ಫೆಬ್ರವರಿ 5 ರಂದು ನಡೆದ 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಜಯ ಸಾಧಿಸಿತು. ಈ ಮೂಲಕ 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. 2015 ರಿಂದ ಅಧಿಕಾರದಲ್ಲಿದ್ದ ಆಮ್ ಆದ್ಮ ಪಕ್ಷ (ಎಎಪಿ) 22 ಸ್ಥಾನಗಳನ್ನು ಗೆದ್ದಿದೆ ಕಾಂಗ್ರೆಸ್ ಸತತ ಮೂರನೇ ಅವಧಿಗೆ ಯಾವುದೇ ಸ್ಥಾನಗಳನ್ನು ಗಳಿಸಲಿಲ್ಲ. ಹೀಗಿರುವಾಗ ಈಗ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಹೀನಾಯವಾಗಿ ಸೋತರು ಸಂಭ್ರಮಿಸಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
दिल्ली चुनाव में कांग्रेस के 00 पर लौटते ही दफ्तर से जश्न के वीडियो आने लगे हैं. #DelhiElectionResults #DelhiElections2025pic.twitter.com/YBTjCjxb5E
— बलिया वाले 2.0 (@balliawalebaba) February 8, 2025
ವೈರಲ್ ವಿಡಿಯೋದಲ್ಲಿ ಕೆಲವು ನಾಯಕರು ಕಾಂಗ್ರೆಸ್ ಕಚೇರಿಯಲ್ಲಿ ನೃತ್ಯ ಮಾಡುವಂತೆ ಕಂಡು ಬಂದಿದೆ. ಈ ವಿಡಿಯೋ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಹಂಚಿಕೊಳ್ಳಲಾಗುತ್ತಿರುವುದರಿಂದ ಹಲವರು ಇದು ಇತ್ತೀಚೆಗಿನ ವಿಡಿಯೋ ಎಂದು ಭಾವಿಸಿದ್ದಾರೆ. ಹೀಗಾಗಿ ವೈರಲ್ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
दिल्ली में भाजपा की जीत पर #INDIA गठबंधन की मुखिया
कांग्रेस दफ्तर में भांगड़ा नृत्य खुशियां 🤔@ArvindKejriwal टीम इस ट्वीट को संभाल कर रख लें,
हम तो पहले ही कहते आए हैं, कि भाजपा कांग्रेस मिले हूए हैं 🤷 pic.twitter.com/v1bdcZFIxu
— Tarsem Lal : मैं भी केजरीवाल , लडेंगे जीतेंगे 🔥🔥 (@tarsemkapahi) February 8, 2025
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 23 ಜನವರಿ 2025 ರಂದು ಸಂದೀಪ್ ಖಾಶ ಎಂಬುವವರು ವೈರಲ್ ವಿಡಿಯೋವಿನ ಮೂಲ ವಿಡಿಯೋವನ್ನು ಹಂಚಿಕೊಂಡು, ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆ ತನ್ನ ಥೀಮ್ ಸಾಂಗ್ ಬಿಡುಗಡೆ ಮಾಡಿದೆ ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.
कांग्रेस ने ढोल नगाड़े के साथ दिल्ली विधानसभा चुनाव के लिए अपने "थीम सॉन्ग" को लॉन्च किया। pic.twitter.com/UF4pbzn6Fn
— Sandeep Khasa (@SamKhasa_) January 23, 2025
ಇನ್ನು ಜನವರಿ 23 ರಂದು ನ್ಯೂಸ್ 24 ಕೂಡ ಇದೇ ವೀಡಿಯೊವನ್ನು ಪೋಸ್ಟ್ ಮಾಡಿದ್ದು ಕಂಡು ಬಂದಿದೆ, ಅದರಲ್ಲಿ ಕೂಡ ದೆಹಲಿ ಕಾಂಗ್ರೆಸ್ ತನ್ನ ಥೀಮ್ ಸಾಂಗ್ ಅನ್ನು ಬಿಡುಗಡೆ ಮಾಡಿದೆ, ನಾಯಕರು ಉತ್ಸಾಹದಿಂದ ನೃತ್ಯ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
दिल्ली कांग्रेस ने लॉन्च किया थीम सॉन्ग, जमकर थिरके नेता लोग @INCDelhi #Congress @NayakRagini pic.twitter.com/7bEC1fUfMw
— News24 (@news24tvchannel) January 23, 2025
ಈ ಬಗ್ಗೆ ಇನ್ನಷ್ಟು ವರದಿಗಳನ್ನು ಹುಡುಕಾಟ ನಡೆಸಿದಾಗ ಬಹುತೇಕ ಎಲ್ಲಾ ರಾಷ್ಟ್ರೀಯ ಮಾಧ್ಯಮಗಳು 23 ಜನವರಿ 2025ರಂದು ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯ ಸಲುವಾಗಿ ತನ್ನ ಥೀಮ್ ಹಾಡುಗಳನ್ನು ಬಿಡುಗಡೆಗೊಳಿಸಿದೆ ಎಂದೇ ವರದಿಗಳನ್ನು ಮಾಡಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್ ವಿಡಿಯೋವನ್ನು ದಾರಿ ತಪ್ಪಿಸುವ ಉದ್ದೇಶದಿಂದ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತರು ಅದರ ನಾಯಕರುಗಳು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ 23 ಜನವರಿ 2025ರಂದು ಕಾಂಗ್ರೆಸ್ ತನ್ನ ಚುನಾವಣ ಪ್ರಚಾರಕ್ಕಾಗಿ ಥೀಮ್ ಸಾಂಗ್ ಬಿಡುಗಡೆ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : FACT CHECK | ಅಮೆರಿಕದಿಂದ ಗಡೀಪಾರಾದ ಭಾರತೀಯರು ಎಂದು ಗ್ವಾಟೆಮಾಲಾಗೆ ಗಡೀಪಾರು ಮಾಡಲಾದ ಅಕ್ರಮ ವಲಸಿಗರ ಫೋಟೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