Fact Check | ರೇಖಾ ಗುಪ್ತಾ ಅವರು ದೆಹಲಿ ಮುಖ್ಯಮಂತ್ರಿ ಆದ 48 ಗಂಟೆಗಳಲ್ಲಿ 50 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ್ದಾರೆ ಎಂಬುದು ಸುಳ್ಳು

ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮುಖ್ಯಮಂತ್ರಿಯಾದ 48 ಗಂಟೆಗಳಲ್ಲಿ 50 ಲಕ್ಷ ರೂ. ಮೌಲ್ಯದ ಕಾರನ್ನು ಖರೀದಿಸಲಾಗಿದೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಲವು ಬಳಕೆದಾರರು ಈ ಕುರಿತು ವ್ಯಾಪಕವಾಗಿ ಟೀಕೆ ಮಾಡುತ್ತಿದ್ದಾರೆ. CM बनने के 48 घंटे के भीतर 50 लाख की कार मुख्यमंत्री रेखा गुप्ता 'शीश महल' नहीं जाएंगीसड़क पर ही 'शीश महल' बनवाएंगी।नई…

Read More

Fact Check | ದೆಹಲಿಯಲ್ಲಿ ಬಿಜೆಪಿ ಗೆಲುವಿನ ನಂತರ ಮೊದಲ ಬಾರಿಗೆ ಯಮುನಾ ಆರತಿ ನೆರವೇರಿದೆ ಎಂಬುದು ಸುಳ್ಳು

“ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಸಾಕಷ್ಟು ಬದಲಾವಣೆಗಳನ್ನು ದೆಹಲಿಯಲ್ಲಿ ಮಾಡುತ್ತಿದೆ. ಈಗ ದೆಹಲಿ ಮರಳಿ ತನ್ನ ಗತವೈಭವವನ್ನು ಪಡೆದುಕೊಳ್ಳುತ್ತಿದೆ. ಈಗ ದೆಹಲಿಯಲ್ಲಿ ಯಮುನಾ ಆರತಿ ಆರಂಭವಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು.” ಎಂದು ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ದೆಹಲಿ ಮತ್ತೊಮ್ಮೆ ಇಂದ್ರಪ್ರಸ್ಥದತ್ತ ಸಾಗುತ್ತಿದೆ..‌.❤️ ಕೇಜ್ರಿವಾಲ್ ನನ್ನು ದೂರವಿಟ್ಟು ಇನ್ನು ಒಂದು ವಾರವೂ ಕಳೆದಿಲ್ಲ, ಇಂದು ದೆಹಲಿಯ ಘಾಟ್‌ಗಳಲ್ಲಿ ಯಮುನಾ ಆರತಿ ಪ್ರಾರಂಭವಾಗಿದೆ…💓🙏🚩 pic.twitter.com/bDA7ULn8sW — ಶ್ರೇಯಾ🚩🚩🚩Shreya🌹❤️🇮🇳श्रेया 🚩🚩🚩 (@Shreya_Sanatani) February 13, 2025…

Read More

Fact Check | ದೆಹಲಿ ಚುನಾವಣಾ ಫಲಿತಾಂಶದ ನಂತರ AIMIM ಅಭ್ಯರ್ಥಿ ತಾಹಿರ್ ಹುಸೇನ್ ಮೆರವಣಿಗೆ ನಡೆಸಿದ್ದಾರೆ ಎಂಬುದು ಸುಳ್ಳು

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ, ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದ AIMIM ಅಭ್ಯರ್ಥಿ ತಾಹಿರ್ ಹುಸೇನ್, ಚುನಾವಣೆಯಲ್ಲಿ ಸೋತಿದ್ದರೂ ಮೆರವಣಿಗೆ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಹೀಗಾಗಿ ಹಲವರು ತಾಹಿರ್‌ ಹುಸೇನ್‌ ಅವರು ಬಿಜೆಪಿಗೆ ರಹಸ್ಯವಾಗಿ ಬೆಂಬಲ ನೀಡಿದ್ದಾರೆ. ದೆಹಲಿ ರಾಜಕಾರಣದಲ್ಲಿ ಹುಸೇನ್‌ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ.  दिल्ली दंगों का आरोपी ताहिर हुसैन को मुस्तफ़ाबाद के लोगों ने ३०…

Read More

Fact Check | ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ಸೋತರೂ ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

