ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ತಮನ್ನಾ ಭಾಟಿಯಾ ಸ್ಕೈಡೈವಿಂಗ್ ಮಾಡುತ್ತಿರುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಉಪಸ್ನಾ ಎಂಬ ಬಳಕೆದಾರರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ “ಸಲ್ಮಾನ್ ಖಾನ್ ತಮನ್ನಾ ಭಾಟಿಯಾ ಸ್ಕೈಡೈವಿಂಗ್ ಮಾಡುತ್ತಿರುವ ಪೋಟೋ ಸುಂದರವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಪೋಟೋವನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ಪೋಟೋದ ನಿಜಾಂಶವನ್ನು ಕನ್ನಡ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಟೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಮೊದಲು ಪೋಟೋ ನೋಡಿದಾಗ ನೈಜ ಚಿತ್ರವೆಂಬಂತೆ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಚಿತ್ರವನ್ನು ಗಮನಿಸಿದಾಗ, AI ಕುಶಲತೆಯಿಂದ (ಕೃತಕ ಬುದ್ದಿಮತ್ತೆಯಿಂದ) ರಚಿಸಲಾಗಿದೆಯಾ? ಎಂಬ ಅನುಮಾನಾಸ್ಪದಕ್ಕೆ ಕಾರಣವಾಯಿತು. ಏಕೆಂದರೆ ಪೋಟೋದಲ್ಲಿ ಹಲವಾರು ಚಿಹ್ನೆಗಳು ಕಂಡುಬಂದಿವೆ. ಸಲ್ಮಾನ್ ಖಾನ್ ಅವರ ಹಣೆಯು ವಿರೂಪಗೊಂಡಂತೆ ಕಾಣುತ್ತದೆ. AI (Artificial intelligence) ಪರಿಕರವಾದ ಹೈವ್ ಮಾಡರೇಶನ್ ಬಳಸಿ ಪೋಟೋವನ್ನು ಸರ್ಚ್ ಮಾಡಿದಾಗ 98.5% ಕೃತಕವಾಗಿ ರಚಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಲ್ಮಾನ್ ಖಾನ್ ಮತ್ತು ತಮನ್ನಾ ಭಾಟಿಯಾ ಅವರ ಸ್ಕೈಡೈವಿಂಗ್ ಪೋಟೋವನ್ನು AIನಿಂದ ರಚಿಸಲಾಗಿದೆ. ಆದ್ದರಿಂದ ಇಂತಹ ಪೋಟೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check: ಮಹಾಕುಂಭ ಮೇಳದಲ್ಲಿ ಯುವತಿಯೊಬ್ಬಳು ಅಘೋರಿಯನ್ನು ಮದುವೆಯಾಗಿದ್ದಾಳೆ ಎಂಬುದು ಸುಳ್ಳು