ಹಿಮದಿಂದ ಆವೃತವಾದ ಎತ್ತರದ ಪರ್ವತಗಳ ನಡುವೆ ರೈಲು ಚಲಿಸುತ್ತಿರುವುದನ್ನು ತೋರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೂರು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವಂದೇ ಭಾರತ್ ಕಾಶ್ಮೀರದ ಹಿಮಭರಿತ ಕಣಿವೆಗಳ ಮೂಲಕ ಪ್ರಯಾಣಿಸುತ್ತಿದೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಪಾದಿಸುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ: বরফে ঢাকা কাশ্মীরে বন্দে ভারত, মনমুগ্ধকর দৃশ্য!(ಹಿಮದಿಂದ ಆವೃತವಾದ ಕಾಶ್ಮೀರದಲ್ಲಿ ಭಾರತ, ಸುಂದರ ದೃಶ್ಯ!)
ನೀವು ಪೋಸ್ಟ್ ಅನ್ನು ಇಲ್ಲಿ ಪರಿಶೀಲಿಸಬಹುದು.
ಫ್ಯಾಕ್ಟ್ ಚೆಕ್
ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ವೈರಲ್ ಹೇಳಿಕೆಗಳು ಸುಳ್ಳು ಮತ್ತು ಪೋಟೋಗಳನ್ನು ಕೃತಕ ಬುದ್ಧಿಮತ್ತೆಯಿಂದ(ಎಐ) ರಚಿತವಾಗಿದೆ ಎಂದು ಕಂಡುಕೊಂಡಿದೆ.
ಹಿಮದಿಂದ ಆವೃತವಾದ ಕಾಶ್ಮೀರದ ಮೂಲಕ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೈರಲ್ ಚಿತ್ರಗಳನ್ನು ಪರಿಶೀಲಿಸಿದಾಗ, ಹಲವಾರು ಅಸಂಗತತೆಗಳು ಕಂಡುಬಂದಿವೆ. ವೈರಲ್ ಆಗಿರುವುದು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎಲೆಕ್ಟ್ರಿಕ್ ರೈಲು, ಆದರೆ ಚಿತ್ರಗಳಲ್ಲಿ ಹಳಿಗಳ ಮೇಲೆ ಓವರ್ಹೆಡ್ ವಿದ್ಯುತ್ ತಂತಿಗಳಿಲ್ಲ. ಒಂದು ಚಿತ್ರವು ಪಕ್ಕದ ಹಳಿಯಲ್ಲಿ ವಿದ್ಯುತ್ ತಂತಿಗಳು ಮತ್ತು ಕಂಬಗಳನ್ನು ತೋರಿಸಿದರೆ, ಅವು ರೈಲಿಗೆ ಸಂಪರ್ಕ ಹೊಂದಿಲ್ಲ. ಹೆಚ್ಚುವರಿಯಾಗಿ, ಎಕ್ಸ್ಎಐ ಅಭಿವೃದ್ಧಿಪಡಿಸಿದ ಸುಧಾರಿತ ಎಐ ತಂತ್ರಜ್ಞಾನವಾದ ‘ಗ್ರೋಕ್’ ಎಂಬ ಪದವನ್ನು ನಾವು ಪ್ರತಿ ಚಿತ್ರದ ಕೆಳಗಿನ ಬಲ ಮೂಲೆಯಲ್ಲಿ ಪತ್ತೆ ಹಚ್ಚಿದ್ದೇವೆ
ಎಐ ಪತ್ತೆ ಸಾಧನಗಳಾದ ಹೈವ್ ಎಐ ಡಿಟೆಕ್ಟರ್ ಮೂಲಕ ಚಿತ್ರಗಳನ್ನು ಮತ್ತಷ್ಟು ವಿಶ್ಲೇಷಿಸಿದಾಗ, ಚಿತ್ರಗಳು ಎಐ-ಜನರೇಟ್ ಆಗಿವೆ ಎಂದು ದೃಢಪಡಿಸಲಾಗಿದೆ.
ಡಿಸೆಂಬರ್ 28, 2024 ರ ಟ್ರೈನ್ಸ್ ಆಫ್ ಇಂಡಿಯಾ ಎಂಬ ಫೇಸ್‌ಬುಕ್ ಪುಟವು ವೈರಲ್ ಚಿತ್ರಗಳನ್ನು ಇತರ ಚಿತ್ರಗಳೊಂದಿಗೆ ಹಂಚಿಕೊಂಡಿದೆ, ಅವುಗಳನ್ನು ಎಐ ಸಹಾಯದಿಂದ ರಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಜನವರಿ 5, 2025 ರ ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ವರದಿಯು ಪ್ರಸ್ತುತ ಜಮ್ಮುವಿನಲ್ಲಿ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲುಗಳು ಕಾರ್ಯನಿರ್ವಹಿಸುತ್ತಿದ್ದರೂ (ನವದೆಹಲಿ-ಎಸ್ಎಂವಿಡಿ ಕತ್ರಾ 2019 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಎಸ್ಎಂವಿಡಿ ಕತ್ರಾ-ನವದೆಹಲಿಯನ್ನು 2023 ರಲ್ಲಿ ಪ್ರಾರಂಭಿಸಲಾಯಿತು), ಕಾಶ್ಮೀರದಲ್ಲಿ ಇನ್ನೂ ಯಾವುದೇ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಭವಿಷ್ಯದಲ್ಲಿ ಕತ್ರಾ-ಶ್ರೀನಗರ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಓಡಿಸುವ ಯೋಜನೆ ಇದ್ದರೂ, ಸೇವೆ ಇನ್ನೂ ಪ್ರಾರಂಭವಾಗಿಲ್ಲ.
ಆದ್ದರಿಂದ, ವಂದೇ ಭಾರತ್ ಎಕ್ಸ್‌ಪ್ರೆಸ್ ಕಾಶ್ಮೀರದ ಹಿಮಭರಿತ ಕಣಿವೆಗಳ ಮೂಲಕ ಪ್ರಯಾಣಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳುವ ವೈರಲ್ ಪೋಸ್ಟ್ ಸುಳ್ಳು ಮತ್ತು ಎಐ ರಚಿತವಾಗಿದೆ.
ಇದನ್ನು ಓದಿ: ಮಹಾಕುಂಭ ಮೇಳದಲ್ಲಿ ಯುವತಿಯೊಬ್ಬಳು ಅಘೋರಿಯನ್ನು ಮದುವೆಯಾಗಿದ್ದಾಳೆ ಎಂಬುದು ಸುಳ್ಳು