Fact Check | ನ್ಯೂಜಿಲೆಂಡ್ ಸರ್ಕಾರ ಎಲ್ಲಾ ಮಸೀದಿಗಳನ್ನು ಮುಚ್ಚಲು ಆದೇಶಿಸಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ನ್ಯೂಜಿಲೆಂಡ್ ಸರ್ಕಾರ ಎಲ್ಲಾ ಮಸೀದಿಗಳನ್ನು ಮುಚ್ಚಲು ಆದೇಶಿಸಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಈ ಸುದ್ದಿಯನ್ನು ಕೆಲವು ಗುಂಪುಗಳು, ವಿಶೇಷವಾಗಿ ಬಲಪಂಥೀಯ ರಾಜಕೀಯ ಒಲವು ಹೊಂದಿರುವ ಫೇಸ್‌ಬುಕ್ ಗುಂಪುಗಳು ಮತ್ತು ವಾಟ್ಸಾಪ್ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶದ ಜೊತೆಗೆ ವಿದೇಶಗಳು ಮಸೀದಿಗಳನ್ನು ಮುಚ್ಚಲು ಕಾನೂನನ್ನು ಜಾರಿಗೆ ತರುತ್ತವೆ, ಆದರೆ ಭಾರತದಲ್ಲಿ ಮಾತ್ರ ಇದು ಸಾಧ್ಯವಿಲ್ಲ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ.

ಈ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ, ವಿಶೇಷವಾಗಿ ಧಾರ್ಮಿಕ ಸಮುದಾಯಗಳ ನಡುವೆ ಒಡಕು ಸೃಷ್ಟಿಸುವ ಗುರಿಯನ್ನು ಹೊಂದಿರುವುದು ಸ್ಪಷ್ಟವಾಗಿದೆ. ಕೆಲವರು ಇದನ್ನು ನಂಬಿ, ನ್ಯೂಜಿಲೆಂಡ್ ಸರ್ಕಾರ ಮುಸ್ಲಿಮ್ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಕೂಡ ಭಾವಿಸಿದ್ದಾರೆ. ಈ ಸುದ್ದಿಯು ಜನರನ್ನು ದಾರಿತಪ್ಪಿಸಿ, ಸರ್ಕಾರದ ನೀತಿಗಳ ಬಗ್ಗೆ ತಪ್ಪು ತಿಳುವಳಿಕೆಯನ್ನು ಹುಟ್ಟುಹಾಕಿದೆ. ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯುಂಟಾಗುವ ಸಾಧ್ಯತೆ ಇದೆ. ಹೀಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಸುದ್ದಿಯ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಈ ಕುರಿತು ಯಾವುದಾದರು ವರದಿಗಳು ಪ್ರಕಟವಾಗಿವೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಆದರೆ ಈ ಕುರಿತು ನಮಗೆ ಯಾವುದೇ ವರದಿಗಳು ಕಂಡು ಬಂದಿಲ್ಲ. ಹೀಗಾಗಿ ವೈರಲ್‌ ವರದಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.
ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಲು ನಾವು ವಿವಿಧ ರೀತಿಯ ಕೀ ವರ್ಡ್‌ಗಳನ್ನು ಬಳಸಿದೆವು. ಈ ವೇಳೆ ನಮಗೆ 20 ಮಾರ್ಚ್‌ 2019ರಂದು ದ ನ್ಯೂಜಿಲ್ಯಾಂಡ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಿಸಿದ ವರದಿಯೊದು ಕಂಡು ಬಂದಿದೆ. ಇದರಲ್ಲಿ ಭಯೋತ್ಪಾದಕ ದಾಳಿಯಲ್ಲಿ 50 ಜನರು ಸಾವನ್ನಪ್ಪಿದ ಒಂದು ವಾರದ ನಂತರ ಕ್ರೈಸ್ಟ್‌ಚರ್ಚ್ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ನಡೆಯಲಿದೆ ಎಂಬ ವರದಿ ಲಭ್ಯವಾಗಿದೆ. ಶಸ್ತ್ರಸಜ್ಜಿತ ಭಯೋತ್ಪಾದಕನೊಬ್ಬ 42 ಮಂದಿ ಆರಾಧಕರನ್ನು ಗುಂಡಿಕ್ಕಿ ಕೊಂದ ಒಂದು ವಾರದ ನಂತರ, ಕ್ರೈಸ್ಟ್‌ಚರ್ಚ್‌ನ ಅಲ್ ನೂರ್ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ನಡೆಸುವುದಾಗಿ ಇಸ್ಲಾಮಿಕ್ ನಾಯಕರು ಹೇಳಿರುವ ಕುರಿತು ಈ ವರದಿಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.
ಈ ಬಗ್ಗೆ ನ್ಯೂಜಿಲ್ಯಾಂಡ್‌ನ RNZ ಮಾಧ್ಯಮ ಕೂಡ ವರದಿಯನ್ನು ಮಾಡಿದ್ದು, ಇದರಲ್ಲಿ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭದ್ರತಾ ಕ್ರಮಗಳಿಗಾಗಿ ಪೊಲೀಸರು ಮಸೀದಿಗಳನ್ನು ಕೆಲವು ದಿನಗಳ ಕಾಲ ಮುಚ್ಚಲು ಕೇಳಿಕೊಂಡಿದ್ದಾರೆ ಎಂದು ತಿಳದು ಬಂದಿದೆ. ಇಲ್ಲಿ ಎಲ್ಲಿಯೂ ನ್ಯೂಜಿಲ್ಯಾಂಡ್‌ ಸರ್ಕಾರ ಮಸೀದಿಗಳನ್ನು ನ್ಯೂಜಿಲ್ಯಾಂಡ್‌  ಸರ್ಕಾರ ಶಾಶ್ವತವಾಗಿ ಮಸೀದಿ ಬಂದ್‌ ಮಾಡಲು ಹೇಳಿದೆ ಎಂಬ ಅಂಶ ಎಲ್ಲಿಯೂ ಉಲ್ಲೇಖವಾಗಿಲ್ಲ. ಹೀಗಾಗಿ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್‌ ಆಗಿರುವ ಪೋಸ್ಟ್‌ ಸಂಪೂರ್ಣವಾಗಿ ಸುಳ್ಳಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ನ್ಯೂಜಿಲ್ಯಾಂಡ್‌ ಸರ್ಕಾರ ತನ್ನ ದೇಶದಲ್ಲಿರುವ ಎಲ್ಲಾ ಮಸೀದಿಗಳನ್ನು ಮುಸಚ್ಚಲು ಆದೇಶವನ್ನು ನೀಡಿದೆ ಎಂಬುದು ಸಂಪೂರ್ಣವಾಗಿ ಸುಳ್ಳು. ವೈರಲ್‌ ಆಗುತ್ತಿರುವ ಪೋಸ್ಟ್‌ 2019ರಲ್ಲಿ ಭಯೋತ್ಪಾದನಾ ದಾಳಿಯ ನಂತರ ಭದ್ರತಾ ದೃಷ್ಟಿಯಿಂದ ತಾತ್ಕಾಲಿಕವಾಗಿ ಮಸೀದಿಯನ್ನು ಬಂದ್‌ ಮಾಡಲು ಪೊಲೀಸರು ಮನವಿ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವೈರಲ್‌ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ, ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ


ಇದನ್ನೂ ಓದಿ : Fact Check | ಮಗುವೊಂದನ್ನು ಅಪಹರಣ ಮಾಡುತ್ತಿರುವ ವಿಡಿಯೋ ಎಂದು ಸ್ಕ್ರಿಪ್ಟೆಡ್‌ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *