FACT CHECK : ಪಂಜಾಬ್ ಪೊಲೀಸ್ ಅಧಿಕಾರಿ ಗಾಂಜಾ ಮಾರುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಪಾಕಿಸ್ತಾನದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ಸಾಮಾಜಿಕ ಜಾಲತಾಣಗಳಲ್ಲಿ ವರದಿಗಾರನೊಬ್ಬ ಪೊಲೀಸ ಅಧಿಕಾರಿಯ ಹಿಂದೆ ಓಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಪಂಜಾಬ್ ಪೋಲೀಸರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಪೋಲೀಸರ ಹಿಂದೆ ವರದಿಗಾರ ಓಡುತ್ತಿರುವುದನ್ನು ಕೇಳಬಹುದು. ದೆಹಲಿಯ ಕೇಜ್ರಿವಾಲ್ ಸರ್ಕಾರವನ್ನು ಗುರಿಯಾಗಿಸಿ ಮತ್ತು ಪಂಜಾಬ್ ಪೊಲೀಸರನ್ನು ಉಲ್ಲೇಖಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ಫೇಸ್ಬುಕ್ ಬಳಕೆದಾರರು, “ಹೈ ಲೆವೆಲ್ ಗ್ರೌಂಡ್ ರಿಪೋರ್ಟಿಂಗ್”. ಎಲ್ಲಾ ವರದಿಗಾರರು ಹೀಗಾದರೆ, ದೇಶವು ಸುಧಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ! ಅದೇನೇ…