ಫೆಬ್ರವರಿ 5 ರಂದು ನಡೆದ 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ,  ಬಿಜೆಪಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಜಯ ಸಾಧಿಸಿತು. ಈ ಮೂಲಕ 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ.  2015 ರಿಂದ ಅಧಿಕಾರದಲ್ಲಿದ್ದ ಆಮ್ ಆದ್ಮ ಪಕ್ಷ (ಎಎಪಿ) 22 ಸ್ಥಾನಗಳನ್ನು ಗೆದ್ದಿದೆ  ಕಾಂಗ್ರೆಸ್ ಸತತ ಮೂರನೇ ಅವಧಿಗೆ ಯಾವುದೇ ಸ್ಥಾನಗಳನ್ನು ಗಳಿಸಲಿಲ್ಲ. ಹೀಗಿರುವಾಗ ಈಗ ದೆಹಲಿಯಲ್ಲಿ ಕಾಂಗ್ರೆಸ್‌ ನಾಯಕರು ಹೀನಾಯವಾಗಿ ಸೋತರು ಸಂಭ್ರಮಿಸಿದ್ದಾರೆ ಎಂದು…

Read More

FACT CHECK | ಕೇಜ್ರಿವಾಲ್ & ಅತಿಶಿ ನಾಮಫಲಕಕ್ಕೆ ಮಹಿಳೆಯರು ಮಸಿ ಬಳಿದ ಹಳೆಯ ವಿಡಿಯೋವನ್ನು ದೆಹಲಿ ಚುನಾವಣೆಯದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

2025ರ ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರವರಿ 5ರಂದು ಮತದಾನ ನಡೆಯಿತು.  ಈ ನಡುವೆ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಅವರ ನಾಮಫಲಕಗಳಿಗೆ ಕೆಲವು ಮಹಿಳೆಯರು ಕಪ್ಪು ಬಣ್ಣ ಬಳಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಬಳಕೆದಾರರು ಈ ವಿಡಿಯೋವನ್ನು ಇತ್ತೀಚಿನದು ಎಂದು ಹಂಚಿಕೊಳ್ಳುತ್ತಿದ್ದಾರೆ. ಎಕ್ಸ್ ಬಳಕೆದಾರ ಓಷನ್ ಜೈನ್  2025ರ ಫೆಬ್ರವರಿ 5ರಂದು ಈ  ವಿಡಿಯೋವನ್ನು ” ದೆಹಲಿಯ…

Read More
ಕೇಜ್ರಿವಾಲ್

Fact Check: ಯಮುನಾ ನದಿಯನ್ನು ಸ್ವಚ್ಚಗೊಳಿಸುವ ಕುರಿತಂತೆ ಅರವಿಂದ್‌ ಕೇಜ್ರಿವಾಲ್‌ ಅವರ ಎಡಿಟೆಡ್‌ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಅವರು ವೇದಿಕೆಯ ಮೇಲೆ ಕಾಣಿಸಿಕೊಂಡಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಭೆಯನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಭಾರದ್ವಾಜ್ ಸಭೆಗೆ ಸಿರಿಯನ್ನು ಪರಿಚಯಿಸುತ್ತಾರೆ, ಪ್ರಶ್ನೆಗಳಿಗೆ ಉತ್ತರಿಸಲು ಚಾಟ್ ಜಿಪಿಟಿಯನ್ನು ಬಳಸುತ್ತಿದ್ದೇನೆ ಎಂದು ಹೇಳುತ್ತಾರೆ. ನಂತರ ಅವರು ಸಿರಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ: “ಯಮುನಾ ನದಿಯನ್ನು ಐದು ವರ್ಷಗಳಲ್ಲಿ ಸ್ವಚ್ಛಗೊಳಿಸಲಾಗುವುದು ಎಂದು ಯಾರು ಭರವಸೆ ನೀಡಿದರು?” ಇದಕ್ಕೆ ಪ್ರತಿಕ್ರಿಯಿಸಿದ ಸಿರಿಯ ಧ್ವನಿ, “ಅರವಿಂದ್ ಕೇಜ್ರಿವಾಲ್…

Read More
ದೆಹಲಿ

Fact Check: ದೆಹಲಿಯ ರಸ್ತೆಗಳ ಪರಿಸ್ಥಿತಿ ಎಂದು ಹರಿಯಾಣದ ರಸ್ತೆಯ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್

ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ದೆಹಲಿಯ ರಸ್ತೆಗಳ ಸಧ್ಯದ ಪರಿಸ್ಥಿತಿಯನ್ನು ತೋರಿಸುವ ಮೂಲಕ ಅವರವಿಂದ್‌ ಕೇಜ್ರಿವಾಲ್‌ ಅವರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದೆ. ಈ ವಿಡಿಯೋದಲ್ಲಿ ಇಬ್ಬರು ಯುವತಿಯರು ಕುಳಿತಿರುವ ಆಟೋ ನೀರು ತುಂಬಿದ ಗುಂಡಿಬಿದ್ದ ರಸ್ತೆಯಲ್ಲಿ ಸಾಗುವುದನ್ನು ನೋಡಬಹುದು. ಇಬ್ಬರು ಯುವತಿಯರು ರಸ್ತೆಯ ದುರಾವಸ್ಥೆಯ ಕುರಿತು ಬೇಸರ ವ್ಯಕ್ತಪಡಿಸುತ್ತಾರೆ. ನಂತರ ಆಟೋ ಚಾಲಕ ಚುನಾವಣೆ ಹತ್ತು ವರ್ಷಗಳ ಹಿಂದೆಯೇ ನಡೆದಿದೆ. ನೋಡಿ ದಿಲ್ಲಿಯನ್ನು ಯಾವ ಸ್ಥಿತಿಗೆ ತಂದುಬಿಟ್ಟರು…

