ಗಮನಾರ್ಹ ತಾಂತ್ರಿಕ ಪ್ರಗತಿಯಲ್ಲಿ, ಭಾರತ್ ಸಪ್ಲೈ ಅಂಡ್ ಸಪೋರ್ಟ್ (ಬಿಎಸ್ಎಸ್) ಅಲೈಯನ್ಸ್ ಎಕೆ -203 ಅಸಾಲ್ಟ್ ರೈಫಲ್ ಅನ್ನು ಕಡಿಮೆ ಎತ್ತರದ ಹಾರುವ ಡ್ರೋನ್‌ಗೆ ಸಂಯೋಜಿಸಿದೆ, ಇದು ಭಾರತದ ರಕ್ಷಣಾ ನಾವೀನ್ಯತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
Deadly Drone Developed: Bengaluru Firm BSS Alliance Makes AK-203 Armed Flying Threat That Can Hit Targets From The Air
📹 @IndianTechGuide pic.twitter.com/AkBTodpQHB
— RT_India (@RT_India_news) June 27, 2025
ಈ ವಿಡಿಯೋದಲ್ಲಿ ಕೂಡ ಡ್ರೋನ್ ಒಂದು ರೈಫಲ್ ಅನ್ನು ಹೊತ್ತು ಹಾರಾಟ ನಡೆಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಇದನ್ನು ನಿಜವೆಂದು ಭಾವಿಸಿರುವ ಹಲವರು ವೈರಲ್ ವಿಡಿಯೋವನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಕೆಲ ಮಾಧ್ಯಮಗಳು ಕೂಡ ಇದರ ಬಗ್ಗೆ ವರದಿ ಮಾಡಿರುವುದರಿಂದ, ಇದನ್ನು ನಿಜವಿಂದೆ ಸಾರ್ವಜನಿಕರು ಭಾವಿಸಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ opex 360.com ಎಂಬ ಸುದ್ದಿ ತಾಣವೊಂದು ಪ್ರಕಟಿಸಿದ ವರದಿಯೊಂದು ಕಂಡುಬಂದಿದೆ. ಇದರಲ್ಲಿ ರಷ್ಯಾದ ಕೈಗಾರಿಕೋದ್ಯಮಿಯೊಬ್ಬರು ರೈಫಲ್ ಅನ್ನು ಹೊತ್ತು ಸಾಗುವ ಮಿನಿ ಡ್ರೋನ್ ಅನ್ನು ಅಭಿವೃದ್ಧಿಪಡಿಸಿ, ಯಶಸ್ವಿಯಾಗಿ ಹಾರಾಟ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಈ ವರದಿಯನ್ನು 26 ಮಾರ್ಚ್ 2019 ರಂದು ಮಾಡಲಾಗಿತ್ತು. ಇದರಲ್ಲೂ ಕೂಡ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋ ಕನಿಷ್ಠ ಆರು ವರ್ಷಗಳಷ್ಟು ಹಿಂದಿನದು ಎಂಬುದು ನಮಗೆ ಸ್ಪಷ್ಟವಾಗಿದೆ.

ಈ ಬಗ್ಗೆ ಇನ್ನಷ್ಟು ಖಚಿತ ಮಾಹಿತಿಯನ್ನು ಪಡೆಯಲು ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ರಷ್ಯಾವು ಲೈಫಲ್ ಅನ್ನು ಹೊತ್ತೊಯ್ಯವ ಡ್ರೋನ್ ಅನ್ನು ಅಭಿವೃದ್ಧಿ ಪಡಿಸಿದೆ ಎಂದು 28 ಮಾರ್ಚ್ 2019ರಂದು ದ ಮಾಸ್ಕೊ ಟೈಮ್ಸ್ ಎಂಬ ಸುದ್ದಿ ಮಾಧ್ಯಮವು ವರದಿ ಪ್ರಕಟಿಸಿರುವುದು ಕಂಡುಬಂದಿದೆ. ಇದರಲ್ಲೂ ಕೂಡ ರಷ್ಯಾ ಈ ವಿನೂತನ ಡ್ರೋನ್ ಅನ್ನು ತನ್ನ ರಕ್ಷಣಾ ಕ್ಷೇತ್ರಕ್ಕಾಗಿ ಅಭಿವೃದ್ಧಿಪಡಿಸಿದೆ ಎಂದು ಉಲ್ಲೇಖಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವುದು ಕೂಡ ನಮಗೆ ಖಚಿತವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಬಿಎಸ್ಎಸ್ ಅಲೈಯನ್ನ್ ಸಂಸ್ಥೆ ರೈಫಲ್ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ ಎಂಬ ವಿಡಿಯೋ ಸುಳ್ಳು ಮಾಹಿತಿಯೊಂದಿಗೆ ಕೂಡಿದೆ. ಈ ವಿಡಿಯೋ ಕನಿಷ್ಠ 2019 ರಿಂದಲೂ ಕೂಡ ಸಾಮಾಜಿಕ ಜಾಲತಾಣದಲ್ಲಿದ್ದು, ಇದು ರಷ್ಯಾ ಅಭಿವೃದ್ಧಿಪಡಿಸಿದ ಡ್ರೋನ್‌ಗೆ ಸಂಬಂಧಿಸಿದ ವರದಿಯಾಗಿದೆ ಎಂಬುದು ಕೂಡ ಖಚಿತವಾಗಿದೆ. ಹೀಗಾಗಿ ಈ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಜಾರ್ಜ್ ಸೊರೊಸ್ ಪುತ್ರನ ವಿವಾಹ ಸಮಾರಂಭದಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ
