
Fact Check | ‘ಸ್ಟ್ರಾಬೆರಿ ಕ್ವಿಕ್’ ಎಂಬ ಮಾದಕ ವಸ್ತುವನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂಬುದು ಸುಳ್ಳು
ಗುಲಾಬಿ ಬಣ್ಣದ ಮಾತ್ರೆಗಳನ್ನು ಹೊಂದಿರುವ ಸಣ್ಣ ಪ್ಯಾಕೆಟ್‌ನ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಶಾಲೆಯಲ್ಲಿ ಹೊಸ ಔಷಧ: ಪೋಷಕರು ಇದರ ಬಗ್ಗೆ ತಿಳಿದುಕೊಳ್ಳಬೇಕು! ಇದು ಕ್ವಿನೈನ್ ಎಂದು ಆಡುಮಾತಿನಲ್ಲಿ ಕರೆಯಲ್ಪಡುವ ಹೊಸ ಔಷಧ” ಎಂಬ ಶೀರ್ಷಿಕೆಯೊಂದಿಗೆ ಪುಟ್ಟ ಗುಲಾಬಿ ಟೆಡ್ಡಿ ಬೇರ್‌ನ ಫೋಟೋ ವೈರಲ್ ಆಗುತ್ತಿದೆ. ಇದನ್ನು ಅಮೇರಿಕದ ಭಾಷೆಯಲ್ಲಿ“ಸ್ಟ್ರಾಬೆರಿ ಕ್ವಿಕ್” ಎಂದು ಕರೆಯಲಾಗುತ್ತಿದೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಸ್ಟ್ರಾಬೆರಿ ಪಾಪ್ ರಾಕ್ಸ್ (“ಪಾಪ್” ಆಗುವ ಮತ್ತು ಬಾಯಿಯಲ್ಲಿ ಸಿಡಿಯುವ ಕ್ಯಾಂಡಿ) ತರಹದ ಕ್ರಿಸ್ಟಲ್ ಮೆತ್…