Fact Check | ಬಾಂಗ್ಲಾದೇಶದ ಶಿಥಿಲಗೊಂಡ ಸೇತುವೆಯ ಫೋಟೋವನ್ನು ಗುಜರಾತ್‌ನದ್ದು ಎಂದು ತಪ್ಪಾಗಿ ಹಂಚಿಕೆ
ಶಿಥಿಲಗೊಂಡ ಸೇತುವೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, “ಇದು ಪ್ರಧಾನಿ ಮೋದಿವರು ಗುಜರಾತ್ ಮಾಡಲ್, ಗುಜರಾತ್‌ನಲ್ಲಿ ಮಾತ್ರ ಇಂತಹ ಸೇತುವೆಗಳನ್ನು ನೋಡಲು ಸಾಧ್ಯ, ಈ ರೀತಿಯ ಸೇತುವೆಗಳನ್ನು ಮೋದಿ ಸರ್ಕಾರ ಮಾತ್ರ ನಿರ್ಮಿಸಲು ಸಾಧ್ಯವಾಗಿದೆ. ಇದು ನವ ಭಾರತ” ಎಂದು ಹಲವರು ಈ ಫೋಟೋವನ್ನು ಹಂಚಿಕೊಂಡು ವ್ಯಂಗ್ಯವಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋವನ್ನು ಬಳಸಿಕೊಂಡು ಇನ್ನು ಕೆಲವರು ಇದು ಕೇರಳದ ಫೋಟೋ ಎಂದು ಹಂಚಿಕೊಂಡಿರೆ…
