Fact Check: ಡಾ. ಮನಮೋಹನ್ ಸಿಂಗ್ ಅವರ ಶೋಕಾಚರಣೆಯ ದಿನದಂದು ರಾಹುಲ್ ಗಾಂಧಿ ಅವರ ಕುಟುಂಬ ವಿಯೆಟ್ನಾಂ ಪ್ರವಾಸಕ್ಕೆ ಹೋಗಿದ್ದಾರೆ ಎಂಬುದು ಸುಳ್ಳು

ಡಿಸೆಂಬರ್ 26, 2024 ರಂದು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನರಾದರು. ಅವರ ನಿಧನಕ್ಕೆ ಸಂತಾಪ ಸೂಚಕವಾಗಿ, ಕೇಂದ್ರ ಸರ್ಕಾರವು 26 ಡಿಸೆಂಬರ್ 2024 ರಿಂದ 01 ಜನವರಿ 2025 ರವರೆಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) 7 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಶೋಕಾಚರಣೆಯ ದಿನದಂದು ರಾಹುಲ್ ಗಾಂಧಿ / ಸೋನಿಯಾ ಗಾಂಧಿ ಅವರ ಕುಟುಂಬವು ವಿಯೆಟ್ನಾಂ ಪ್ರವಾಸಕ್ಕೆ ಹೋಗಿದ್ದಾರೆ ಎಂಬ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ)…

Read More
ಪ್ರಿಯಾಂಕಾ ಗಾಂಧಿ

Fact Check: ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ʼಮೆರ್ರಿ ಕ್ರಿಸ್ಮಸ್ʼ ಫಲಕಗಳನ್ನು ಹಿಡಿದಿರುವ ವೈರಲ್ ಚಿತ್ರವು ಎಐ-ರಚಿತವಾಗಿದೆ

 ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ “ಮೆರ್ರಿ ಕ್ರಿಸ್ಮಸ್” ಎಂಬ ಫಲಕಗಳನ್ನು ಹಿಡಿದಿರುವ ಚಿತ್ರವು ಕಳದ ಒಂದು ವಾರಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಪೋಟೋವನ್ನು ಬಳಸಿಕೊಂಡು ಹಿಂದೂ ಹಬ್ಬಗಳಿಗೆ ಶುಭಾಶಯಗಳನ್ನು ಕೋರದವರು ಕ್ರಿಸ್ಮಸ್‌ಗೆ ಮಾತ್ರ ಶುಭ ಕೋರಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಪೋಟೋವನ್ನು ಹಂಚಿಕೊಂಡಿರುವವರು ಹಿಂದಿಯಲ್ಲಿ “ನೀವು ಎಂದಾದರೂ ಅವರ ಹೋಳಿ, ದೀಪಾವಳಿ ಅಥವಾ ರಕ್ಷಾಬಂಧನಕ್ಕೆ ಶುಭಾಶಯ ಕೋರಿರುವ ಚಿತ್ರವನ್ನು ನೋಡಿದ್ದರೆ , ದಯವಿಟ್ಟು ಹೇಳಿ. ಸ್ನೇಹಿತರೇ…”…

Read More

Fact Check | ನಿತಿನ್ ಗಡ್ಕರಿ ರಾಹುಲ್ ಗಾಂಧಿಯವರನ್ನು ಹೊಗಳಿದ್ದಾರೆ ಎಂಬುದು ಸುಳ್ಳು

ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಸಂದರ್ಶನದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಸಂದರ್ಶಕರು ನಿತಿನ್ ಗಡ್ಕರಿಯವರಿಗೆ ರಾಹುಲ್ ಗಾಂಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನೆ ಕೇಳಿದ್ದಾರೆ. “ಗಾಂಧಿಯವರನ್ನು ನಾನು ಭೇಟಿಯಾದಾಗ, ಅವರು ಮಹಾನ್ ವ್ಯಕ್ತಿಗಳು ಎಂದು ನಾನು ಅರಿತುಕೊಂಡೆ” ರಾಹುಲ್ ಗಾಂಧಿ🔥🔥🔥ಎಂದು ಗಡ್ಕರಿಯವರು ಗಾಂಧಿಯವರನ್ನು ಹೊಗಳಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್‌ ಚೆಕ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುವ…

