Fact Check | ಕೇರಳದ ಶಬರಿ ಮಲೆಯಲ್ಲಿ ಇಸ್ಲಾಮಿಕ್‌ ಹಾಡುಗಳನ್ನು ಹಾಡಲಾಗುತ್ತಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಹಿಂದೂ ಉಡುಗೆ ತೊಟ್ಟಿರುವ ಕೆಲವರು ಇಸ್ಲಾಮಿಕ್ ಹಾಡುಗಳನ್ನು ಹಾಡುತ್ತಿರುವುದನ್ನು ಕಾಣಬಹುದು. ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಈ  ಇಸ್ಲಾಮಿಕ್ ಹಾಡುಗಳನ್ನು ಹಾಡಲಾಗುತ್ತಿದೆ ಎಂದು ಹೇಳುವ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಹಲವಾರು ಮಂದಿ ವಿವಿಧ ಬರಹಗಳೊಂದಿಗೆ ವೈರಲ್‌ ವಿಡಿಯೋ ಕುರಿತು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. यह केरल का सबरीमाला मंदिर है जहां भगवान का नहीं अल्लाह और अकबर के गुणगान हो…

Read More

Fact Check | ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಪ್ರಸಾದ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ), ಇತ್ತೀಚೆಗೆ ವಿರೋಧ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ” ತಿರುಮಲದ ಲಡ್ಡು ಇವರಿಗೆ ವಾಸನೆ ಬರುತ್ತದೆ. ಇವರು ಮನೆಯಲ್ಲಿಯೇ ದೇವಸ್ಥಾನವನ್ನು ನಿರ್ಮಿಸಿಕೊಂಡಿದ್ದು, ಅಲ್ಲಿ ತೀರ್ಥವನ್ನು ಕೊಟ್ಟರೆ, ಕುಡಿದಂತೆ ನಟಿಸಿ, ಎಸೆಯುತ್ತಾರೆ. ಈ ಜಗನ್‌ ಮೋಹನ್‌ ರೆಡ್ಡಿ ಕಳೆದ 5 ವರ್ಷಗಳಿಂದ ದೇವರನ್ನು ಅಪವಿತ್ರಗೊಳಿಸಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. తిరుమల లడ్డూ…

Read More

Fact Check | ಪಾಕಿಸ್ತಾನದಲ್ಲಿನ ಪ್ರವಾಹದ ವಿಡಿಯೋವನ್ನು ಆಂಧ್ರಪ್ರದೇಶದ್ದು ಎಂದು ಸುಳ್ಳು ಮಾಹಿತಿ ಹಂಚಿಕೆ

“ಈ ವಿಡಿಯೋ ನೋಡಿ ಇದು ಆಂಧ್ರಪ್ರದೇಶದಲ್ಲಿನ ವಿಜಯವಾಡದ ಪರಿಸ್ಥಿತಿ. ಅಲ್ಲಿ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಜನಸಾಮಾನ್ಯರು ಪರದಾಡುವಂತಾಗಿದೆ. ತಮ್ಮ ಜೀವವನ್ನು ಉಳಿಸಿಕೊಳ್ಳಲು ಪ್ರವಾಹ ಪೀಡಿತ ನೀರು ತುಂಬಿದ ಸ್ಥಳದಲ್ಲಿಯೇ ಜನರು ನಡೆದುಕೊಂಡು ಹೋಗುತ್ತಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೂಡ ಜನರು ನೀರಿನ ಮಧ್ಯೆ ಇರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಕೂಡ ಹಂಚಿಕೊಂಡು, ಆಂಧ್ರಪ್ರದೇಶದಲ್ಲಿ ಭೀಕರವಾದ ಮಳೆಯಿಂದಾಗಿ ಜನರು ಪರದಾಡುತ್ತಿದ್ದಾರೆ….

