Fact Check | ಡಾ.ಮನಮೋಹನ್ ಸಿಂಗ್‌ ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರು ಎಂಬುದು ಸುಳ್ಳು

ವ್ಯಕ್ತಿಯೊಬ್ಬ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್‌ ಚಿತ್ರದಲ್ಲಿ ವ್ಯಕ್ತಿಯು ದಿವಂಗತ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಎಂದು ಬಣ್ಣಿಸಲಾಗಿದೆ.   “ಚಮ್ಚಾಗಳು ಎಲ್ಲಿದ್ದಾರೆ?” ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಡಾ. ಮನಮೋಹನ ಸಿಂಗ್‌ ಸೋನಿಯಾ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರಾ! ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. Kaha gaye chamche pic.twitter.com/43ZyfojnWt — Kungfu Pande 🇮🇳 (Parody) (@pb3060) December…

Read More

Fact Check : ರಾಹುಲ್ ಗಾಂಧಿ ಕನ್ನಡ ಪತ್ರಿಕೆ ಓದಿದ್ದರು ಎಂಬುದು ಸುಳ್ಳು

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಕನ್ನಡ ಪತ್ರಿಕೆಯನ್ನು ಓದಿದ್ದಾರೆ ಎಂಬ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಪತ್ರಿಕೆಯ ಮೊದಲ ಪುಟವನ್ನು ಕನ್ನಡದಲ್ಲಿ ಬರೆಯಲಾಗಿದೆ ಎಂಬ ಕಾರಣಕ್ಕಾಗಿ ಅನೇಕ ಬಳಕೆದಾರರು ಅದನ್ನು ಗೇಲಿ ಮಾಡುತ್ತಾ ಹಂಚಿಕೊಳ್ಳುತ್ತಿದ್ದಾರೆ. ಹಿಂದಿ ಸರಿಯಾಗಿ ಬಾರದಿರುವವರು ಕನ್ನಡ ಪತ್ರಿಕೆಯನ್ನು ಓದಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟರ್‌ನ ಕುರಿತು ನಿಜವನ್ನು…

Read More

Fact Check : ಈ ರೀತಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇರಿಸಿರುವುದು ಕರ್ನಾಟಕ ಪರಿಷತ್ತಿನಲ್ಲಿ ಹೊರತು ಕೇಂದ್ರ ಸಂಸತ್ತಿನಲ್ಲಲ್ಲ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಕುರಿತು ಮಾತನಾಡಿರುವ  ವಿವಾದದ ಹೇಳಿಕೆಯ ನಡುವೆ, ಕೇಂದ್ರ ಸಂಸತ್ತಿನಲ್ಲಿ ಪ್ರತಿಪಕ್ಷದ ಸದಸ್ಯರ ಆಸನದ ಮೇಲೆ ಅಂಬೇಡ್ಕರ್ ಅವರ ಚಿತ್ರವಿರಿಸಿ ಶಾ ವಿರುದ್ಧ ಪ್ರತಿಭಟಿಸಿದ್ದಾರೆ ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಬಿಗ್‌ ಬ್ರೇಕಿಂಗ್‌# ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ಆಸನದ ಮೇಲೆ ಬಾಬಾಸಾಹೇಬ ಅಂಬೇಡ್ಕರ್‌ ಅವರ ಫೋಟೋವನ್ನಿಡಲಾಗಿದೆ. ಜೈ ಭೀಮ್‌” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಪೋಸ್ಟ್‌ವೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌:…

