ಹಳೆಯ ವಿಡಿಯೋಗಳನ್ನು ಇಸ್ರೇಲ್ ಮತ್ತು ಪ್ಯಾಲೆಸ್ತೈನ್‌ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ

ಗಾಜಾದಲ್ಲಿ ಹಮಾಸ್ ಫೈಟರ್‌ಗಳು ಇಸ್ರೇಲಿನ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾರೆ. ಮತ್ತು ಪ್ಯಾಲೆಸ್ತೇನ್ ಸ್ವಾತಂತ್ರ್ಯ ಹೋರಾಟಗಾರರು ಪ್ಯಾರಚುಟ್ ಮೂಲಕ ಇಸ್ರೇಲಿನ ಸೀಮೆಯ ಮೇಲೆ ಇಳಿದಿದ್ದಾರೆ ಎಂಬ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ಹಲವರು ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಪ್ಯಾಲೆಸ್ತೇನಿನ ಹಮಾಸ್ ಮಿಲಿಟರಿ ತಂಡ ಮತ್ತು ಇಸ್ಲಾಮ್ ಜಿಹಾದಿಗಳು ಗಾಜಾನಗರ ಸೇರಿದಂತೆ ಇಸ್ರೇಲಿನ ಮೇಲೆ ದಾಳಿ ಆರಂಭಿಸಿವೆ. ಇಸ್ರೇಲ್ ಸಹ ಪ್ಯಾಲೆಸ್ತೇನಿನ ಮೇಲೆ ಯುದ್ಧ ಘೋಷಿಸಿದೆ. ಈ ಎರಡೂ ದೇಶದ ಯುದ್ಧಕ್ಕೆ ಸಂಬಂಧಿಸಿದಂತೆ…

Read More

2021 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ವೀಡಿಯೊವನ್ನು ಮಣಿಪುರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

“ಮಣಿಪುರದಲ್ಲಿ ಸಂಗಿಗಳ ಅಟ್ಟಹಾಸ. ಐದು ಜನ ಹಿಂದು ಯುವಕರು ಕ್ರಿಶ್ಚಿಯನ್ ಯುವತಿಯೊಬ್ಬಳನ್ನು ಅಪಹರಿಸಿ, ಆಕೆಯನ್ನು ವಿವಸ್ತ್ರಗೊಳಿಸಿ, ಸಾಮೂಹಿಕ ಅತ್ಯಾಚಾರ ನಡೆಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಮಣಿಪುರದ ಹಿಂದುಗಳೂ ಸಹ ಬೆಂಬಲಿಸುತ್ತಿದ್ದಾರೆ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ.   ಆದರೆ ಇದು 2021ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವಾಗಿದ್ದು ಇದಕ್ಕೂ  ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ್ದಲ್ಲ. ಫ್ಯಾಕ್ಟ್‌ಚೆಕ್: ಬೆಂಗಳೂರಿನ ರಾಮಮೂರ್ತಿನಗರದ ಹೊರಹೊಲಯದಲ್ಲಿ ಮೇ, 2021ರಲ್ಲಿ ಬಂಗ್ಲಾದೇಶದ ಯುವಕರು 22 ವರ್ಷದ ಯುವತಿಯನ್ನು…

Read More

ಪಿಎಂ ಮುದ್ರಾ ಯೋಜನೆಯಲ್ಲಿ 20,55,000 ಸಾವಿರ ಸಾಲ ಕೊಡುತ್ತಾರೆ ಎಂಬುದು ಸುಳ್ಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಬಹಳಷ್ಟು ಜನಪ್ರಿಯವಾಗಿದ್ದು, ಈ ಯೋಜನೆಯ ಲಾಭವನ್ನು ಇಂದಿಗೂ ಹಲವರು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿನೇ ಒಂದಲ್ಲ ಒಂದು ಕಾರಣದಿಂದ ಈ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸುದ್ದಿಯಲ್ಲಿದೆ. ಆದರೆ ಈಗ ಇದೇ ಪಿಎಂ ಮುದ್ರಾ ಯೋಜನೆ ಸುಳ್ಳು ಸುದ್ದಿಯಿಂದ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಕುರಿತು ಕೇವಲ ಇದೊಂದು ಸುಳ್ಳು ಸುದ್ದಿ ಮಾತ್ರವಲ್ಲ, ಈ ವಿಚಾರದ ಕುರಿತು ನೀವು ಎಚ್ಚರಿಕೆಯನ್ನು ತೆಗೆದುಕೊಳ್ಳದೇ ಹೋದರೆ ನೀವು ಸೈಬರ್‌ ವಂಚನೆಗೆ ಒಳಗಾಗುವ…

