ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್- ಮಹಿಳೆಗೆ ಬೆಂಕಿ ಹಚ್ಚಿದ್ದಾರೆ ಎಂಬುವುದು ಸುಳ್ಳು, ಈ ವಿಡಿಯೋ ಬಂಗಾಳದ್ದು
ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನಡೆಸಲಾಗಿದೆ, ಹಿಂದೂ ಹುಡುಗಿಗೆ ಬೆಂಕಿ ಹಚ್ಚಿ ಕೊಲೆಗೈದಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹಲವು ವಾಟ್ಸ್‌ಆಪ್‌ಗಳಲ್ಲಿ, ” ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಘಟನೆ, ಹಿಂದೂ ಹೆಣ್ಣು ಮಕ್ಕಳೇ ದಯವಿಟ್ಟು ನೋಡಿ, ನಮ್ಮ ಅಬ್ದುಲ್ಲ ಎಲ್ಲರಂತಲ್ಲ ಎನ್ನುವವರು ನೋಡಿ” ಎಂದು ಇಂಗ್ಲಿಷ್ ಮತ್ತು ಕನ್ನಡ ಮಿಶ್ರಿತ ಬರಹಗಳೊಂದಿಗೆ ವಾಟ್ಸಾಆಪ್‌ಗಳಲ್ಲಿ ಶೇರ್ ಮಾಡಲಾಗುತ್ತಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನ್ನಡ ಫ್ಯಾಕ್ಟ್ ಚೆಕ್ ತಂಡದ…