Read More

FACT CHECK : ತಿಹಾರ್ ಜೈಲಿನ ಹೊರಗೆ “ಕೇಜ್ರಿವಾಲ್ ಬರುತ್ತಾರೆ” ಎಂಬ ಬ್ಯಾನರ್‌ ಇದೆ ಎಂದು ಎಡಿಟೆಡ್ ಚಿತ್ರ ಹಂಚಿಕೊಳ್ಳಲಾಗುತ್ತಿದೆ

ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಇಲ್ಲಿನ ಎಲ್ಲಾ 70 ಸ್ಥಾನಗಳಿಗೆ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. ಈ ನಡುವೆ, ತಿಹಾರ್ ಜೈಲಿನ ಹೊರಗೆ “ಕೇಜ್ರಿವಾಲ್ ಬರುತ್ತಾರೆ”(ಕೇಜ್ರಿವಾಲ್ ಆಯೇಂಗೆ) ಎಂದು ಬರೆಯಲಾದ ಬ್ಯಾನರ್‌ನ್ನು ಕಟ್ಟಲಾದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ಫೇಸ್‌ಬುಕ್ ಬಳಕೆದಾರ ಡಾ.ಸತ್ಯಂ ಕುಮಾರ್ ಜನವರಿ 6ರಂದು ಈ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದು,“ತಿಹಾರ್ ಜೈಲಿನ ಹೊರಗೆ ಒಂದು ಬ್ಯಾನರ್ ನೋಡಿದೆ. ಅದರಲ್ಲಿ ಕೇಜ್ರಿವಾಲ್ ಮತ್ತೆ ಬರುತ್ತಾರೆ ಎಂದು…

Read More

Fact Check | ಡಾ.ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನ ರಚಿಸುವಾಗ ಮಧ್ಯಪಾನ ಮಾಡಿ ರಚಿಸಿದ್ದರು ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿಲ್ಲ

ಅಂಬೇಡ್ಕರ್ ವಿವಾದಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅರವಿಂದ್ ಕೇಜ್ರಿವಾಲ್ ನಿರಂತರವಾಗಿ ಭಾರತೀಯ ಜನತಾ ಪಕ್ಷವನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಅರವಿಂದ್ ಕೇಜ್ರಿವಾಲ್ ಅವರ ವೀಡಿಯೊ ಕ್ಲಿಪ್‌ವೊಂದು ಸಾಮಾಜಿಕ ಮಾಧ್ಯಮಗಳ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅವರು “ಸಂವಿಧಾನವನ್ನು ಯಾರು ಬರೆದಿದ್ದಾರೆ?, ಅವರು ಅದನ್ನು ಮದ್ಯಪಾನ ಮಾಡಿದ ನಂತರ ಬರೆದಿರಬೇಕು” ಎಂದು ಹೇಳಿಕೆ ನೀಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. BR Ambedkar was drunk while writing the Constitution: @ArvindKejriwal He…

Read More

Fact Check | ಮುಸ್ಲಿಮರ ಓಲೈಕೆ ಮಾಡಿದ್ದಕ್ಕೆ ಆಪ್‌ ನಾಯಕರ ಮೇಲೆ ದೆಹಲಿಯ ನಾಗರಿಕರ ಹಲ್ಲೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಮುಸಲ್ಮಾನರ ಓಲೈಕೆ ಮಾಡಿದ ಕಾರಣ ದೆಹಲಿಯ ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಹಿಂದೂಗಳ ಕಡೆಗಣನೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡು, ಅವರ ಮೇಲೆ ಹಲ್ಲೆಯನ್ನು ಕೂಡ ಮಾಡಿದ್ದಾರೆ. ದೆಹಲಿಯ ಹಿಂದೂಗಳು ಎಚ್ಚೆತ್ತುಕೊಂಡ ಹಾಗೆ ದೇಶದ ಎಲ್ಲಾ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ನಾಯಕರು ಮುಸ್ಲಿಮರ ಓಲೈಕೆ ಮಾಡಲು ಮುಂದಾದರೆ ಅವರಿಗೂ ಇದೇ ಗತಿ ಎಂಬುದನ್ನ ಸಾರಿ ಹೇಳಬೇಕಾಗಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. 👌👌👌 अच्छी…

Read More