FACT CHECK : ಮಹಾರಾಷ್ಟ್ರ ಚುನಾವಣೆಯಲ್ಲಿ ‘ವೋಟ್ ಜಿಹಾದ್’ ಎಂದು 2019ರ ಫೋಟೋ ಹಂಚಿಕೊಳ್ಳಲಾಗುತ್ತಿದೆ
ಮಹಾರಾಷ್ಟ್ರದಲ್ಲಿ ಒಂದೆಡೆ ನವೆಂಬರ್ 20ರಂದು ಜನರು ತಮ್ಮ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಿದ್ದರೆ, ಮತ್ತೊಂದೆಡೆ ಬುರ್ಖಾ ಮತ್ತು ಹಿಜಾಬ್‌ಗಳನ್ನು ಧರಿಸಿರುವ ಮಹಿಳೆಯರು ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವ ಎರಡು ಚಿತ್ರಗಳನ್ನು ಹೊಂದಿರುವ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಎಕ್ಸ್ ಹ್ಯಾಂಡಲ್‌ನಲ್ಲಿ ಈ ಚಿತ್ರಗಳನ್ನು “ಮಹಾರಾಷ್ಟ್ರದಲ್ಲಿ ಆಗುತ್ತಿರುವ ‘ವೋಟ್ ಜಿಹಾದ್’ಗೆ ಸಾಕ್ಷಿ ಇದು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ” ಎಂದು ಹಿಂದೂ ಸಮುದಾಯವನ್ನು ಒತ್ತಾಯಿಸಿದ್ದಾರೆ. ಇದೇ ಫೋಟೋಗಳನ್ನು ಬಳಸಿ ಎಕ್ಸ್‌ನಲ್ಲಿ ಇತರೆ ಬಳಕೆದಾರರು…