Read More

ಗುಜರಾತ್‌ನ ಆಪ್‌ ಪಕ್ಷದ ನಾಯಕನ ಮನೆ ಮೇಲೆ ಇಡಿ ದಾಳಿ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ವಿಡಿಯೋವೊಂದು ವೈರಲ್‌ ಆಗಿದ್ದು, ಈ ವಿಡಿಯೋವನ್ನ ಬಳಸಿಕೊಂಡು ಗುಜರಾತ್‌ನ ಆಮ್‌ ಆದ್ಮಿ ಪಕ್ಷದ ವಿರುದ್ಧ ಅಪಪ್ರಚಾರವನ್ನ ಮಾಡಲಾಗುತ್ತಿದೆ. ಈ ಸುಳ್ಳು ಸುದ್ದಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ವಿಡಿಯೋವನ್ನೇ ಸತ್ಯವೆಂದು ಸಾಕಷ್ಟು ಮಂದಿ ಅಮಾಯಕರು ನಂಬಿಕೊಂಡಿದ್ದಾರೆ. ಹೀಗಾಗಿ ಈ ವಿಡಿಯೋದಲ್ಲಿ ಸತ್ಯ ಹಾಗೂ ಸುಳ್ಳು ಏನೆಂಬುವುದರ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ ಒಮ್ಮೆ ಓದಿ ಸುಳ್ಳು ; ಗುಜರಾತಿನ ಸೂರತ್‌ನಲ್ಲಿ ದೇಶದ ಅತ್ಯಂತ ಪ್ರಾಮಾಣಿಕ ರಾಜಕೀಯ ಪಕ್ಷವಾದ ಆಮ್…

Read More

ಭಾರತಕ್ಕೆ ಬಂದ ಎಲ್ಲಾ ಪಾಕ್ ಕ್ರಿಕೆಟಿಗರಿಗೂ ಕೇಸರಿ ಶಾಲು ಹಾಕಿ ಸ್ವಾಗತಿಸಿಲ್ಲ

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಕೂಡ ಆಗಿಮಿಸಿದೆ. ಇದೇ ಬುಧವಾರ ತಡರಾತ್ರಿ  ಹೈದರಾಬಾದ್‌ನಲ್ಲಿರುವ ರಾಜೀವ್‌ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಎಲ್ಲಾ ಸದಸ್ಯರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಲಾಯಿತು ಎಂಬ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ. ಆದರೆ ಇದರ ಹಿಂದಿರುವ ಅಸಲಿ ವಿಚಾರವೇ ಬೇರೆಯದ್ದಿದೆ. ಇದನ್ನ ತಿಳಿಯದ ದೇಶದ ಕೆಲ ಪ್ರಮುಖ ದೃಶ್ಯ ಮಾಧ್ಯಮಗಳು ಹಾಗೂ ದೈನಂದಿನ ಪತ್ರಿಕೆಗಳು ಯತಾವಥ್‌ ಆಗಿ…

Read More

ಗಾಂಧೀಜಿಯವರೊಂದಿಗೆ ರಾಹುಲ್‌ ಗಾಂಧಿ ಮಾತನಾಡಿದ್ದೇನೆಂದು ಸಮರ್ಥಿಸಿಕೊಂಡಿದ್ದಾರೆ ಎಂಬುವುದು ಸುಳ್ಳು

