Fact Check: ಪತ್ರಕರ್ತ ರಜತ್ ಶರ್ಮಾ ಹೃದಯ ಸಂಬಂಧಿ ಕಾಯಿಲೆಗಳಿಗೆ ಮನೆಮದ್ದು ಸೂಚಿಸಿದ್ದಾರೆ ಎಂಬುದು ಡೀಪ್‌ಫೇಕ್ ವಿಡಿಯೋ
ಇಂಡಿಯಾ ಟಿವಿ ನ್ಯೂಸ್‌ನ ಪ್ರಧಾನ ಸಂಪಾದಕ ರಜತ್ ಶರ್ಮಾ ಅವರು ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ‘ತ್ವರಿತ ಮನೆಮದ್ದುಗಳನ್ನು’ ಸೂಚಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ರಜತ್ ಶರ್ಮಾ ಅವರ ಆರೋಗ್ಯ ಸಲಹೆ ಎಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋ ಆರ್ಕೈವ್ ಅನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್ ಚೆಕ್: ಇದೊಂದು ಡೀಪ್ ಫೇಕ್ ವಿಡಿಯೋವಾಗಿದೆ. ಮೂಲ ವಿಡಿಯೋ ಜೂನ್ 2024 ಕ್ಕಿಂತ ಹಿಂದಿನದ್ದಾಗಿದ್ದು, ತಮ್ಮ ಚಾನೆಲ್‌ನಲ್ಲಿ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕಿ ರಾಗಿನಿ…
