
Fact Check: ಪ್ಯೂರಿಫೈಯರ್ ನೀರು ಕುಡಿಯಬಾರದು ಅದರಲ್ಲಿ ಖನಿಜಗಳು ಇರುವುದಿಲ್ಲ ಎಂಬುದು ಸುಳ್ಳು
ವ್ಯಕ್ತಿಯೊಬ್ಬರು ಆರ್‌ಒ ನೀರು, ನಲ್ಲಿ ನೀರು, ಹಾಲು ಮತ್ತು ಮೊಸರಿನ ಸಹಾಯದಿಂದ ಬಲ್ಬ್ ಅನ್ನು ಬೆಳಗಿಸುವ ಪ್ರಯೋಗವನ್ನು ಮಾಡುತ್ತಿರುವ ವಿಡಿಯೋವನ್ನುಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಎರಡು ಸಂಪರ್ಕಿತ ತಂತಿಗಳನ್ನು ಹಾಲು ಮತ್ತು ಮೊಸರಿನಲ್ಲಿ ಮುಳುಗಿಸಿದಾಗ ಬಲ್ಬ್ ಪ್ರಕಾಶಮಾನವಾಗಿ ಬೆಳಗುತ್ತದೆ ಆದರೆ ತಂತಿಗಳನ್ನು RO (Reverse osmosis) ನೀರಿನಲ್ಲಿ ಮುಳುಗಿಸಿದಾಗ ಅದು ಬೆಳಗುವುದಿಲ್ಲ ಏಕೆಂದರೆ ಅದರಲ್ಲಿ ‘ಖನಿಜಗಳಿಲ್ಲ’ ಎಂದು ಆ ವ್ಯಕ್ತಿ ಹೇಳುತ್ತಾರೆ. RO ನೀರು ‘ಕುಡಿಯಲು ಆರೋಗ್ಯಕರವಲ್ಲ’ ಎಂದು ಈ ಪ್ರಯೋಗವು ಸಾಬೀತುಪಡಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಫ್ಯಾಕ್ಟ್ ಚೆಕ್: ಈ ವಿಡಿಯೋ ತಪ್ಪುದಾರಿಗೆಳೆಯುತ್ತದೆ…