Read More
ಬರಾಕ್‌ ಒಬಾಮ

Fact Check: ಬರಾಕ್‌ ಒಬಾಮ ಅವರು ತಮ್ಮ ಆತ್ಮಚರಿತ್ರೆ ʼಎ ಪ್ರಾಮಿಸ್ಡ್‌ ಲ್ಯಾಂಡ್‌ʼ ನಲ್ಲಿ ಕಾಂಗ್ರೆಸ್‌ ನಾಯಕರನ್ನು ಟೀಕಿಸಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವರದಿಯೊಂದು ವೈರಲ್‌ ಆಗುತ್ತಿದ್ದು ಅದರಲ್ಲಿ “ಅಮೇರಿಕಾದ ಮಾಜಿ ಅಧ್ಯಕ್ಷ ಬಾರಕ್‌ ಒಬಾಮ ಅವರು ತಮ್ಮ ಆತ್ಮಚರಿತ್ರೆ “ಎ ಪ್ರಾಮಿಸ್ಡ್‌ ಲ್ಯಾಂಡ್‌” ನಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ನಾಯಕ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ್ದಾರೆ ಮತ್ತು ಕಾಂಗ್ರೆಸ್‌ ಪಕ್ಷ ಭಾರತದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಪುಸ್ತಕದಲ್ಲಿ ಆರೋಪಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವವರು “ಬರಾಕ್ ಒಬಾಮ ಅವರು ತಮ್ಮ “ದಿ ಪ್ರಾಮಿಸ್ಡ್ ಲ್ಯಾಂಡ್”…

Read More

FACT CHECK : ಪ್ರಧಾನಿ ನರೇಂದ್ರ ಮೋದಿಯವರು 2014ಕ್ಕೂ ಮುನ್ನ ಇವಿಎಂಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂಬುದು ಸುಳ್ಳು

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಯ ನಂತರ, ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಇವಿಎಂ ಆಧಾರಿತ ಚುನಾವಣೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ನಡುವೆ ನರೇಂದ್ರ ಮೋದಿ ಅವರು 2014ಕ್ಕೂ ಮುನ್ನ ಇವಿಎಂಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂಬ ಸಂದೇಶದೊಂದಿಗೆ ಪ್ರಧಾನಿಯವರು ಮಾತಾಡಿರುವ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಳತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರ ‘ಭಾರತೀಯ ದುರ್ಗಾ’ ನವೆಂಬರ್ 28ರಂದು “2014 ಕ್ಕೂ ಮೊದಲು ಸಾಹೇಬರೂ ಇವಿಎಂ ವಿರುದ್ಧವಾಗಿದ್ದರು. ಬ್ಯಾಲೆಟ್‌…

Read More
ಸಂಜಯ್ ನಿರುಪಮ್

Fact Check: ಸಂಜಯ್ ನಿರುಪಮ್ ಅವರು ಬಿಜೆಪಿಗೆ ಮತ ಚಲಾಯಿಸುವಂತೆ ಮತದಾರರನ್ನು ಕೇಳುತ್ತಿರುವ ಹಳೆಯ ವಿಡಿಯೋವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ

ಇಂದು ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ ಮಾಜಿ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಅವರು ಕಾಂಗ್ರೆಸ್‌ಗೆ ಮತಗಳನ್ನು ವ್ಯರ್ಥ ಮಾಡುವುದನ್ನು ತಪ್ಪಿಸಿ ಮತ್ತು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಎಲ್ಲಾ 288 ಕ್ಷೇತ್ರಗಳನ್ನು ಒಳಗೊಂಡಂತೆ 2024 ರ ನವೆಂಬರ್ 20 ರಂದು ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ….

Read More

Fact Check I ಮಹಾರಾಷ್ಟ್ರ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯ ರ್ಯಾಲಿಯಲ್ಲಿ ಇಸ್ಲಾಮೀ ಧ್ವಜಗಳನ್ನು ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

ಮಹಾರಾಷ್ಟ್ರದಲ್ಲಿ ನವೆಂಬರ್‌ 20ರಂದು ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.  ವಿಧಾನಸಭೆ ಚುನಾವಣೆಗೂ ಮುನ್ನ ಶಿವಸೇನೆ(ಯುಬಿಟಿ), ಕಾಂಗ್ರೆಸ್‌ ಸೇರಿದಂತೆ ಮಹಾ ವಿಕಾಸ್‌ ಅಘಾಡಿ ನಾಯಕರ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದು, ಸುಳ್ಳು ಸುದ್ದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗ ಕಾಂಗ್ರೆಸ್‌  ಅಭ್ಯರ್ಥಿ ಸಾಜಿದ್ ಖಾನ್ ಪಠಾಣ್  ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ  ಅಕೋಲಾ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಾಜಿದ್ ಖಾನ್ ಪಠಾಣ್ ಹಾಗೂ ಬಿಜೆಪಿಯಿಂದ ವಿಜಯ್ ಅಗರ್ವಾಲ್ ಸ್ಪರ್ಧಿಸುತ್ತಿದ್ದಾರೆ. ಸಾಜಿದ್‌ ಖಾನ್‌ರವರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ…