ರಾಹುಲ್‌ ಗಾಂಧಿಯವರು ತಾವು ಮಹಾತ್ಮ ಗಾಂಧೀಜಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂಬ ವಿಡಿಯೋವೊಂದು ವೈರಲ್‌ ಆಗಿದ್ದು, ಇದೀಗ ಆ ವಿಡಿಯೋ ಸುಳ್ಳು ಮತ್ತು ಬೇರೆ ವಿಡಿಯೋವೊಂದರ ಎಡಿಟೆಡ್‌ ವಿಡಿಯೋ ಎಂದು ತಿಳಿದ ತಕ್ಷಣ ಅವುಗಳನ್ನ ಸಾಮಾಜಿಕ ಜಾಲತಾಣದಿಂದ ತೆಗೆಯಲಾಗಿದೆ.   ಸುಳ್ಳು ; ರಾಹುಲ್‌ ಗಾಂಧಿ ಅವರು ತಾವು ಮಹಾತ್ಮ ಗಾಂಧೀಜಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಮತ್ತು ಮಹಾತ್ಮ ಗಾಂಧಿ ಅವರೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಹೊಂದಿದ್ದೆ, ಕೊನೆಗೆ ಗಾಂಧೀಜಿ ಅವರ ನಿಲುವು ಸರಿ ಇದೆ ಎಂದೆನೆಸಿತು…

Read More

1950ರ ನಂತರ ಬ್ರಿಟೀಷರು ತಮ್ಮ ಕಡತಗಳಲ್ಲಿ ಇಂಡಿಯಾ ಎಂಬ ಹೆಸರು ಬಳಕೆ ಮಾಡಿದ್ದರು ಎಂಬುವುದು ಸುಳ್ಳು

1950ರ ದಶಕದ ನಂತರ ಅಧಿಕೃತವಾಗಿ ಬ್ರಿಟೀಷರು ತಮ್ಮ ಕಡತಗಳ ಇಂಡಿಯಾ ಎಂಬ ಹೆಸರನ್ನ ಬಳಕೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ಬಲಪಂಥೀಯ ಯೂಟ್ಯೂಬ್‌ ಚಾನಲ್‌ ಸಂವಾದದಲ್ಲಿ ಹೆಚ್‌.ಎನ್‌ ಚಂದ್ರಶೇಖರ್‌ ತಪ್ಪು ಮಾಹಿತಿಯನ್ನು ನೀಡಿದ್ದಾರೆ, ಸತ್ಯ; 18ನೇ ಶತಮಾನದಿಂದಲೂ ಬ್ರಿಟೀಷರು ಭಾರತವನ್ನು ಇಂಡಿಯಾ ಎಂದೇ ಸಂಬೋಧಿಸುತ್ತಿದ್ದರು. ಅವರು ಜಾಗತಿಕ ನಕ್ಷೆಯಲ್ಲೂ ಕೂಡ ಇಂಡಿಯಾ ಎಂಬ ಹೆಸರನ್ನೇ ಬಳಸುತ್ತಿದ್ದರು. ಭಾರತವನ್ನು ಈಸ್ಟ್‌ ಇಂಡಿಯಾ ಕಂಪನಿ ಎಂದೇ ಕರೆಯುತ್ತಿದ್ದರು., ಬ್ರಿಟೀಷರು ಭಾರತದಲ್ಲಿ ಆಳ್ವಿಕೆ ಮಾಡಲು ಪ್ರಾರಂಭಿಸಿದಾಗಿನಿಂದ ಅವರ ದಾಖಲೆಗಳಲ್ಲಿ ಅಧಿಕೃತವಾಗಿ ಇಂಡಿಯಾ ಎಂಬ…

Read More

ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ ಎಂಬುದು ಸುಳ್ಳು

ಸೌದಿ ಅರೇಬಿಯಾದ ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಪಠ್ಯ ಬೋಧಿಸಲಾಗುತ್ತಿದೆ. ಆದರೆ ಭಾರತದಲ್ಲಿ ಇದರ ಬಗ್ಗೆ ಮಾತನಾಡಿದರೆ ಅವರು ಕೋಮುವಾದಿಗಳಾಗುತ್ತಾರೆ ಎಂದು ಫೇಕ್ ನ್ಯೂಸ್ ಹರಡಿ ಕುಖ್ಯಾತಿಯಾಗಿರುವ ಪೋಸ್ಟ್ ಕಾರ್ಡ್ ಕನ್ನಡ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ನಿಲುಮೆ ಎಂಬ ಬಲಪಂಥೀಯರ ಫೇಸ್ಬುಕ್ ಗ್ರೂಪ್ನಲ್ಲಿ ಸುವರ್ಣ ನ್ಯೂಸ್ ಲಿಂಕ್ ಅನ್ನು ಹಂಚಿಕೊಂಡು ಸೌದಿಯಲ್ಲಿ ರಾಮಾಯಣ ಮಹಾಭಾರತ ಬೋಧಿಸಲಾಗುತ್ತಿದೆ ಎಂದು ಪ್ರತಿಪಾದಿಸಿವೆ. ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಅರಬ್ ಯೋಗ ಫೌಂಡೇಷನ್ ಮುಖ್ಯಸ್ಥೆ ನೌಫ್ ಅಲ್ ಮರ್ವಾಯಿ ಎಂಬುವವರ ಟ್ವೀಟ್…

