Fact Check | ಭಾರತ ಸರ್ಕಾರ ಗೂಗಲ್ ಇನ್ವೆಸ್ಟ್ ಅನ್ನು ಆರಂಭಿಸಿದೆ ಎಂದು ಸುಂದರ್ ಪಿಚೈ ಅವರ ಡೀಪ್‌ಫೇಕ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ಫಸ್ಟ್ ಪೋಸ್ಟ್ ಪತ್ರಕರ್ತೆ ಪಾಲ್ಕಿ ಶರ್ಮಾ ಅವರ ಸುದ್ದಿ ವರದಿಯಂತೆ ಕಾಣುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಗೂಗಲ್, ಭಾರತ ಸರ್ಕಾರದ ಸಹಯೋಗದೊಂದಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲದೊಂದಿಗೆ ‘ಗೂಗಲ್ ಇನ್ವೆಸ್ಟ್’ ಎಂಬ ಹೂಡಿಕೆ ವೇದಿಕೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಭಾರತಕ್ಕೆ ಬಹುದೊಡ್ಡ ಲಾಭವಾಗಲಿದೆ ಎಂಬ ನೀರೂಪಣೆಯನ್ನು ನೀಡಿರುವುದರಿಂದ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಸುಂದರ್ ಪಿಚೈ ‘ಗೂಗಲ್ ಇನ್ವೆಸ್ಟ್’ ಅನ್ನು ಪ್ರಚಾರ ಮಾಡುತ್ತಿರುವುದನ್ನು ಮತ್ತು…