Read More

Fact Check : ರಾಹುಲ್ ಗಾಂಧಿ ಕನ್ನಡ ಪತ್ರಿಕೆ ಓದಿದ್ದರು ಎಂಬುದು ಸುಳ್ಳು

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಕನ್ನಡ ಪತ್ರಿಕೆಯನ್ನು ಓದಿದ್ದಾರೆ ಎಂಬ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಪತ್ರಿಕೆಯ ಮೊದಲ ಪುಟವನ್ನು ಕನ್ನಡದಲ್ಲಿ ಬರೆಯಲಾಗಿದೆ ಎಂಬ ಕಾರಣಕ್ಕಾಗಿ ಅನೇಕ ಬಳಕೆದಾರರು ಅದನ್ನು ಗೇಲಿ ಮಾಡುತ್ತಾ ಹಂಚಿಕೊಳ್ಳುತ್ತಿದ್ದಾರೆ. ಹಿಂದಿ ಸರಿಯಾಗಿ ಬಾರದಿರುವವರು ಕನ್ನಡ ಪತ್ರಿಕೆಯನ್ನು ಓದಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟರ್‌ನ ಕುರಿತು ನಿಜವನ್ನು…

Read More

Fact Check: ರಾಹುಲ್‌ ಗಾಂಧಿಯವರು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರನ್ನು ತಳ್ಳಿದ್ದಾರೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ

ಗೃಹ ಮಂತ್ರಿ ಅಮಿತ್‌ ಶಾ ಅವರು ಡಾ. ಬಿ. ಆರ್‌ ಅಂಬೇಡ್ಕರ್‌ ಅವರ ಕುರಿತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಇಂಡಿಯಾ ಒಕ್ಕುಟ ಸೇರಿದಂತೆ ದೇಶದ ಹಲವು ಸಂಘಟನೆಗಳು ಗೃಹಮಂತ್ರಿಗಳು ದೇಶದ ಜನರನ್ನು ಕ್ಷಮೆ ಕೋರಿ, ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತು ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ…

Read More
ಶೇಖ್ ಹಸೀನಾ

Fact Check: ಶೇಖ್ ಹಸೀನಾ ಭಾರತದಲ್ಲಿ ಹಿಂದೂ ಆಚರಣೆಗಳನ್ನು ಅನುಸರಿಸುತ್ತಿದ್ದಾರೆ ಎಂದು ನಕಲಿ ಫೋಟೋ ಹಂಚಿಕೊಳ್ಳಲಾಗುತ್ತಿದೆ

ತೀವ್ರ ಪ್ರತಿಭಟನೆಯ ನಂತರ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಖ್ ಹಸೀನಾ ಈಗ ಬಿಗಿ ಭದ್ರತೆಯಲ್ಲಿ ಅಡಗಿಕೊಂಡಿದ್ದಾರೆ ಎಂದು ವರದಿಯಾಗಿದೆ, ಅಲ್ಲಿ ಅವರು ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿರುವುದನ್ನು ಕಾಣಬಹುದು ಎಂದು ಪೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಈ ಚಿತ್ರವು ಶೇಖ್ ಹಸೀನಾ ಹಿಂದೂ ಸನ್ಯಾಸಿಗಳಿಂದ ಆಶೀರ್ವಾದ ಪಡೆಯುತ್ತಿರುವುದನ್ನು ತೋರಿಸುತ್ತದೆ ಮತ್ತು ಅವರ ಹಿಂದೂ ಪರ ಒಲವು ತೋರಿಸುತ್ತದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಂತಹ ಅನೇಕ ಪ್ರತಿಪಾದನೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್ ಚೆಕ್: ವೈರಲ್ ಫೋಟೋವನ್ನು ರಿವರ್ಸ್…

Read More
ಚಂಪೈ ಸೊರೆನ್

Fact Check: ಚಂಪೈ ಸೊರೆನ್ ಜಾರ್ಖಂಡ್ ಮುಕ್ತಿ ಮೋರ್ಚಾಗೆ ಮರಳಲು ಬಯಸುತ್ತಾರೆ ಎಂದು ಸುಳ್ಳು ಹೇಳಲು ಹಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