Read More

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್- ಮಹಿಳೆಗೆ ಬೆಂಕಿ ಹಚ್ಚಿದ್ದಾರೆ ಎಂಬುವುದು ಸುಳ್ಳು, ಈ ವಿಡಿಯೋ ಬಂಗಾಳದ್ದು

ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್ ನಡೆಸಲಾಗಿದೆ, ಹಿಂದೂ ಹುಡುಗಿಗೆ ಬೆಂಕಿ ಹಚ್ಚಿ ಕೊಲೆಗೈದಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಲವು ವಾಟ್ಸ್‌ಆಪ್‌ಗಳಲ್ಲಿ, ” ಉತ್ತರ ಪ್ರದೇಶದಲ್ಲಿ ಲವ್‌ ಜಿಹಾದ್‌ ಘಟನೆ, ಹಿಂದೂ ಹೆಣ್ಣು ಮಕ್ಕಳೇ ದಯವಿಟ್ಟು ನೋಡಿ, ನಮ್ಮ ಅಬ್ದುಲ್ಲ ಎಲ್ಲರಂತಲ್ಲ ಎನ್ನುವವರು ನೋಡಿ” ಎಂದು ಇಂಗ್ಲಿಷ್‌ ಮತ್ತು ಕನ್ನಡ ಮಿಶ್ರಿತ ಬರಹಗಳೊಂದಿಗೆ ವಾಟ್ಸಾಆಪ್‌ಗಳಲ್ಲಿ ಶೇರ್‌ ಮಾಡಲಾಗುತ್ತಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕನ್ನಡ ಫ್ಯಾಕ್ಟ್‌ ಚೆಕ್‌ ತಂಡದ…

Read More

ಸೋನಿ ಲೈವ್ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಎಂಬುದು ಎಡಿಟೆಡ್ ವಿಡಿಯೋ

ಸೂರ್ಯಕಾಂತ್ ಎಂಬ ಗಾಯಕನೊಬ್ಬ ಸೋನಿ ಲೈವ್ ನಡೆಸುವ ಇಂಡಿಯನ್ ಐಡಲ್ ಶೋನ 14 ನೇ ಆವೃತ್ತಿಯಲ್ಲಿ ಅಂಬೇಡ್ಕರ್ ಹಾಡು ಹಾಡಿ ಎಲ್ಲರೂ ಅಳುವಂತೆ ಮಾಡಿದ್ದಾರೆ ಎಂಬ ವಿಡಿಯೋಗಳು ಯೂಟೂಬ್ ನಲ್ಲಿ ಹರಿದಾಡುತ್ತಿವೆ. ಫ್ಯಾಕ್ಟ್‌ಚೆಕ್ : ಸೂರ್ಯಕಾಂತ್ ತಾನು ಸೋನಿ ನಡೆಸುವ ಪ್ರತಿಷ್ಠಿತ ಇಂಡಿಯನ್ ಐಡಲ್ ನಲ್ಲಿ ಹಾಡುತ್ತಿರುವಂತೆ ಹಂಚಿಕೊಂಡಿರುವ ವಿಡಿಯೋ ಎಟಿಟೆಡ್ ಆಗಿದೆ. RK ಸೂಪರ್ ಡ್ಯಾನ್ಸರ್ ಎಂಬ ಯೂಟೂಬ್ ಖಾತೆ ಹೊಂದಿರುವ ಸೂರ್ಯಕಾಂತ್ ಉತ್ತಮ ಡ್ಯಾನ್ಸರ್ ಮತ್ತು ಗಾಯಕರಾಗಿದ್ದಾರೆ. ಅವರು ತಮ್ಮ ಹಾಡುಗಳು ಹೆಚ್ಚು ಜನರಿಗೆ…

Read More