Read More
ಪ್ಲಾಸ್ಟಿಕ್‌ ಅಕ್ಕಿ

Fact Check: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರಸಲಾಗಿದೆ ಎಂಬುದು ಸುಳ್ಳು

ಅನ್ನ ಭಾಗ್ಯ ಯೋಜನೆಯು ಕರ್ನಾಟಕ ಸರ್ಕಾರದ ಆಹಾರ ಭದ್ರತಾ ಕಾರ್ಯಕ್ರಮವಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಬ್ಸಿಡಿ ಅಕ್ಕಿ ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಕುಟುಂಬಗಳು ಉಚಿತ ಅಕ್ಕಿಯನ್ನು ಪಡೆಯುತ್ತವೆ, ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸಬೇಕು ಎಂದು ರೂಪಿಸಿದ ಪ್ರಮುಖ ಜನಪರ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಒಂದಾಗಿದೆ. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಅನೇಕ ಆರೋಪಗಳು ಕೇಳಿ ಬರುತ್ತಿದ್ದು, ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಗಳು ಕಂಡು ಬಂದಿವೆ ಎಂದು ಆರೋಪಿಸಲಾಗುತ್ತಿದೆ. “ಸರ್ಕಾರ ಕೊಡುತ್ತಿರುವ 10…

Read More

Fact Check : ಮೀಸಲಾತಿ ತೆಗೆದುಹಾಕುತ್ತೇವೆ ಎಂದು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಹೇಳಿಲ್ಲ

“ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನಕ್ಕೇ ಬೆಂಕಿ ಇಡಲು @INCIndia ಚಿಂತನೆ ನಡೆಸಿದೆ. ಮಂದ ಬುದ್ಧಿಯ ಬಾಲಕ @RahulGandhi ಅವರು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನೇ ಕಿತ್ತು ಹಾಕುವುದಾಗಿ ದೂರದ ಅಮೆರಿಕದಲ್ಲಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್‌ ಬಡವರು, ದೀನ ದಲಿತರು, ಶೋಷಿತರು, ಪರಿಶಿಷ್ಟರು, ಬುಡಕಟ್ಟು ಸಮುದಾಯದವರ ವಿರೋಧಿ ಎನ್ನುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಇನ್ನೇನು ಬೇಕು?” ಎಂದು ಬಿಜೆಪಿಯವರು ತನ್ನ ಕರ್ನಾಟಕ  ಎಕ್ಸ್‌ ( ಈ ಹಿಂದಿನ ಟ್ವಿಟರ್‌)ನಲ್ಲಿ ಎಡಿಟೆಡ್‌ ವಿಡಿಯೋವನ್ನು ಈ ಹಿಂದೆ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಮತ್ತೊಂದು…

Read More

Fact Check: ವಿಧಾನಸೌಧ ಸ್ವಚ್ಚಗೊಳಿಸುವ ವೇಳೆ ಹೊರಗೆ ಇಟ್ಟಿದ್ದ ಪೋಟೋವನ್ನು ಸಿದ್ದಗಂಗಾ ಶ್ರೀಗಳಿಗೆ ಕಾಂಗ್ರೆಸ್‌ ಅವಮಾನಿಸಿದೆ ಎಂದು ಹಂಚಿಕೆ

ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ, ತಮ್ಮ ಜನಪರ ಕೆಲಸಗಳ ಮೂಲಕ ನಡೆದಾಡುವ ದೇವರೆಂದು ಪ್ರಸಿದ್ಧರಾಗಿದ್ದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಅವರ ವಿಧಾನಸೌಧದೊಳಗಿದ್ದ ಫೋಟೋಗಳನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರಗೆ ಹಾಕಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಶಿವಕುಮಾರ ಸ್ವಾಮೀಜಿಯವರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಡಿಯೋವನ್ನು ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿತ ರಾಷ್ಟ್ರಧರ್ಮ ಎಂಬ ಪುಟವೊಂದು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಿದ್ದು…

Read More