ಹಿರಿಯ ರಾಜಕಾರಣಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಚಂಪೈ ಸೊರೆನ್ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಕುರಿತು ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸೇರಿ ಹೇಮಂತ್ ಸೊರೆನ್ ಅವರನ್ನು ಭೇಟಿಯಾಗುವುದಾಗಿ ಸೊರೆನ್ ಹೇಳಿದ್ದಾರೆ. ಅವರು ಹೇಮಂತ್ ಸೊರೆನ್ ಮತ್ತು ಜಾರ್ಖಂಡ್‌ನಲ್ಲಿ ಅವರು ಕೈಗೊಂಡ ಕೆಲಸಗಳನ್ನು ಶ್ಲಾಘಿಸಿದರು. ಸೊರೆನ್ ತಮ್ಮ ಹಿಂದಿನ ಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾಕ್ಕೆ ಮರಳಲು ಬಯಸಿದ್ದಾರೆ ಎಂದು…

Read More

Fact Check : ರಾಹುಲ್ ಗಾಂಧಿಗೆ ಕೇಜ್ರಿವಾಲ್‌ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ ಎಂಬುದು ಸುಳ್ಳು

ಜಾರ್ಖಂಡ್‌ನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ ಎಂಬ  ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಕಾರ್ಯಾಧ್ಯಕ್ಷ ಹೇಮಂತ್ ಸೊರೆನ್ ಅವರು 14ನೇ ಮುಖ್ಯಮಂತ್ರಿಯಾಗಿ 2024ರ ನವೆಂಬರ್ 28ರಂದು ರಾಂಚಿಯ ಮೊರ್ಹಬಾದಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಎಎಪಿ…

Read More
ಬರಾಕ್‌ ಒಬಾಮ

Fact Check: ಬರಾಕ್‌ ಒಬಾಮ ಅವರು ತಮ್ಮ ಆತ್ಮಚರಿತ್ರೆ ʼಎ ಪ್ರಾಮಿಸ್ಡ್‌ ಲ್ಯಾಂಡ್‌ʼ ನಲ್ಲಿ ಕಾಂಗ್ರೆಸ್‌ ನಾಯಕರನ್ನು ಟೀಕಿಸಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವರದಿಯೊಂದು ವೈರಲ್‌ ಆಗುತ್ತಿದ್ದು ಅದರಲ್ಲಿ “ಅಮೇರಿಕಾದ ಮಾಜಿ ಅಧ್ಯಕ್ಷ ಬಾರಕ್‌ ಒಬಾಮ ಅವರು ತಮ್ಮ ಆತ್ಮಚರಿತ್ರೆ “ಎ ಪ್ರಾಮಿಸ್ಡ್‌ ಲ್ಯಾಂಡ್‌” ನಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ನಾಯಕ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ್ದಾರೆ ಮತ್ತು ಕಾಂಗ್ರೆಸ್‌ ಪಕ್ಷ ಭಾರತದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಪುಸ್ತಕದಲ್ಲಿ ಆರೋಪಿಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವವರು “ಬರಾಕ್ ಒಬಾಮ ಅವರು ತಮ್ಮ “ದಿ ಪ್ರಾಮಿಸ್ಡ್ ಲ್ಯಾಂಡ್”…

Read More
ರಾಹುಲ್ ಗಾಂಧಿ

Fact Check: ಇಂಡಿಯಾ ಟುಡೇ ನಿಯತಕಾಲಿಕೆ ರಾಹುಲ್ ಗಾಂಧಿ ಕುರಿತ ಮುಖಪುಟ ವರದಿಗಳನ್ನು ಪ್ರಕಟಿಸಿಲ್ಲ

ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ-ಶಿವಸೇನೆ-ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮೈತ್ರಿಕೂಟವಾದ ಮಹಾಯುತಿ 235 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಕೇವಲ 49 ಸ್ಥಾನಗಳನ್ನು ಗೆದ್ದಿವೆ. ಕಾಂಗ್ರೆಸ್ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಈ ಆಘಾತಕಾರಿ ಸೋಲಿನ ನಂತರ, ಇಂಡಿಯಾ ಟುಡೇ ನಿಯತಕಾಲಿಕದ ಇತ್ತೀಚಿನ ಮುಖಪುಟ ರಾಹುಲ್‌ ಗಾಂಧಿಯ ಪೋಟೋವನ್ನು ಒಳಗೊಂಡಿದೆ ಎಂದು ಹೇಳಲಾದ ಎರಡು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಮುಖಪುಟಗಳು ಕಾಂಗ್ರೆಸ್ ನಾಯಕ ಮತ್ತು…

Read More