Read More
ಹಿಂದೂ

Fact Check: ಆಂಧ್ರ ಪ್ರದೇಶದಲ್ಲಿ ನಡೆದ ಕೊಲೆಯನ್ನು ದೆಹಲಿಯ ರಸ್ತೆ ಮಧ್ಯದಲ್ಲಿ ಹಿಂದೂ ಒಬ್ಬನನ್ನು ಮುಸ್ಲಿಂ ವ್ಯಕ್ತಿ ಕೊಂದಿದ್ದಾನೆ ಎಂದು ಹಂಚಿಕೆ

ದೆಹಲಿಯ ಸರಾಯ್ ಕಾಲೆ ಖಾನ್ ಪ್ರದೇಶದಲ್ಲಿ ರಸ್ತೆಯೊಂದರ ಮಧ್ಯದಲ್ಲಿ ಒಬ್ಬ ಹಿಂದೂವನ್ನು ಮುಸ್ಲಿಂ ಕೊಂದಿದ್ದಾನೆ ಎಂಬ ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ವ್ಯಕ್ತಿಯೊಬ್ಬ ಇನ್ನೊಬ್ಬನನ್ನು ಹತ್ಯೆ ಮಾಡುವ ವೀಡಿಯೊವನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯನ್ನು ರಸ್ತೆಯ ಮಧ್ಯದಲ್ಲಿ ಹರಿತವಾದ ಆಯುಧದಿಂದ ಕ್ರೂರವಾಗಿ ಹೊಡೆಯುವುದನ್ನು ಕಾಣಬಹುದು, ಇದರ ಪರಿಣಾಮವಾಗಿ ಸಂತ್ರಸ್ತೆಯ ಕೈ ಕತ್ತರಿಸಲಾಗಿದೆ. ವೀಡಿಯೊದ ಹಿಂಸಾತ್ಮಕ ಸ್ವರೂಪದಿಂದಾಗಿ  ಪೋಸ್ಟ್ ಗಳನ್ನು ಸೇರಿಸದಿರಲು ನಿರ್ಧರಿಸಿದೆ. ಈ ವೀಡಿಯೊವನ್ನು ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, “ಈ ಘಟನೆ…

Read More

Fact Check | ಆಂಧ್ರಪ್ರದೇಶದಲ್ಲಿ ಜಾವೇದ್‌ನಿಂದ ರೋಹಿತ್ ಕೊ*ಲೆ ಎಂಬುದು ಸುಳ್ಳು – ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಸಮುದಾಯದವರು

ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಮೇಲೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಜಾವೇದ್ ಎಂಬ ಮುಸ್ಲಿಂ ವ್ಯಕ್ತಿ ರೋಹಿತ್ ಎಂಬ ಹಿಂದೂ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ” ಎಂದು ಹಂಚಿಕೊಳ್ಳಲಾಗುತ್ತಿದ್ದು,  ದೆಹಲಿಯ ಸರೈ ಕಾಲೇ ಖಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋದ ಟಿಪ್ಪಣಿಯಲ್ಲಿ ಬರೆಯಲಾಗಿದೆ. ಹೀಗಾಗಿ ಈ ವಿಡಿಯೋ ವೈರಲ್‌ ಕೂಡ ಆಗಿದೆ. यह घटना दिल्ली सरायकाले खां की पता चल…

Read More

Fact Check | ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಆಂಧ್ರಪ್ರದೇಶದ ಗುಡೂರಿನಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಂಧ್ರಪ್ರದೇಶದಲ್ಲಿ ಈಗ ಪೊಲೀಸರಿಗೂ ರಕ್ಷಣೆ ಇಲ್ಲ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡ ಇನ್ನೂ ಕೆಲವರು  ಜಗನ್‌ ಮೋಹನ್‌ ರೆಡ್ಡಿ ಅವರ ವಿರುದ್ಧ ಕೂಡ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. https://www.youtube.com/watch?v=B8uqcFeaPiI ಇನ್ನು ವಿಡಿಯೋ ನೋಡಿದ ಹಲವರು ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ನಿಜವಾಗಿಯೂ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರೇ…

Read More
ಪವನ್ ಕಲ್ಯಾಣ್

Fact Check: ಆಂಧ್ರಪ್ರದೇಶದ ಸ್ಪೀಕರ್ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಟೀಕಿಸಿದ್ದಾರೆ ಎಂಬುದು ಸುಳ್ಳು

ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖಂಡ ಅಯ್ಯಣ್ಣ ಪತ್ರುಡು ಚಿಂತಕಯಾಲ ಅವರ ವೀಡಿಯೊ ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕೆಲವು ಬಳಕೆದಾರರು ಅವರು ರಾಜ್ಯದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಟೀಕಿಸುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡರೆ, ಇತರರು ಅಯ್ಯಣ್ಣ ಪತ್ರುಡು ಅವರು ಕಸದ ಮೇಲೆ ತೆರಿಗೆ ವಿಧಿಸಿದ್ದಕ್ಕಾಗಿ ಸಮ್ಮಿಶ್ರ ಸರ್ಕಾರವನ್ನು ಟೀಕಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ. చెత్త మీద ₹90 పన్ను విధించిన కూటమి ప్రభుత్వం! pic.twitter.com/XMtq8MB6n8 — YSRCP Brigade (@YSRCPBrigade) July…

