Fact Check | ಸಲ್ಮಾನ್ ಖಾನ್ ಮತ್ತು ತಮನ್ನಾ ಭಾಟಿಯಾ ಅವರ ಸ್ಕೈಡೈವಿಂಗ್ ಪೋಟೋವನ್ನು AIನಿಂದ ರಚಿಸಲಾಗಿದೆ
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ತಮನ್ನಾ ಭಾಟಿಯಾ ಸ್ಕೈಡೈವಿಂಗ್ ಮಾಡುತ್ತಿರುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಉಪಸ್ನಾ ಎಂಬ ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ “ಸಲ್ಮಾನ್ ಖಾನ್ ತಮನ್ನಾ ಭಾಟಿಯಾ ಸ್ಕೈಡೈವಿಂಗ್ ಮಾಡುತ್ತಿರುವ ಪೋಟೋ ಸುಂದರವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಪೋಟೋವನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ಪೋಟೋದ ನಿಜಾಂಶವನ್ನು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಟೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು….
