
ಅಯೋಧ್ಯೆಯ ಪ್ರಾಣ ಪ್ರತಿಷ್ಟೆ ಸಂದರ್ಭದ ಚಿತ್ರಗಳು ಎಂದು ಬೇರೆ ಸ್ಥಳಗಳ ಪೋಟೋ ಹಂಚಿಕೆ
ಕೆಲವು ದಿನಗಳ ಹಿಂದೆಯಷ್ಟೇ ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಟೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಈ ಕಾರ್ಯಕ್ರಮಕ್ಕೆ ಮೊದಲು ಸಹ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಮತ್ತು ಕಾರ್ಯಕ್ರಮದ ನಂತರ ಸಹ ಈಗ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಶ್ರೀ ರಾಮನ ಭಕ್ತನೊಬ್ಬ ತನ್ನ ಕೈಗಳ(ತಲೆಕೆಳಗಾಗಿ) ಮೂಲಕ ನಡೆದುಕೊಂಡು ಅಯೋಧ್ಯೆಯನ್ನು ತಲುಪಿದ್ದಾನೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು TV9 ಭಾರತ್ವರ್ಷ್ ಮತ್ತು ಇಂಡಿಯನ್ ಟಿವಿ ಎಂಬ ಸುದ್ದಿ ಮಾಧ್ಯಮಗಳು ಈ ವಿಡಿಯೋವನ್ನು ಹಂಚಿಕೊಂಡಿವೆ….