ಕೇಸರಿ ಬಟ್ಟೆಯನ್ನು ಧರಿಸಿದ ವ್ಯಕ್ತಿಯೊಬ್ಬ ಕಾರಿನೊಳಗಿರುವ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಬಾಂಗ್ಲಾದೇಶದ ಮಾಜಿ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ನಾಯಕ ಚಿನ್ಮೋಯ್ ಕೃಷ್ಣ ದಾಸ್‌ರು ವೈರಲ್ ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿ” ಎಂಬ ಶೀರ್ಷಿಕೆಯೊಂದಿಗೆ ಅನೇಕ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ :
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ರಾಜಸ್ಥಾನದ ಸಿಕರ್‌ನಲ್ಲಿರುವ ಕ್ಷೇತ್ರಪಾಲ್ ದೇವಾಲಯದ ಅರ್ಚಕ ಬಾಬಾ ಬಾಲಕನಾಥ್ ಆಗಿದ್ದು, ಚಿನ್ಮೋಯ್ ಕೃಷ್ಣ ದಾಸ್ ಅಲ್ಲ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು, ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ಅಕ್ಟೋಬರ್ 21ರಂದು ರಾಜಸ್ಥಾನ ಪತ್ರಿಕಾ ಯೂಟ್ಯೂಬ್ ಚಾನೆಲ್ ಹಂಚಿಕೊಂಡ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿಯೂ ವೈರಲ್ ವಿಡಿಯೋದಂತೆಯೇ ಸ್ಕ್ರೀನ್‌ಶಾಟ್ ಫೋಟೋಗಳನ್ನು ಒಳಗೊಂಡಿದೆ.
“ಹುಡುಗಿಯ ಕಾರನ್ನು ಹಾಳು ಮಾಡಿದ ಪುರೋಹಿತರು” ಎಂಬ ಕೀವರ್ಡ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ಅಕ್ಟೋಬರ್ 20ರ ಝೀ ನ್ಯೂಸ್ ಲೇಖನವು ವೈರಲ್ ವಿಡಿಯೋದಂತೆಯೇ ಮಸುಕಾದ ಸ್ಕ್ರೀನ್‌ಶಾಟ್ ಫೋಟೋಗಳನ್ನು ಒಳಗೊಂಡಿದೆ. ರಾಜಸ್ಥಾನದ ಸಿಕರ್‌ನಲ್ಲಿರುವ ಕ್ಷೇತ್ರಪಾಲ್ ದೇವಾಲಯದ ಧಾರ್ಮಿಕ ಮುಖಂಡ ಬಾಬಾ ಬಾಲಕನಾಥ್ ಕೇಸರಿ ವಸ್ತ್ರಧಾರಿ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಬಾಲಕನಾಥ್ ಪ್ರಸಾದದಲ್ಲಿ ಮಾದಕ ದ್ರವ್ಯ ಬೆರೆಸಿ ಕಾರಿನಲ್ಲಿ ಭಕ್ತೆ ಎನ್ನಲಾದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನವಭಾರತ್ ಟೈಮ್ಸ್ ಮತ್ತು ಹಿಂದೂಸ್ತಾನ್ ಟೈಮ್ಸ್‌ನ ಇತರ ವರದಿಗಳನ್ನು ತಯಾರಿಸಿವೆ.
ಮಹಿಳೆಯ ದೂರಿನ ಅನ್ವಯ ಸಿಕರ್ ಜಿಲ್ಲಾ ಉಪ ಅಧೀಕ್ಷಕರಾದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ (ಎಸ್‌ಸಿ-ಎಸ್‌ಟಿ) ಅಜಿತ್ ಪಾಲ್ ಅವರು ತನಿಖೆ ನಡೆಸಿದ್ದಾರೆ ಎಂದು ಲಲ್ಲಾಂಟಾಪ್ ಮತ್ತು ಎಬಿಪಿ ವರದಿಗಳು ತಿಳಿಸಿವೆ. ಈ ಪ್ರಕರಣದಲ್ಲಿ ಬಾಬಾ ಬಾಲಕನಾಥ್ ಹೊರತುಪಡಿಸಿ ಇನ್ನಿಬ್ಬರನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಮತ್ತು ಚಿನ್ಮಯ್ ದಾಸ್ ಫೋಟೋಗಳನ್ನು ಈ ಕೆಳಗಿನ ಚಿತ್ರದಲ್ಲಿ ನೋಡಬಹುದು. ಇಬ್ಬರು ವ್ಯಕ್ತಿಗಳು ಭಿನ್ನವಾಗಿದ್ದಾರೆ.
ಬಾಂಗ್ಲಾದೇಶದಲ್ಲಿ ಇಸ್ಕಾನ್‌ನ ಮಾಜಿ ನಾಯಕ ಚಿನ್ಮಯ್ ದಾಸ್ ಸ್ಥಾಪಿಸಲಾದ “ಸಮ್ಲಿತೋ ಸನಾತನ್ ಜಾಗರಣ್ ಜೋತೆ” ಹಿಂದೂ ಸಂಘಟನೆಯ ಪ್ರತಿನಿಧಿಯಾಗಿದ್ದರು. ಅವರನ್ನು ದೇಶದ್ರೋಹದ ಆರೋಪದ ಮೇಲೆ ಢಾಕಾ ವಿಮಾನ ನಿಲ್ದಾಣದಲ್ಲಿ ನ.25 ರಂದು ಬಂಧಿಸಲಾಗಿತ್ತು. ಅವರ ಬಂಧನ ಮತ್ತು ಜಾಮೀನು ನಿರಾಕರಣೆ ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯು ರಾಜಸ್ಥಾನದ ಸಿಕರ್‌ನಲ್ಲಿರುವ ಕ್ಷೇತ್ರಪಾಲ್ ದೇವಾಲಯದ ಅರ್ಚಕ ಬಾಬಾ ಬಾಲಕನಾಥ್ ಆಗಿದ್ದು, ಚಿನ್ಮೋಯ್ ಕೃಷ್ಣ ದಾಸ್ ಅಲ್ಲ.
ಇದನ್ನು ಓದಿ : Fact Check : ಟಾಟಾ ಮೋಟಾರ್ಸ್ ವಿನೂತನ ನ್ಯಾನೋ ಕಾರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.