Read More

Fact Check: ಆಂಧ್ರಪ್ರದೇಶದ ಗುಂಟೂರಿನ ಹಳೆಯ ವೀಡಿಯೊವನ್ನು ಕೇರಳದಲ್ಲಿ ದೇವಾಲಯವನ್ನು ಹೊಡೆದುಹಾಕಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಆಂಧ್ರಪ್ರದೇಶದ ಗುಂಟೂರಿನಲ್ಲಿ ದರ್ಗಾವನ್ನು ನೆಲಸಮಗೊಳಿಸಿದ ಹಳೆಯ ಘಟನೆಯ ವೀಡಿಯೊ ವೈರಲ್ ಆಗಿದ್ದು, ಕೇರಳದಲ್ಲಿ ದೇವಾಲಯವನ್ನು ನೆಲಸಮಗೊಳಿಸಲಾಗಿದೆ ಎಂಬ ನಕಲಿ ಮತ್ತು ಕೋಮುವಾದಿ ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ. ಕೇರಳದಲ್ಲಿ ಮುಸ್ಲಿಂ ಸಮುದಾಯದ ಜನರು ದೇವಾಲಯವನ್ನು ನೆಲಸಮಗೊಳಿಸಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊದಲ್ಲಿ, ಕೆಲವರು ಕಾಂಪೌಂಡ್‌ನ ಬಾಗಿಲು ಮುರಿಯುವುದನ್ನು ಕಾಣಬಹುದು. ‘ರಾಜ ಸೋಲಂಕ್’ ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ವೈರಲ್ ವೀಡಿಯೊವನ್ನು (ಆರ್ಕೈವ್ ಲಿಂಕ್) ಹಂಚಿಕೊಂಡು, “ಇದು ಕೇರಳದ ಪರಿಸ್ಥಿತಿ… ಹಿಂದೂಗಳು ಬಯಸಿದರೂ ತಮ್ಮ ದೇವಾಲಯಗಳನ್ನು ಉಳಿಸಲು…

Read More
Andra Pradesh

Fact Check: ಆಂಧ್ರಪ್ರದೇಶದಲ್ಲಿ NDA ಒಕ್ಕುಟ ಮುನ್ನಡೆ ಸಾಧಿಸಲಿದೆ ಎಂದು ಸುಳ್ಳು ಸಮೀಕ್ಷೆಯ ವರದಿ ಹಂಚಿಕೆ

ಆಂಧ್ರಪ್ರದೇಶದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ ಹಲವಾರು ಸುದ್ದಿ ಮಾಧ್ಯಮಗಳ ವರದಿಯನ್ನು ನ್ಯೂಸ್ ಮಿನಿಟ್‌ ಒಟ್ಟಾಗಿ ನೀಡಿದೆ ಎನ್ನಲಾದ ಪೋಸ್ಟರ್‌ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ನ್ಯೂಸ್ ಮಿನಟ್‌ ಲೋಗೋ ಇದ್ದು, ಡಿಯಾ ಟುಡೆ-ಆಕ್ಸಿಸ್, CNN ನ್ಯೂಸ್ 18-IPSOS, ಟೈಮ್ಸ್ ನೌ-VMR, ರಿಪಬ್ಲಿಕ್-ಜಾನ್ ಕಿ ಬಾತ್, ರಿಪಬ್ಲಿಕ್-CVoter, NewsX-NEΤΑ ಮತ್ತು ಟುಡೇಸ್ ಚಾಣಕ್ಯ ಮುಂತಾದ ಹಲವಾರು ಸಂಸ್ಥೆಗಳ ಚುನಾವಣಾ ಭವಿಷ್ಯವನ್ನು ಈ ಪೋಸ್ಟರ್‌ನಲ್ಲಿ ಪಟ್ಟಿ ಮಾಡಲಾಗಿದೆ. ಎಲ್ಲಾ ಸಮೀಕ್ಷೆಗಳಲ್ಲಿ, ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಯುವಜನ ಶ್ರಮಿಕ ರೈತ…

Read More