
Fact Check: ದೆಹಲಿಯಲ್ಲಿ ಪೋಲಿಸರು ಸಾರ್ವಜನಿಕರ ಮೇಲೆ ಲಾಠಿ ಪ್ರಯೋಗ ನಡೆಸಿದ್ದಾರೆ ಎಂದು ಗುಜರಾತಿನ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ಪೊಲೀಸ್ ಠಾಣೆಯ ಎದುರು ಜಮಾಯಿಸಿರುವ ಜನರನ್ನು ಲಾಠಿ ಚಾರ್ಜ್ ಮೂಲಕ ಪೋಲಿಸರು ಓಡಿಸುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ವಿಡಿಯೋದಲ್ಲಿ, ಪೊಲೀಸರು ಕೆಲವು ವ್ಯಕ್ತಿಗಳ ಮೇಲೆ ಲಾಠಿ ಪ್ರಯೋಗಿಸುವುದನ್ನು ಕಾಣಬಹುದು, ಆದರೆ ನಾಗರಿಕ ಉಡುಪನ್ನು ಧರಿಸಿದ ಇತರರು ಸಹ ಕೋಲುಗಳನ್ನು ಹಿಡಿದು ಸಾರ್ವಜನಿಕರಿಗೆ ಹೊಡೆಯುವುದನ್ನು ಕಾಣಬಹುದು. ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ಈ ವಿಡಿಯೋ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಘಟನೆ ಎಂದು ಪ್ರತಿಪಾದಿಸುತ್ತಿದ್ದಾರೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ:…