ರಂಜಾನ್ ಮಾಸದ ಪ್ರಯುಕ್ತ ಮಸೀದಿಗಳಿಗೆ ಮಾತ್ರ ಉಚಿತ ನೀರು: ಈ ಪೋಟೊ 2017ರದು ಮತ್ತು ಸಿದ್ದರಾಮಯ್ಯನವರಿಗೆ ಸಂಬಂಧಿಸಿಲ್ಲ
ಮಾನವಿ ಪಟ್ಟಣದಲ್ಲಿ ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಉಚಿತ ನೀರು ಸರಬರಾಜು (ಮಸೀದಿಗಳಿಗೆ ಮಾತ್ರ) ಎಂಬ ಬ್ಯಾನರ್ ಹೊಂದಿರುವ ನೀರಿನ ಟ್ಯಾಂಕರ್ ಒಂದರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಂಡು ಸಿದ್ದರಾಮಯ್ಯನವರು ಲೋಕಸಭಾ ಚುನಾವಣೆಯಲ್ಲಿ ಓಟಿಗಾಗಿ ಮುಸ್ಲಿಮರ ಓಲೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ವೈರಲ್ ಆಗುತ್ತಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಸರ್ಚ್ ಮಾಡಿದಾಗ ಈ ಫೋಟೊ 2017ರಿಂದಲೇ ಅಂತರ್ಜಾಲದಲ್ಲಿ ಇರುವುದು ಪತ್ತೆಯಾಗಿದೆ. ಗುಜ್ಜಲ ಅಂಜಿ ನಾಯಕ ಕೋಟೆಕಲ್…