ಯುವತಿಯೊಬ್ಬಳು ಅಘೋರಿ ವೇಷ ಧರಿಸಿದ ವ್ಯಕ್ತಿಯನ್ನು ಮದುವೆಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಮಹಾಕುಂಭ ಮೇಳದಲ್ಲಿ ನಡೆದಿರುವ ಘಟನೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ಬಳಕೆದಾರರಾದ ‘ಆರತಿ ಭಕ್ರೆ’ ಜನವರಿ 15, 2025 ರಂದು “ತನಾತನಿಗಳ ಲೀಲೆ ಅಪಾರ. ಮಹಾಕುಂಬ ಮೇಳದಲ್ಲಿ ಒಂದಲ್ಲ ಒಂದು ಕಂಡುಬರುತ್ತದೆ ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್‌ನ ಆರ್ಕೈವ್ ಮಾಡಿದ ಲಿಂಕ್ ಅನ್ನು ಇಲ್ಲಿ ಪರಿಶೀಲಿಸಬಹುದು.
ಫ್ಯಾಕ್ಟ್ ಚೆಕ್:
ವೈರಲ್ ಪೋಸ್ಟ್‌ನ ಸತ್ಯವನ್ನು ತಿಳಿಯಲು, ನಾವು ವಿಡಿಯೋದ ಹಲವಾರು ಕೀಫ್ರೆಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಅವುಗಳನ್ನು ಹುಡುಕಾಟ ನಡೆಸಿದಾಗ ಗೋಯಲ್ ಪಿಸಿ 77 ಎಂಬ ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ವಿಡಿಯೋವನ್ನು ಆಗಸ್ಟ್ 5, 2024 ರಂದು ಹಂಚಿಕೊಳ್ಳಲಾಗಿದೆ.

ಕೀವರ್ಡ್‌ಗಳೊಂದಿಗೆ ಗೂಗಲ್ ಹುಡುಕಾಟವನ್ನು ನಡೆಸಿದಾಗ, ranjit_offficial_0786 ಎಂಬ ಮತ್ತೊಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಕಂಡುಹಿಡಿಯಲು ಸಾಧ್ಯವಾಯಿತು. ಈ ವಿಡಿಯೋವನ್ನು ಜೂನ್ 12, 2024 ರಂದು ಹಂಚಿಕೊಳ್ಳಲಾಗಿದೆ. ಇದರಿಂದ, ವೈರಲ್ ವಿಡಿಯೋವಿಗೂ ಮಹಾಕುಂಭಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಜನಸತ್ತಾ ವೆಬ್ಸೈಟ್‌ನಲ್ಲಿ 2025 ರ ಜನವರಿ 14 ರಂದು ಪ್ರಕಟವಾದ ವರದಿಯ ಪ್ರಕಾರ, ಮಹಾ ಕುಂಭವು 2025 ರ ಜನವರಿ 13 ರಂದು ಪ್ರಾರಂಭವಾಗುತ್ತದೆ ಮತ್ತು 2025 ರ ಫೆಬ್ರವರಿ 26 ರವರೆಗೆ ನಡೆಯಲಿದೆ.
ಹೆಚ್ಚಿನ ದೃಢೀಕರಣಕ್ಕಾಗಿ ನಾವು ಪ್ರಯಾಗ್ ರಾಜ್ ನ ದೈನಿಕ್ ಜಾಗರಣ್ ನ ಸಂಪಾದಕೀಯ ಉಸ್ತುವಾರಿ ರಾಕೇಶ್ ಪಾಂಡೆ ಅವರನ್ನು ಸಂಪರ್ಕಿಸಿದ್ದೇವೆ. ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ವಿಡಿಯೋ ಇಲ್ಲಿಂದ ಬಂದದ್ದಲ್ಲ. ಮಹಾ ಕುಂಭ ಮೇಳದ ಮೊದಲ ದಿನ ಸುಮಾರು 1.5 ಕೋಟಿ ಜನರು ಸ್ನಾನ ಮಾಡಿದರು. ಎರಡನೇ ದಿನ 3.5 ಕೋಟಿ ಜನರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಆದ್ದರಿಂದ, ಅಘೋರಿಯ ವೇಷಭೂಷಣ ಧರಿಸಿದ ವ್ಯಕ್ತಿಯೊಬ್ಬ ಮದುವೆಯಾಗುತ್ತಿರುವ ವಿಡಿಯೋ ಕುಂಬಮೇಳದ್ದು ಎಂಬುದು ಸುಳ್ಳು. ಈ ವಿಡಿಯೋವಿಗೂ ಮಹಾ ಕುಂಭಕ್ಕೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ವೈರಲ್ ವಿಡಿಯೋ ಜೂನ್ 2024 ರಿಂದ ಅಂತರ್ಜಾಲದಲ್ಲಿದೆ.
ಇದನ್ನು ಓದಿ: ಮಹಾ ಕುಂಭಮೇಳ ಪ್ರದೇಶದಲ್ಲಿ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಸುಳ್ಳು