ್ಟನೆ ನೀಡಿರುವುದು ಮೂಲ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಹಾಗಾಗಿ ವೈರಲ್ ಸುಳ್ಳು ಸುದ್ದಿಯಿಂದ ಕೂಡಿದೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.