Fact Check | ಬಾಂಗ್ಲದೇಶದಲ್ಲಿ ಹಿಂದೂ ಮಹಿಳೆಯನ್ನು ಕೊ*ಲೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿಯ ಪೋಸ್ಟ್ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ನೆಲದ ಮೇಲೆ ಎಸೆಯಲಾಗಿರುವ ಮಹಿಳೆಯೊಬ್ಬರ ಶವ ಕಂಡು ಬಂದಿದೆ.. ಈ ಫೋಟೋವನ್ನು ಹಂಚಿಕೊಂಡಿರುವ ಹಲವರು ಬಾಂಗ್ಲಾದೇಶದಲ್ಲಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲ್ಲಲ್ಪಟ್ಟ ಹಿಂದೂ ಮಹಿಳೆ ಹಿಂದೂ ಮಹಿಳೆಯರು ಬಾಂಗ್ಲಾದೇಶದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕೊಲ್ಲಲ್ಪಡುತ್ತಿದ್ದಾರೆ ಎಂದು ಬರೆದುಕೊಳ್ಳಲಾಗುತ್ತಿದೆ. ಇನ್ನೂ ಕೆಲವರು ‘‘ಇಸ್ಲಾಮಿಕ್ ಆಳ್ವಿಕೆಯಲ್ಲಿ ಬಾಂಗ್ಲಾದೇಶದ ಹಿಂದೂಗಳ ದುಃಸ್ಥಿತಿಯನ್ನು ನೋಡಿ. ಮೊದಲು ಬಿಪ್ನಿ ಬಾಲಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈಗ ಮತ್ತೊಬ್ಬ ವಿವಾಹಿತ ಹಿಂದೂ…
