Fact Check | ಮೆಟ್ರೋ ಪಿಲ್ಲರ್‌ಗಳ ಮೇಲೆ ರೇವಂತ್ ರೆಡ್ಡಿ ಸರ್ಕಾರವನ್ನು ಪ್ರಶ್ನಿಸುವ ‘420’ಎಂಬ ಜಾಹೀರಾತಿನ ಫಲಕ ಹಾಕಲಾಗಿದೆ ಎಂದು ಎಡಿಟೆಡ್ ಚಿತ್ರ ಹಂಚಿಕೆ
ಹೈದರಾಬಾದ್‌ನ ಎರಡು ಮೆಟ್ರೋ ಪಿಲ್ಲರ್‌ಗಳ ಮೇಲೆ ಜಾಹೀರಾತು ಫಲಕಗಳನ್ನು ಒಳಗೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಪ್ರತಿಯೊಂದೂ ಜಾಹೀರಾತಿನ ಬೋರ್ಡ್‌ಗಳು ನೀಲಿ ಬಣ್ಣದ ಪ್ರಶ್ನಾರ್ಥಕ ಚಿಹ್ನೆಯನ್ನೂ ಹೊಂದಿದ್ದೂ, ಆ ಚಿಹ್ನೆಯ ಮೇಲೆ ‘420’ ಎಂಬ ಸಂಖ್ಯೆಯನ್ನು ಬರೆಯಲಾಗಿದೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಕಾಂಗ್ರೆಸ್ ಸರ್ಕಾರ ಮತ್ತು ಅದರ ‘420’ ಭರವಸೆಗಳನ್ನು ಜಾಹೀರಾತು ಫಲಕಗಳಲ್ಲಿನ ಸಂದೇಶಗಳು ಟೀಕಿಸುತ್ತವೆ ಎಂದು ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. 420 ಎಂಬ ಸಂಖ್ಯೆಯನ್ನು ಸ್ಥಳೀಯವಾಗಿ ವಂಚನೆ ಅಥವಾ ವಿಶ್ವಾಸ…
