Fact Check: ರಾಹುಲ್ ಗಾಂಧಿ ಅನೇಕ ಮಹಿಳೆಯರ ಜೊತೆಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂಬುದು ಸುಳ್ಳು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕುರಿತು ವಿರೋಧ ಪಕ್ಷದ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಬೆಂಬಲಿಗರು ಪ್ರತಿದಿನವೂ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಹಾಗೆಯೇ ಜವಹರಲಾಲ್ ನೆಹರೂ ಅವರ ಕುಟುಂಬದ ಎಲ್ಲಾ ಸದಸ್ಯರ ಮೇಲೂ ಸಹ ನಿರಂತರವಾದ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರ ತೇಜೋವದೆಯನ್ನು ಮಾಡಲಾಗುತ್ತಿದೆ. ಈ ಹಿಂದೆ ನೆಹರೂ ಅವರ ಕುಟುಂಬ ಮೂಲತಃ ಮುಸ್ಲಿಂ ಕುಟುಂಬ. ಅವರ ತಂದೆಯ ಹೆಸರು ಮುಬಾರಕ್ ಅಲಿ ಎಂದು ತಾಯಿಯ ಹೆಸರು ತುಸು ರೆಹಮಾನ್ ಬಾಯಿ ಎಂದು ಎಂಬ…
