Fact Check: ನೆಹರು, ಇಂದಿರಾ ಗೆಲುವಿನ ಅಂತರವನ್ನು ಮೋದಿಯವರ ಗೆಲುವಿನ ಅಂತರದೊಂದಿಗೆ ಹೋಲಿಸುವುದು ಸೂಕ್ತವಲ್ಲ
2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು 04 ಜೂನ್ 2024 ರಂದು ಪ್ರಕಟಿಸಲಾಯಿತು. ಬಿಜೆಪಿ 240 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ NDA ಸಮ್ಮಿಶ್ರವು 293 ಸ್ಥಾನಗಳನ್ನು ಪಡೆದುಕೊಂಡು 09 ಜೂನ್ 2024 ರಂದು ಸರ್ಕಾರವನ್ನು ರಚಿಸಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಿ 1.52 ಲಕ್ಷ ಮತಗಳ ಬಹುಮತದಿಂದ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಧಾನಿಯಾಗಿ ವಿವಿಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ…