Fact Check | ಬಾಂಗ್ಲಾದೇಶದಲ್ಲಿ ಹುಲಿ ಮಾರುಕಟ್ಟೆ ಇದೆ ಎಂದು AI ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ವರದಿಗಾರನೊಬ್ಬ “ಹುಲಿ ಮಾರುಕಟ್ಟೆ”ಯನ್ನು ವರದಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲಿ ಹುಲಿಗಳನ್ನು ಮಾರಾಟ ಮಾಡಲು ಜನರು ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದು. ಈ ಮಾರುಕಟ್ಟೆ ಬಾಂಗ್ಲಾದೇಶದ ಬಾಗರ್‌ಹ್ಯಾಟ್‌ನಲ್ಲಿದೆ ಮತ್ತು ಅಲ್ಲಿ ರಾಯಲ್ ಬಂಗಾಳ ಹುಲಿಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಈ ವೈರಲ್ ವಿಡಿಯೋವನ್ನು ನಿಜವೆಂದು ನಂಬಿರುವ ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಬಾಂಗ್ಲಾದೇಶದಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಅಲ್ಲಿ ರಹಸ್ಯವಾಗಿ ಹುಲಿಗಳನ್ನು ಪಳಗಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಹಲವರು…
