Fact Check: ಹಂಗೇರಿಯನ್ ಪ್ರಧಾನಿ ವಿಕ್ಟರ್ ಒರ್ಬಾನ್ ಕೊಚ್ಚಿಯಲ್ಲಿ ತೆಗೆಸಿಕೊಂಡ ಫೋಟೋವನ್ನು ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಹಂಗೇರಿಯನ್ ಪ್ರಧಾನಿ

ಹಂಗೇರಿಯನ್ ಪ್ರಧಾನಿ ವಿಕ್ಟರ್ ಒರ್ಬಾನ್ ಅವರು ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದರು ಎಂದು ಪ್ರತಿಪಾದಿಸಿ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಈ ಪೋಟೋವನ್ನು ಹಂಚಿಕೊಂಡಿರುವವರು “ಹಂಗೇರಿಯನ್ ಪ್ರಧಾನಿ ವಿಕ್ಟರ್ ಓರ್ಬನ್ ಕುಂಭಮೇಳದಲ್ಲಿ ಭಾಗವಹಿಸಲು, ಭಾರತಕ್ಕೆ ಬಂದಿದ್ದಾರೆ ಮತ್ತು ಅಲ್ಲಿನ ದೃಶ್ಯಗಳನ್ನು ನೋಡಲು ಆಟೋರಿಕ್ಷಾದಲ್ಲಿ ಪ್ರಯಾಣಿಸಿದರು, ನೀವು ಈ ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿದ್ದರೆ, ಭಾರತಕ್ಕೆ ಬನ್ನಿ ಎಂದು ಓರ್ಬನ್ ಜಿ ಹೇಳುತ್ತಾರೆ” ಎಂದು ಪ್ರತಿಪಾದಿಸುತ್ತಿದ್ದಾರೆ.

ಈ ಚಿತ್ರವು ಕೊಚ್ಚಿಯದ್ದು ಮತ್ತು ಪ್ರಯಾಗ್ರಾಜ್ನ ಮಹಾ ಕುಂಭ ಮೇಳ 2025 ರದ್ದಲ್ಲ.

ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:‌

ಈ ಹೇಳಿಕೆ ಸುಳ್ಳು. ಈ ಫೋಟೋ ಜನವರಿ 2025 ರಲ್ಲಿ ಓರ್ಬನ್ ಕೇರಳದ ಕೊಚ್ಚಿಗೆ ಭೇಟಿ ನೀಡಿದಾಗ ತೆಗೆಸಿಕೊಂಡ ಪೋಟೋವಾಗಿದೆ.

ನಾವು ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ, ಜನವರಿ 10 ರಿಂದ ಅದೇ ವೈರಲ್ ಚಿತ್ರವನ್ನು ಹೊಂದಿರುವ ಹಲವಾರು ವರದಿಗಳು ನಮಗೆ ಲಭ್ಯವಾಗಿವೆ.  ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಮತ್ತು ದಿ ಪ್ರಿಂಟ್ ಹಂಚಿಕೊಂಡ ವರದಿಗಳ ಪ್ರಕಾರ, ಓರ್ಬನ್ ತನ್ನ ಪತ್ನಿ ಮತ್ತು ಇಬ್ಬರು ಕಿರಿಯ ಹೆಣ್ಣುಮಕ್ಕಳೊಂದಿಗೆ ಎರಡು ವಾರಗಳ ರಜೆಯಲ್ಲಿ ಕೇರಳದ ಕೊಚ್ಚಿಯಲ್ಲಿದ್ದರು.

ಈ ಚಿತ್ರವು ಕೊಚ್ಚಿಯದ್ದು ಮತ್ತು ಪ್ರಯಾಗ್ರಾಜ್ನ ಮಹಾ ಕುಂಭ ಮೇಳ 2025 ರದ್ದಲ್ಲ.

ಒರ್ಬನ್ ಕೊಚ್ಚಿಯಲ್ಲಿ ಆಟೋ ರಿಕ್ಷಾ ಚಾಲಕರೊಂದಿಗೆ ಸಂವಹನ ನಡೆಸುತ್ತಿದ್ದರು ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಅದರಲ್ಲಿ ಚಾಲಕ ಸಿದ್ದೀಕ್ ಹುಸೇನ್ ಅವರ ಉಲ್ಲೇಖವೂ ಇತ್ತು. “ಪ್ರವಾಸಕ್ಕೆ ಎರಡು ದಿನಗಳ ಮೊದಲು, ಫೋರ್ಟ್ ಕೊಚ್ಚಿಯ ಹೋಟೆಲ್‌ನಿಂದ ನನಗೆ ಕರೆ ಬಂತು. ಪ್ರಧಾನಿ, ಅವರ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಬರಲಿದ್ದಾರೆ ಮತ್ತು ಅವರು ದೃಶ್ಯವೀಕ್ಷಣೆಗೆ ತ್ರಿಚಕ್ರ ವಾಹನಗಳನ್ನು ಬಯಸುತ್ತಾರೆ ಎಂದು ಹೋಟೆಲ್ ಮ್ಯಾನೇಜರ್ ನನಗೆ ಹೇಳಿದರು. ಹೋಟೆಲ್ ನಾಲ್ಕು ಆಟೋ ರಿಕ್ಷಾಗಳನ್ನು ಕೇಳಿದೆ” ಎಂದು ಅವರು ಹೇಳಿದರು.

ಓರ್ಬನ್ 2025 ರ ಮಹಾ ಕುಂಭ ಮೇಳಕ್ಕೆ ಭೇಟಿ ನೀಡಿದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಲಭ್ಯವಾಗಿಲ್ಲ.

ನಾವು ಒರ್ಬಾನ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಪರಿಶೀಲಿಸಿದ್ದೇವೆ ಮತ್ತು ಅವರು ಪ್ರಯಾಗ್ರಾಜ್‌ಗೆ ಭೇಟಿ ನೀಡಿದ ಬಗ್ಗೆ ಯಾವುದೇ ಪೋಸ್ಟ್‌ಗಳು ಕಂಡುಬಂದಿಲ್ಲ. ಆದರೆ ಮನೋರಮಾ ಆನ್ ಲೈನ್ ಅವರು ಕೊಚ್ಚಿಗೆ ಭೇಟಿ ನೀಡಿದ ಬಗ್ಗೆ ವರದಿ ಮಾಡಿದ್ದಾರೆ.

ಆದ್ದರಿಂದ, ಹಂಗೇರಿಯನ್ ಪ್ರಧಾನಿ ವಿಕ್ಟರ್ ಒರ್ಬಾನ್ ಅವರು ಕೊಚ್ಚಿಯಲ್ಲಿ ತೆಗೆಸಿಕೊಂಡ ಫೋಟೋವನ್ನು ಪ್ರಯಾಗ್ರಾಜ್‌ನ ಮಹಾ ಕುಂಭ ಮೇಳ 2025 ರಲ್ಲಿ ಕ್ಲಿಕ್ ಮಾಡಲಾಗಿದೆ ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ರೈಲಿನಲ್ಲಿ ಕಳ್ಳತನ ಮಾಡಲು ಖರ್ಜೂರದಲ್ಲಿ ನಿದ್ರೆ ಮಾತ್ರೆ ಬೆರಸಿದ ವಿಡಿಯೋವನ್ನು ಕೋಮು ಆಯಾಮದೊಂದಿಗೆ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *